ನೌಕಾಪಡೆಯ ಮುಂದಿನ ಮುಖ್ಯಸ್ಥರಾಗಿ ಕರಮ್ ಬೀರ್ ಸಿಂಗ್ ನೇಮಕ

ನೌಕಾ ಪಡೆಯ ಮುಂದಿನ ಮುಖ್ಯಸ್ಥರಾಗಿ ಉಪ ಆಡ್ಮಿರಲ್ ಕರಮ್ ಬೀರ್ ಸಿಂಗ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಂದು ನೇಮಕ ಮಾಡಿದೆ.
ಕರಮ್ ಬೀರ್ ಸಿಂಗ್
ಕರಮ್ ಬೀರ್ ಸಿಂಗ್

ನವದೆಹಲಿ: ನೌಕಾ ಪಡೆಯ ಮುಂದಿನ ಮುಖ್ಯಸ್ಥರಾಗಿ ಉಪ ಆಡ್ಮಿರಲ್ ಕರಮ್ ಬೀರ್ ಸಿಂಗ್  ಅವರನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ  ಇಂದು ನೇಮಕ ಮಾಡಿದೆ.

ನೌಕಾ ಪಡೆಯ ಹಾಲಿ ಮುಖ್ಯಸ್ಥ ಆಡ್ಮಿರಲ್ ಸುನೀಲ್ ಲಾಂಬಾ ಅವರ  ಅಧಿಕಾರವಧಿ ಮೇ. 31, 2019 ರಂದು ಅಂತ್ಯಗೊಳ್ಳಲಿದ್ದು, ಅವರ ಉತ್ತರಾಧಿಕಾರಿಯಾಗಿ ಕರಮ್ ಬೀರ್ ಸಿಂಗ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ.

ಪ್ರಸ್ತುತ  ಉಪ ಆಡ್ಮಿರಲ್ ಸಿಂಗ್, ವಿಶಾಖಪಟ್ಟಣದಲ್ಲಿ ಪಶ್ಚಿಮ ನೌಕಾಪಡೆಯ ಕಮಾಂಡಿಂಗ್ ಪ್ಲಾಗ್ ಅಫೀಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com