ಜಾರ್ಖಂಡ್ : ಲತೇಹಾರ್ ನಲ್ಲಿ ನಕ್ಸಲೀಯರ ದಾಳಿ, ಮೂವರು ಪೊಲೀಸರು ಹುತಾತ್ಮ

ನಕ್ಸಲ್ ಪೀಡಿತ ಜಾರ್ಖಂಡ್ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಕೇವಲ 8 ದಿನಗಳು ಬಾಕಿ ಇರುವಾಗಲೇ ನಕ್ಸಲೀಯರು ಪೊಲೀಸ್ ಗಸ್ತು ಸಿಬ್ಬಂದಿಯ ಮೇಲೆ ದಾಳಿ ಮಾಡುವ ಮೂಲಕ ತಮ್ಮ ಅಸ್ವಿತ್ವವನ್ನು ಮತ್ತೊಮ್ಮೆ ಮೆರೆದಿದ್ದಾರೆ.
ದಾಳಿಗೊಳಗಾದ ಪೊಲೀಸ್ ವಾಹನ
ದಾಳಿಗೊಳಗಾದ ಪೊಲೀಸ್ ವಾಹನ

ಲತೇಹಾರ್: ನಕ್ಸಲ್ ಪೀಡಿತ ಜಾರ್ಖಂಡ್ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಕೇವಲ 8 ದಿನಗಳು ಬಾಕಿ ಇರುವಾಗಲೇ ನಕ್ಸಲೀಯರು ಪೊಲೀಸ್ ಗಸ್ತು ಸಿಬ್ಬಂದಿಯ ಮೇಲೆ ದಾಳಿ ಮಾಡುವ ಮೂಲಕ ತಮ್ಮ ಅಸ್ವಿತ್ವವನ್ನು ಮತ್ತೊಮ್ಮೆ ಮೆರೆದಿದ್ದಾರೆ. ಶುಕ್ರವಾರ ನಡೆದ ಘರ್ಷಣೆಯಲ್ಲಿ ಸಹಾಯಕ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸೇರಿದಂತೆ ಮೂವರು ಪೊಲೀಸರು ಹುತಾತ್ಮರಾಗಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಗಳು ಎಂದಿನಂತೆ ಹೆದ್ದಾರಿ ಗಸ್ತು ಭಾಗವಾಗಿ ರಾಂಚಿ ರಸ್ತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಚಾಂಡ್ವಾ ಪೊಲೀಸ್ ಠಾಣೆಯ ವ್ಯಾಪ್ತಿಯ ಲುಕೈಯಾ ಗ್ರಾಮದಲ್ಲಿ  ಶುಕ್ರವಾರ ರಾತ್ರಿ 8-30 ರ ಸುಮಾರಿನಲ್ಲಿ ಇದ್ದಕ್ಕಿದ್ದಂತೆ ಕೆಲವರು ವಾಹನದ ಮೇಲ ಗುಂಡು ಹಾರಿಸಿದ್ದಾರೆ.

ಪೊಲೀಸರು ಇದಕ್ಕೆ ಪ್ರತೀಕಾರವಾಗಿ ಗುಂಡು ಹಾರಿಸಿದ್ದಾರೆ. ಈ ವೇಳೆ  ಎಎಸ್ ಐನ್ನು ಸುಕ್ರ ಒರಾನ್ ಸೇರಿದಂತೆ ಮೂವರು ಪೊಲೀಸರು ಹುತಾತ್ಮರಾಗಿದ್ದಾರೆ. ಹಲವರು  ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 

81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಗೆ ನವೆಂಬರ್ 30 ರಿಂದ ಐದು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 23 ರಂದು ಮತಗಳ ಎಣಿಕೆ ನಡೆದು  ಫಲಿತಾಂಶ ಪ್ರಕಟವಾಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com