ಲೋಕಸಭೆ ಚುನಾವಣೆಗೆ ಎಸ್ ಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ: 'ಮೈನ್ ಪುರಿ'ಯಿಂದ ಮುಲಾಯಂ ಸಿಂಗ್ ಸ್ಪರ್ಧೆ

ಮುಂಬರುವ ಲೋಕಸಭೆ ಚುನಾವಣೆಗಾಗಿ ಸಮಾಜವಾದಿ ಪಕ್ಷ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದೆ, ಪಕ್ಷದ ಸರ್ವೋಚ್ಚ ನಾಯಕ ಮುಲಾಯಂ ಸಿಂಗ್ ಯಾದವ್, ಮೈನ್ ...
ಮುಲಾಯಂ ಸಿಂಗ್ ಯಾದವ್
ಮುಲಾಯಂ ಸಿಂಗ್ ಯಾದವ್
ಲಕ್ನೋ: ಮುಂಬರುವ ಲೋಕಸಭೆ ಚುನಾವಣೆಗಾಗಿ ಸಮಾಜವಾದಿ ಪಕ್ಷ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದೆ, ಪಕ್ಷದ ಸರ್ವೋಚ್ಚ ನಾಯಕ ಮುಲಾಯಂ ಸಿಂಗ್ ಯಾದವ್, ಮೈನ್ ಪುರಿಯಿಂದ ಸ್ಪರ್ಧಿಸಲಿದ್ದಾರೆ,
ಬದೈನ್ ನಿಂದ ಧರ್ಮೇದ್ರ ಯಾಧವ್, ಪಿರೋಜಾಬಾದ್ ನಿಂದ ಅಕ್ಷಯ್ ಯಾದವ್, ರೋಬಸ್ಟರ್ ಗಂಜ್ ನಿಂದ ಭೈಲಾಲ್ ಕೋಲ್, ಇಟಾವಾದಿಂದ ಕಲ್ಮೇಷ್ ಕಠಾರಿಯಾ  ಕಣಕ್ಕಿಳಿಯಲಿದ್ದಾರೆ.
ಎಸ್ ಪಿ ಬಿಡುಗಡೆಗೊಳಿಸಿರುವ ಪಟ್ಟಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್ ಯಾದವ್ ಅಧಿಕೃತ ಮುದ್ರೆ ಒತ್ತಿದ್ದಾರೆ. 
ಮೈನ್ ಪುರಿ ಸೇಫೆಸ್ಟ್ ಕ್ಷೇತ್ರವಾಗಿದ್ದು, ಮುಲಾಯಂ ಸಿಂಗ್ ಯಾದವ್ ಇಲ್ಲಿಂದಲ್ ಕಣಕ್ಕಿಳಿಯಲಿದ್ದಾರೆ, 1996 ರಲ್ಲಿ ಮೈನ್ ಪುರಿಯಿಂದಲೇ ಮುಲಾಯಂ ಸ್ಪರ್ಧಿಸಿದ್ದರು. ಸುಮಾರು 3.64 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com