ಭಾರತದ ಹೆಮ್ಮೆಯ ಅಭಿನಂಧನ್‌ಗೆ `ಭಗವಾನ್ ಮಹಾವೀರ್ ಅಹಿಂಸಾ ಪುರಸ್ಕಾರ’

ಪಾಕಿಸ್ತಾನದ ಎಫ್ 16 ಯುದ್ಧ ವಿಮಾನವನ್ನು ಉರುಳಿಸಿ ಶೌರ್ಯ ಮೆರೆದಿದ್ದಲ್ಲದೆ ಪಾಕ್ ಸೈನ್ಯದ ಕಪಿಮುಷ್ಟಿಯಿಂದ ಸುರಕ್ಷಿತವಾಗಿ ಮರಳಿರುವ ವೀರಯೋಧ ವಿಂಗ್.....
ಭಾರತದ ಹೆಮ್ಮೆಯ ಅಭಿನಂಧನ್‌ಗೆ `ಭಗವಾನ್ ಮಹಾವೀರ್ ಅಹಿಂಸಾ ಪುರಸ್ಕಾರ’
ಭಾರತದ ಹೆಮ್ಮೆಯ ಅಭಿನಂಧನ್‌ಗೆ `ಭಗವಾನ್ ಮಹಾವೀರ್ ಅಹಿಂಸಾ ಪುರಸ್ಕಾರ’
Updated on: 
ನಾಸಿಕ್ (ಮಹಾರಾಷ್ಟ್ರ): ಪಾಕಿಸ್ತಾನದ ಎಫ್ 16 ಯುದ್ಧ ವಿಮಾನವನ್ನು ಉರುಳಿಸಿ ಶೌರ್ಯ ಮೆರೆದಿದ್ದಲ್ಲದೆ ಪಾಕ್ ಸೈನ್ಯದ ಕಪಿಮುಷ್ಟಿಯಿಂದ ಸುರಕ್ಷಿತವಾಗಿ ಮರಳಿರುವ ವೀರಯೋಧ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರಿಗೆ ಭಗವಾನ್ ಮಹಾವೀರ್ ಅಹಿಂಸಾ ಪುರಸ್ಕಾರ’ ನೀಡಿ ಗೌರವಿಸಲಾಗುವುದು ಎಂದು ಭಾನುವಾರ ಅಖಿಲ ಭಾರತೀಯ ದಿಗಂಬರ ಜೈನ ಮಹಾಸಮಿತಿ ಘೋಷಿಸಿದೆ.
ಮಿಗ್ 21 ಯುದ್ಧ ವಿಮಾನದ ಪೈಲಟ್ ಅಭಿನಂದನ್ ಅವರ ಶೌರ್ಯಕ್ಕೆ ಮೆಚ್ಚಿ ಈ ಪುರಸ್ಕಾರ ನಿಡಿ ಗೌರವಿಸಲು ನಿರ್ಧರಿಸಿದ್ದಾಗಿ ಸಮಿತಿಯ ಅಧ್ಯಕ್ಷ ಸುನೀಂದ್ರ ಜೈನ್ ಹೇಳಿದ್ದಾರೆ.
ಇನ್ನು ಈ ಪುರಸ್ಕಾರ ಪಡೆಯುವ ಮೊದ;ಲ ವ್ಯಕ್ತಿ ವಿಂಗ್ ಕಮಾಂಡರ್ ಅಭಿನಂದನ್ ಎನ್ನುವುದು ಗಮನಾರ್ಹ.
ಪ್ರಶಸ್ತಿಯು 2 .51 ಲಕ್ಷ ರೂಪಾಯಿ ನಗದು, ಸ್ಮರಣಿಕೆ ಮತ್ತು ಪ್ರಮಾಣ ಪತ್ರವನ್ನು ಹೊಂದಿರಲಿದ್ದು ಮಹಾವೀರ ಜಯಂತಿ ದಿನ (ಏಪ್ರಿಲ್ 17) ಈ ಪ್ರಶಸ್ತಿಯನ್ನು ಅಭಿನಂದನ್ ಅವರಿಗೆ ನೀಡಿ ಸನ್ಮಾನಿಸಲಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com