ಮೋದಿ ಸರ್ವಾಧಿಕಾರಿಯೇ? ಅರುಣ್ ಜೇಟ್ಲಿ ವಿರುದ್ಧ ರಮ್ಯಾ ವಾಗ್ದಾಳಿ

ಮಮತಾ ಬ್ಯಾನರ್ಜಿ ಪೋಟೋ ತಿರುಚಿದ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅರುಣಾ ಜೇಟ್ಲಿ ವಿರುದ್ಧ ಕಾಂಗ್ರೆಸ್ ಮುಖಂಡೆ ರಮ್ಯಾ ವಾಗ್ದಾಳಿ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಸರ್ವಾಧಿಕಾರಿ ಎಂದು ಹೇಳುತ್ತಿರಾ? ಎಂದು ಕೇಳಿದ್ದಾರೆ.
ರಮ್ಯಾ
ರಮ್ಯಾ
Updated on
ನವದೆಹಲಿ: ಮಮತಾ ಬ್ಯಾನರ್ಜಿ  ಪೋಟೋ ತಿರುಚಿದ ವಿವಾದಕ್ಕೆ ಸಂಬಂಧಿಸಿದಂತೆ  ಕೇಂದ್ರ  ಸಚಿವ ಅರುಣಾ ಜೇಟ್ಲಿ ವಿರುದ್ಧ ಕಾಂಗ್ರೆಸ್ ಮುಖಂಡೆ ರಮ್ಯಾ ವಾಗ್ದಾಳಿ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಸರ್ವಾಧಿಕಾರಿ ಎಂದು ಹೇಳುತ್ತಿರಾ? ಎಂದು ಕೇಳಿದ್ದಾರೆ
ಪ್ರಧಾನಿ ನರೇಂದ್ರ ಮೋದಿ ಅವರ ಪೋಟೋವನ್ನು ಇದೇ ರೀತಿಯಲ್ಲಿ ತಿರುಚಿದ ಆರೋಪವನ್ನು ರಮ್ಯಾ ಎದುರಿಸುತ್ತಿದ್ದಾರೆ.
ಇದರ ವಿರುದ್ಧ ವಾಗ್ದಾಳಿ ನಡೆಸಿರುವ ರಮ್ಯಾ, ಜೇಟ್ಲಿ ನಿಮ್ಮ ಮಾತನ್ನು ಒಪ್ಪಿಕೊಳ್ಳುತ್ತೇನೆ. ಆದರೆ, ಇದೇ ರೀತಿಯಲ್ಲಿ  ಮೋದಿ ಪೋಟೋ ತಿರುಚಿದ ಆರೋಪ ಎದುರಿಸುತ್ತಿರುವ ನಾನು ಹೇಗೆ ಹೊರಬರಬೇಕು? ಮೋದಿ ಸರ್ವಾಧಿಕಾರಿ ಅಂತಾ ನೀವು ಹೇಳುತ್ತೀರಾ ಎಂದು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com