ಅಂತರ್ಜಾತಿ ಯುವಕನ ಜೊತೆ ವಿವಾಹ: ಗರ್ಭಿಣಿಯನ್ನು ಶೂಟ್ ಮಾಡಿ ಕೊಂದ ಸಹೋದರರು!

ಅಂತರ್ಜಾತಿ ಯುವಕನ ಜೊತೆ ಓಡಿ ಹೋಗಿ ಮದುವೆಯಾಗಿದ್ದಕ್ಕೆ ಆಕೆಯ ಸಹೋದರರೇ ಗರ್ಭಿಣಿ ಸಹೋದರಿಯನ್ನು ಶೂಟ್ ಮಾಡಿ ಕೊಲೆ ಮಾಡಿರುವ ಘಟನೆ ...
ಮೃತ ಮಹಿಳೆಯ ಪತಿ
ಮೃತ ಮಹಿಳೆಯ ಪತಿ
Updated on
ಭೋಪಾಲ್: ಅಂತರ್ಜಾತಿ ಯುವಕನ ಜೊತೆ ಓಡಿ ಹೋಗಿ ಮದುವೆಯಾಗಿದ್ದಕ್ಕೆ ಆಕೆಯ ಸಹೋದರರೇ ಗರ್ಭಿಣಿ ಸಹೋದರಿಯನ್ನು ಶೂಟ್ ಮಾಡಿ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.
ಇಂದೋರ್‌ನ ರಾವಡ್ ಗ್ರಾಮದ ಬುಲ್ ಬುಲ್(21) ಕೊಲೆಯಾದ ಮಹಿಳೆ,  ಬುಲ್ ಬುಲ್ ಅದೇ ಗ್ರಾಮದ ಕುಲದೀಪ್ ರಾಜ್ವಾತ್ ನನ್ನು ಪ್ರೀತಿಸುತ್ತಿದ್ದಳು. ಆದರೆ ಇವರ ಮದುವೆಗೆ ಎರಡು ಮನೆಯವರು ಬೇರೆ ಜಾತಿ ಎಂದು ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಪ್ರೇಮಿಗಳಿಬ್ಬರು 8 ತಿಂಗಳ ಹಿಂದೆ ಓಡಿ ಹೋಗಿ ಮದ್ವೆಯಾಗಿದ್ದರು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮದುವೆಯಾದ ಬಂತರ ಬುಲ್‍ಬುಲ್ ಮತ್ತು ಕುಲ್‍ದೀಪ್ ಇಬ್ಬರು ಗ್ರಾಮದಿಂದ ದೂರು ಹೋಗಿ ವಾಸಿಸುತ್ತಿದ್ದರು. ಆದರೆ ಮದುವೆಯ 8 ತಿಂಗಳ ನಂತರ ತಮ್ಮ ಗ್ರಾಮಕ್ಕೆ ಇಬ್ಬರು ಮರಳಿದ್ದರು.
ಬುಲ್‍ಬುಲ್ ಪೋಷಕರನ್ನು ನೋಡಬೇಕೆಂದು ಮನೆಗೆ ಹೋಗಿದ್ದಳು. ಇಬ್ಬರು ಭೇಟಿಯಾಗಿ ಮನೆಗೆ ವಾಪಸ್ ಹಿಂದಿರುಗಿದ್ದಳು. ಆದರೆ ಈ ವೇಳೆ ಆಕೆಯ ತಲೆಗೆ ಸಹೋದರರಾದ ಕಾರ್ತಿಕ್ ಮತ್ತು ಶುಭಮ್ ಇಬ್ಬರು ಶೂಟ್ ಮಾಡಿ ಕೊಂದಿದ್ದಾರೆ ಎಂದು ಪತಿ ಕುಲ್‍ದೀಪ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com