ಆಜಂ ಖಾನ್ ಗೆ ಮತ್ತಷ್ಟು ಸಂಕಷ್ಟ: .3.27 ಕೋಟಿ ರೂ ದಂಡ

ಸರಣಿ ವಿವಾದಗಳಿಗೆ ಸಿಲುಕಿರುವ ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಆಜಂ ಖಾನ್ ಗೆ ಮತ್ತಷ್ಟು ಸಂಕಷ್ಟ: .3.27 ಕೋಟಿ ರೂ ದಂಡ
ಆಜಂ ಖಾನ್ ಗೆ ಮತ್ತಷ್ಟು ಸಂಕಷ್ಟ: .3.27 ಕೋಟಿ ರೂ ದಂಡ
Updated on
ರಾಮ್ ಪುರ: ಸರಣಿ ವಿವಾದಗಳಿಗೆ ಸಿಲುಕಿರುವ ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. 
ಮೌಲಾನಾ ಜೌಹರ್ ವಿಶ್ವವಿದ್ಯಾನಿಲಯದ ಕುಲಪತಿಯೂ ಆಗಿರುವ ಆಜಂ ಖಾನ್ ಗೆ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆಜಂ ಖಾನ್ ಗೆ 3.27 ಕೋಟಿ ರೂಪಾಯಿ ದಂಡ ವಿಧಿಸಿದೆ. 
ಆಜಂ ಖಾನ್ ಕುಲಪತಿಯಾಗಿರುವ ವಿವಿಯ ಕಟ್ಟಡದ ಭಾಗವೊಂದನ್ನು ಲೋಕೋಪಯೋಗಿ ಇಲಾಖೆಗೆ ಸೇರಿದ ಜಾಗವನ್ನು ಅತಿಕ್ರಮಣ ಮಾಡಿಕೊಂಡು ನಿರ್ಮಾಣ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಆದೇಶ ನೀಡಿದ್ದು, ಅತಿಕ್ರಮಣ ಮಾಡಿದ ಜಾಗದಲ್ಲಿ ನಿರ್ಮಾಣ ಮಾಡಲಾಗಿರುವ ಕಟ್ಟಡವನ್ನು ನೆಲಸಮ ಮಾಡಬೇಕು ಹಾಗೂ ಆಜಂ ಖಾನ್ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವುದಕ್ಕೆ ಪಿಡಬ್ಲ್ಯುಡಿ ಇಲಾಖೆಗೆ 3.27 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಆದೇಶ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com