ಜಾಗತಿಕ ಆರ್ಥಿಕತೆ ಎದುರಿಸುತ್ತಿರುವ ಸವಾಲುಗಳು ಹಾಗೂ ಬಿಕ್ಕಟ್ಟು ಕುರಿತು ಸಭೆ ಚರ್ಚೆ ನಡೆಸುವ ಜೊತೆಗೆ ಮೂಲ ಸೌಕರ್ಯದಲ್ಲಿ ಬಂಡವಾಳ ಹೂಡಿಕೆ, ಅಂತರಾಷ್ಟ್ರೀಯ ತೆರಿಗೆ ಕುರಿತು ಸಮಾಲೋಚನೆ ನಡೆಸುವ ನಿರೀಕ್ಷೆಯಿದೆ. ಹಣಕಾಸು ಸಚಿವರು ಹಾಗೂ ಕೇಂದ್ರೀಯ ಬ್ಯಾಂಕ್ ಗೌರ್ವನರ್ ಗಳ ಸಭೆಯ ನಂತರ ಜೂನ್ 28- 29 ರಂದು ಒಸಾಕದಲ್ಲಿ ಜಿ-20 ದೇಶಗಳ ನಾಯಕರ ಸಭೆ ನಿಗದಿಯಾಗಿದೆ. ಜಿ-20 ಅಭಿವೃದ್ಧಿ ಹೊಂದುತ್ತಿರುವ ಹಾಗೂ ಹೊಂದಿದ ದೇಶಗಳ ಗುಂಪಾಗಿದ್ದು, ಭಾರತ, ಅಮೆರಿಕಾ, ಇಂಗ್ಲೆಂಡ್, ಚೈನಾ, ರಷ್ಯಾ, ಸೌದಿ ಅರೇಬಿಯಾ, ಬ್ರಿಜಿಲ್ , ಫ್ರಾನ್ಸ್ ಹಾಗೂ ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳು ಸದಸ್ಯ ದೇಶಗಳಾಗಿವೆ.