ಸಹೋದರನ ಸಾವಿಗೆ ರಜೆ ನೀಡದ ಅಧಿಕಾರಿ: ಸಿಟ್ಟಿಗೆದ್ದ ಪೇದೆಯಿಂದ ಮನಬಂದಂತೆ ಗುಂಡಿನ ದಾಳಿ

ತನ್ನ ಸಹೋದರ ಮೃತಪಟ್ಟಿದ್ದರೂ ರಜೆ ನೀಡಲು ಅಧಿಕಾರಿಗಳು ಒಪ್ಪದ ಹಿನ್ನೆಲೆಯಲ್ಲಿ ತೀವ್ರವಾಗಿ ಕೆಂಡಾಮಂಡಲಗೊಂಡ ಪೇದೆಯೊಬ್ಬ ಕುಡಿದು ಬಂದು ಪೊಲೀಸ್ ಕಚೇರಿ ಎದುರು ಮನಬಂದಂತೆ ಗುಂಡಿನ ದಾಳಿ ನಡೆಸಿರುವ ಘಟನೆ ರಾಂಚಿಯಲ್ಲಿ ನಡೆದಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ರಾಂಚಿ: ತನ್ನ ಸಹೋದರ ಮೃತಪಟ್ಟಿದ್ದರೂ ರಜೆ ನೀಡಲು ಅಧಿಕಾರಿಗಳು ಒಪ್ಪದ ಹಿನ್ನೆಲೆಯಲ್ಲಿ ತೀವ್ರವಾಗಿ ಕೆಂಡಾಮಂಡಲಗೊಂಡ ಪೇದೆಯೊಬ್ಬ ಕುಡಿದು ಬಂದು ಪೊಲೀಸ್ ಕಚೇರಿ ಎದುರು ಮನಬಂದಂತೆ ಗುಂಡಿನ ದಾಳಿ ನಡೆಸಿರುವ ಘಟನೆ ರಾಂಚಿಯಲ್ಲಿ ನಡೆದಿದೆ. 

ಸಹೋದರ ಮೃತಪಟ್ಟ ಹಿನ್ನೆಲೆಯಲ್ಲಿ ಕಳೆದ 10 ದಿನಗಳಿಂದಲೂ ರಜೆ ನೀಡುವಂತೆ ಪೇದೆ ಸುನೀಲ್ ಕಾಕಾ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ. ಆದರೆ, ಅಧಿಕಾರಿಗಳು ರಜೆ ನೀಡಲು ನಿರಾಕರಿಸಿದ ಹಿನ್ನಲೆಯಲ್ಲಿ ತೀವ್ರವಾಗಿ ಬೇಸರಗೊಂಡಿರುವ ಸುನೀರ್ ಅವರು ಕಂಠ ಪೂರ್ತಿ ಕುಡಿದು ಬಂದು ಸಾರ್ಜೆಂಟ್ ಮೇಜರ್ ಕಚೇರಿ ಮುಂದೆ ಮನಬಂದಂತೆ ಗುಂಡು ಹಾರಿಸಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿಗಳು ಹಿರಿಯ ಅಧಿಕಾರಿಗಳ ವಶಕ್ಕೆ ಒಪ್ಪಿಸಿದ್ದಾರೆ. 

ಕಾಕಾ ಕಳೆದ 7 ತಿಂಗಳಿಂದಲೂ ಕರ್ತವ್ಯಕ್ಕೆ ಹಾಜರಾಗದ ಹಿನ್ನಲೆಯಲ್ಲಿ ವೇತನವನ್ನು ನೀಡಲಾಗುತ್ತಿರಲಿಲ್ಲ. ಬೇಜವಾಬ್ದಾರಿಯುತ ವರ್ತನೆ ಹಿನ್ನಲೆಯಲ್ಲಿ ರಜೆ ಮನವಿಯನ್ನು ಅಧಿಕಾರಿಗಳು ತಿರಸ್ಕರಿಸಿದ್ದರು ಎಂದು ವರದಿಗಳು ತಿಳಿಸಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com