ಕರ್ನಾಟಕ ಆಯ್ತು, ಈಗ ತಮಿಳುನಾಡಿನಿಂದ ರಾಹುಲ್ ಸ್ಪರ್ಧೆಗೆ ಕೈ ನಾಯಕರ ಒತ್ತಾಯ!

ಮುಂಬರುವ ಲೋಕಸಭಾ ಚುನಾವಣೆಗೆ ದಕ್ಷಿಣ ರಾಜ್ಯ ತಮಿಳುನಾಡಿನಿಂದ ರಾಹುಲ್ ಗಾಂಧಿ ಸ್ಪರ್ಧಿಸಬೇಕೆಂದು ತಮಿಳುನಾಡು ಕಾಂಗ್ರೆಸ್ ಘಟಕ ಶನಿವಾರ ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ....
ರಾಹುಲ್ ಗಾಂಧಿ
ರಾಹುಲ್ ಗಾಂಧಿ
Updated on: 
ಚೆನ್ನೈ: ಮುಂಬರುವ ಲೋಕಸಭಾ ಚುನಾವಣೆಗೆ ದಕ್ಷಿಣ ರಾಜ್ಯ ತಮಿಳುನಾಡಿನಿಂದ ರಾಹುಲ್ ಗಾಂಧಿ ಸ್ಪರ್ಧಿಸಬೇಕೆಂದು ತಮಿಳುನಾಡು ಕಾಂಗ್ರೆಸ್ ಘಟಕ ಶನಿವಾರ ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಒತ್ತಾಯಿಸಿದೆ. ತಮಿಳುನಾಡು ಮಿತ್ರಪಕ್ಷವಾಗಿರುವ ಡಿಎಂಕೆ ನಿಂದ ಮುಂದಿನ ಪ್ರಧಾನಿಯಾಗಿ ರಾಹುಲ್ ಅವರನ್ನು ಒಪ್ಪಿಕೊಳ್ಳಲಾಗಿದೆ ಎಂದೂ ಅದು ಹೇಳಿದೆ.
ಉತ್ತರ ಪ್ರದೇಶದ ಅಮೇಥಿಯಿಂದ ಸ್ಪರ್ಧಿಸುವುದರೊಡನೆ ರಾಹುಲ್ ದಕ್ಷಿಣದ ತಮಿಳುನಾಡಿನಿಂದಲೂ ಸ್ಪರ್ಧಿಸಲಿ, ಈ ಮೂಲಕ ಅವರು ಉತ್ತರ ರಾಜ್ಯಕ್ಕಷ್ತೇ ಸೇರಿದವರಲ್ಲ, ದಕ್ಷಿಣಕ್ಕೆ ಸಹ ಸೇರಿದವರೆಂದು ಸಾಬೀತಾಗಲಿದೆ ಎಂದು ತಮಿಳುನಾಡು ಕಾಂಗ್ರೆಸ್ ಪಕ್ಷದ ಅಧ್ಯಕ್ಷ  ಕೆ. ಎಸ್. ಅಳಗಿರಿ ಹೇಳಿದ್ದಾರೆ.
ಡಿಎಂಕೆ ಅಧ್ಯಕ್ಷ ಎಂ. ಕೆ. ಸ್ಟಾಲಿನ್ ಅವರು ಪ್ರತಿಪಕ್ಷಗಳ ಸಭೆಯಲ್ಲಿ ರಾಹುಲ್ ಗಾಂಧಿ ಹೆಸರನ್ನು ಮುಂದಿನ ಪ್ರಧಾನಿ ಹುದ್ದೆಗೆ ಪ್ರಥಮ ಬಾರಿಗೆ ಪ್ರಸ್ತಾಪಿಸಿದ್ದಾರೆ. ಈ ಮೂಲಕ ಡಿಎಂಕೆ ನಾಯಕರಿಂದ ಜಾತ್ಯತೀತ ಮೈತ್ರಿ ಒಡಮೂಡಿದೆ ಎಂದು ಅವರು ಹೇಳಿದ್ದಾರೆ. ಇನ್ನೂ ಮುಂದುವರಿದು ರಾಜ್ಯ ಕಾಂಗ್ರೆಸ್ ಘಟಕದ ಮತ್ತು ಜನರ ಪರವಾಗಿ, ನಾನು ರಾಹುಲ್ ಗಾಂಧಿ ತಮಿಳುನಾಡಿನ ಯಾವುದೇ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ವಿನಂತಿಸುತ್ತೇನೆ.ನನಗೆ (ಡಿಎಂಕೆ ನೇತೃತ್ವದ) ಸೆಕ್ಯುಲರ್ ಪ್ರೋಗ್ರೆಸ್ಸಿವ್ ಅಲೈಯನ್ಸ್ ಗ್ರಾಂಡ್ ಮನವಿಗೆ ಸಮ್ಮತಿ ಇದೆ ಎಂದಿದ್ದಾರೆ.
"ರಾಹುಲ್ ಗಾ<ಧಿ ಭಾರತದ ಜನರ ಆಸ್ತಿ ಎಂದು ಪರಿಗಣಿಸಲ್ಪಡುತ್ತಾರೆ.ಅವರು ಎಲ್ಲರ  ಪ್ರೀತಿಪಾತ್ರರಿದ್ದಾರೆ.ದೇಶದ ಏಕತೆಗಾಗಿ ಸ್ವತಃ ಸಮರ್ಪಿಸಿಕೊಳ್ಳುವವರೂ ಆಗಿದ್ದಾರೆ.ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಿಂದ ಸ್ಪರ್ಧಿಸುವುದರೊಡನೆ ಅವರು ದಕ್ಷಿಣದ ತಮಿಳುನಾಡಿನ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು" ಅಳಗಿರಿ ಹೇಳೀದ್ದಾರೆ.
ವಿಶೇಷವೆಂದರೆ ಶುಕ್ರವಾರವಷ್ಟೇ ಕರ್ನಾಟಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ರಾಹುಲ್ ಗಾಂಧಿ ಕರ್ನಾಟಕದಿಂದ ಕಣಕ್ಕಿಳಿಯಬೇಕು ಎಂದು ಟ್ವೀಟ್ ಮೂಲಕ ಮನವಿ ಮಾಡಿದ್ದರು. ಇದಕ್ಕೆ ರಾಜ್ಯದ ಇತರೆ ಕಾಂಗ್ರೆಸ್ ನಾಯಕರು ಸಹ ಸಮ್ಮತಿಸಿದ್ದರು.
ಲೋಕಸಭೆ ಚುನಾವಣೆ ದಿನಾಂಕ ಇದಾಗಲೇ ಘೋಷಣೆಯಾಗಿದ್ದು ತಮಿಳುನಾಡಿನಲ್ಲಿ ಏ.18ರಂದು ಒಂದೇ ಹಂತದ ಮತದಾನ ನಡೆದರೆ ಕರ್ನಾಟಕದಲ್ಲಿ ಏ.18 ಹಾಗೂ ಏ. 23 ಎರಡು ಹಂತಗಳಲ್ಲಿ ಮತದಾನ ನಡೆಯಲಿಕ್ಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com