ಮಹಾರಾಷ್ಟ್ರದಲ್ಲಿ ಶೀಘ್ರದಲ್ಲಿ ಸುಭದ್ರ ಸರ್ಕಾರ ರಚನೆ- ಎನ್ ಸಿಪಿ ಜೊತೆ ಸಭೆ ಬಳಿಕ ಕಾಂಗ್ರೆಸ್ ವಿಶ್ವಾಸ

ಅಂತೂ ಇಂತೂ ಶಿವಸೇನೆ ಜೊತೆಗೆ ಕೈ ಜೋಡಿಸುವ ಸುಳಿವನ್ನು ನೀಡಿರುವ ಕಾಂಗ್ರೆಸ್ ನಾಯಕರು ಮುಂದಿನ ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಸುಭದ್ರ ಸರ್ಕಾರ ರಚಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್, ಎನ್ ಸಿಪಿ ಮುಖಂಡರು
ಕಾಂಗ್ರೆಸ್, ಎನ್ ಸಿಪಿ ಮುಖಂಡರು
Updated on: 

ನವದೆಹಲಿ: ಅಂತೂ ಇಂತೂ ಶಿವಸೇನೆ ಜೊತೆಗೆ ಕೈ ಜೋಡಿಸುವ ಸುಳಿವನ್ನು ನೀಡಿರುವ ಕಾಂಗ್ರೆಸ್ ನಾಯಕರು ಮುಂದಿನ ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಸುಭದ್ರ ಸರ್ಕಾರ ರಚಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶರದ್ ಪವಾರ್ ನಿವಾಸದಲ್ಲಿ ನಡೆದ ಎನ್ ಸಿಪಿ ಹಾಗೂ ಕಾಂಗ್ರೆಸ್ ನಾಯಕರ ಸರಣಿ ಸಭೆ ಬಳಿಕ ಮಾತನಾಡಿದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹ್ಹಾಣ್, ಮೈತ್ರಿ ಏರ್ಪಡುವ ವಿಶ್ವಾಸವಿದ್ದು, ಮಹಾರಾಷ್ಟ್ರದಲ್ಲಿನ ರಾಜಕೀಯ ಅನಿಶ್ಚತತೆ ಕೊನೆಯಾಗಲಿದೆ. ಸುಭದ್ರ ಸರ್ಕಾರ ರಚನೆಯತ್ತ ನಾಯಕರು ಕಾರ್ಯೋನ್ಮುಖರಾಗಿರುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಎನ್ ಸಿಪಿ ವಕ್ತಾರ ನವಾಜ್ ಮಲಿಕ್, ಎನ್ ಸಿಪಿ ಹಾಗೂ ಕಾಂಗ್ರೆಸ್ ಶಿವಸೇನೆ ಜೊತೆಗೆ ಕೈ ಜೋಡಿಸಲಿದ್ದು, ಮೂರು ಪಕ್ಷಗಳು ಒಗ್ಗೂಡಿ  ಸರ್ಕಾರ ರಚಿಸುವುದು ಖಚಿತ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com