ದೇಶ

ಮೋದಿ ಪರಾಕ್ರಮದಿಂದ ಅಭಿನಂದನ್ ವಾಪಸಾಗಿದ್ದಾರೆ: ಸ್ಮೃತಿ ಇರಾನಿ

ಪಾಕ್‌ ಸೈನಿಕರಿಗೆ ಸೆರೆಸಿಕ್ಕಿದ್ದ ಭಾರತೀಯ ವಾಯುಪಡೆ ಪೈಲಟ್‌ ಅಭಿನಂದನ್‌ ವರ್ಧಮಾನ್‌ ಸೆರೆಸಿಕ್ಕ ಎರಡು ದಿನಗಳ ಬಳಿಕ ಹಿಂತಿರುಗಿದ್ದು, ಇದಕ್ಕೆ ಪ್ರಧಾನಿ ...

ಮೋದಿ ಪರಾಕ್ರಮದಿಂದ ಅಭಿನಂದನ್ ವಾಪಸಾಗಿದ್ದಾರೆ: ಸ್ಮೃತಿ ಇರಾನಿ
ಸ್ಮೃತಿ ಇರಾನಿ
Published On :
ನವದೆಹಲಿ: ಪಾಕ್‌ ಸೈನಿಕರಿಗೆ ಸೆರೆಸಿಕ್ಕಿದ್ದ ಭಾರತೀಯ ವಾಯುಪಡೆ ಪೈಲಟ್‌ ಅಭಿನಂದನ್‌ ವರ್ಧಮಾನ್‌ ಸೆರೆಸಿಕ್ಕ ಎರಡು ದಿನಗಳ ಬಳಿಕ ಹಿಂತಿರುಗಿದ್ದು, ಇದಕ್ಕೆ ಪ್ರಧಾನಿ ಮೋದಿಯವರ ಪರಾಕ್ರಮ ಎಂದು ಸಚಿವೆ ಸ್ಮತಿ ಇರಾನಿ ಹೊಗಳಿದ್ದಾರೆ.
ಬಿಜೆಪಿ ನಾಯಕ ಸುಧಾಂಶು ಮಿತ್ತಲ್‌ ಅವರ ‘ಆರ್‌ಎಸ್ಎಸ್‌: ಬಿಲ್ಡಿಂಗ್‌ ಇಂಡಿಯ ಥ್ರೂ ಸೇವಾ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ಮತಿ, ಆರ್‌ಎಸ್‌ಎಸ್‌ ಸ್ವಯಂಸೇವಕ ಸಂಘದ ಪರಾಕ್ರಮದಿಂದಾಗಿ 48 ಗಂಟೆಗಳಲ್ಲಿ ಭಾರತದ ಮಗ ಭಾರತಕ್ಕೆ ಮರಳುತ್ತಿದ್ದಾನೆ ಎನ್ನುವ ಕುರಿತು ಸಂಘವು ಹೆಮ್ಮೆ ಪಡಬಹುದು. ಮೋದಿ ಅವರು ಆರ್‌ಎಸ್‌ಎಸ್‌ ಕಾರ್ಯಕರ್ತರಾಗಿದ್ದರು ಎಂದು ಹೇಳಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಚುನಾವಣಾ ಲಾಭ ಪಡೆಯಲು ಪುಲ್ವಾಮಾ ಭಯೋತ್ಪಾದನೆ ದಾಳಿ ಮತ್ತು ಮೈಮಾನಿಕ ದಾಳಿಯನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ ಎನ್ನುವ ರಾಜಕೀಯ ಎದುರಾಳಿಗಳ ಟೀಕೆ ಬೆನ್ನಲ್ಲೇ ಸ್ಮೃತಿ ಇರಾನಿ ಅವರ ಹೇಳಿಕೆಯು ಕೂಡ ಭಾರಿ ಟೀಕೆಗೆ ಕಾರಣವಾಗಬಹುದು ಎನ್ನಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.