ಭೂಪಾಲ್: ಭದ್ರತಾ ವೈಫಲ್ಯದಿಂದಾಗಿ ಮಧ್ಯಪ್ರದೇಶದ ನೀಮುಚ್ ಜಿಲ್ಲೆಯ ಕಾರಾಗೃಹದಿಂದ ನಾಲ್ವರು ಕೈದಿಗಳು ಪರಾರಿಯಾದ ಘಟನೆ ಭಾನುವಾರ ನಸುಕಿನ ವೇಳೆ ನಡೆದಿದೆ..ಜೈಲರ್ ಮತ್ತು ಸಿಬ್ಬಂದಿಗಳಿಗೆ ತಿಳಿಯದಂತೆ ಜೈಲಿನ ಸರಳುಗಳನ್ನು ಕತ್ತರಿಸಿ ಹಗ್ಗವನ್ನು ಬಳಸಿಕೊಂಡು ಜೈಲಿನ ಗೋಡೆಗಳನ್ನು ಏರಿ ಪರಾರಿಯಾಗಿದ್ದಾರೆ..ಪರಾರಿಯಾದ ಕೈದಿಗಳು ನರ್‌ಸಿಂಗ್ (20), ದುಬೆಲಾಲ್ (19), ಪಂಕಜ್(20), ಲೇಖ್ ರಾಮ್ (29) ಎನ್ನುವವರಾಗಿದ್ದಾರೆ..ನಾಲ್ವರ ಪೈಕಿ ಓರ್ವ ಕೊಲೆಕೇಸ್‌ನಲ್ಲಿ ಶಿಕ್ಷೆಗೊಳಗಾಗಿದ್ದು,ಇನ್ನೋರ್ವ ರೇಪ್ ಕೇಸ್‌ನಲ್ಲಿ ಶಿಕ್ಷೆಗೊಳಗಾದವನು, ಇನ್ನಿಬ್ಬರು ಡ್ರಗ್ಸ್ ಜಾಲದಲ್ಲಿ ಸಿಕ್ಕಿ ಬಿದ್ದವರು..ಘಟನೆ ನಡೆದ ಬೆನ್ನಲ್ಲೆ ಮೂವರು ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ..ಪರಾರಿಯಾದ ಕೈದಿಗಳ ಸುಳಿವು ನೀಡಿದವರಿಗೆ ತಲಾ 50 ಸಾವಿರ ಬಹುಮಾನವನ್ನು ಸರ್ಕಾರ ಘೋಷಿಸಿದೆ..Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics