11 ಗಂಟೆಯವರೆಗೂ ಮಹಾರಾಷ್ಟ್ರದಲ್ಲಿ ಶೇ. 6.35, ಹರಿಯಾಣದಲ್ಲಿ ಶೇ. 11.68 ರಷ್ಟು ಮತದಾನ

ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭೆಗೆ ಬೆಳಗ್ಗೆಯಿಂದ ಮತದಾನ ಪ್ರಗತಿಯಲ್ಲಿದ್ದು, ಬಾಲಿವುಡ್ ನಟಿ ಮಾಧುರಿ ದೀಕ್ಷಿತ್, ನಟ ಅಮೀರ್ ಖಾನ್, ಸೇರಿದಂತೆ ಅನೇಕ ನಟಿ ನಟಿಯರು, ರಾಜಕಾರಣಿಗಳು ಮತಗಟ್ಟೆಗಳಲ್ಲಿ  ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.
ಮಾಧುರಿ ದೀಕ್ಷಿತ್
ಮಾಧುರಿ ದೀಕ್ಷಿತ್
Updated on: 

ನವದೆಹಲಿ: ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭೆಗೆ ಬೆಳಗ್ಗೆಯಿಂದ ಮತದಾನ ಪ್ರಗತಿಯಲ್ಲಿದ್ದು, ಬಾಲಿವುಡ್ ನಟಿ ಮಾಧುರಿ ದೀಕ್ಷಿತ್, ನಟ ಅಮೀರ್ ಖಾನ್, ಸೇರಿದಂತೆ ಅನೇಕ ನಟಿ ನಟಿಯರು, ರಾಜಕಾರಣಿಗಳು ಮತಗಟ್ಟೆಗಳಲ್ಲಿ  ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಬೆಳಗ್ಗೆ 9 ಗಂಟೆಯವರೆಗೂ ಶೇ. 6.35 ರಷ್ಟು ಮತದಾನವಾಗಿರುವ ಬಗ್ಗೆ ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೊಂದೆಡೆ 90 ಸದಸ್ಯ ಬಲದ ಹರಿಯಾಣ ವಿಧಾನಸಭೆಗೆ ಬೆಳಗ್ಗೆ 11 ಗಂಟೆಯವರೆಗೂ ಶೇ. 11.68 ರಷ್ಟು ಮತದಾನವಾಗಿರುವ ಬಗ್ಗೆ ವರದಿಯಾಗಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್,  ಆರ್ ಎಸ್ ಎಸ್ ಸರಸಂಘ ಸಂಚಾಲಕ ಮೋಹನ್ ಭಾಗವತ್ ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಅವರ ಪತ್ನಿ ನಾಗ್ಪುರದಲ್ಲಿ ತಮ್ಮ ಹಕ್ಕು ಚಲಾಯಿಸಿದರು.ಎನ್ ಸಿಪಿ ಮುಖಂಡರಾದ ಅಜಿತ್ ಪವಾರ್, ಫ್ರುಪುಲ್ ಪುಟೇಲ್ ಹಾಗೂ ಸುಪ್ರೀಯಾ ಸುಳೆ ತಮ್ಮ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತ ಚಲಾಯಿಸಿದರು. 

 ಬಾಲಿವುಡ್ ನಟಿ ಮಾಧುರಿ ದೀಕ್ಷಿತ್,  ಅಮೀರ್ ಖಾನ್, ಹಿರಿಯ ನಟಿ ಶುಭಾ ಕೊಟೆ ಮತ ಚಲಾಯಿಸಿದರು. ಹರಿಯಾಣದಲ್ಲಿ ಟಿಕ್ ಟಾಕ್ ಸ್ಟಾರ್ ಸೊನಾಲಿ ಪೊಗಾಟ್  ಮತದಾನ ಮಾಡಿದರು.

ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟಾರ್  ಸೈಕಲ್ ನಲ್ಲಿ ಬಂದು ಮತ ಚಲಾಯಿಸಿದದ್ದು ಗಮನ ಸೆಳೆಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com