ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಪತ್ನಿ, ಮೂವರು ಮಕ್ಕಳಿಗೆ ಐಟಿ ನೋಟಿಸ್!

ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಮತ್ತು ಮೂವರು ಮಕ್ಕಳಿಗೆ ಆದಾಯ ತೆರಿಗೆ ಇಲಾಖೆ(ಐಟಿ) ನೋಟಿಸ್ ನೀಡಿದೆ ಎಂದು ವರದಿಯಾಗಿದೆ.
ಮುಕೇಶ್ ಅಂಬಾನಿ ಕುಟುಂಬ
ಮುಕೇಶ್ ಅಂಬಾನಿ ಕುಟುಂಬ
Updated on: 

ಮುಂಬೈ: ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಮತ್ತು ಮೂವರು ಮಕ್ಕಳಿಗೆ ಆದಾಯ ತೆರಿಗೆ ಇಲಾಖೆ(ಐಟಿ) ನೋಟಿಸ್ ನೀಡಿದೆ ಎಂದು ವರದಿಯಾಗಿದೆ.

2015ರ ಕಪ್ಪುಹಣ ನಿಯಂತ್ರಣ ಕಾಯ್ದೆ ಅನ್ವಯ ಆದಾಯ ತೆರಿಗೆ ಇಲಾಖೆ ಮಾರ್ಚ್ 28ರಂದೇ ನೋಟಿಸ್ ನೀಡಲಾಗಿದೆ ಎಂದು ದಿ ವೈರ್ ಪತ್ರಿಕೆ ವರದಿ ಮಾಡಿದೆ. ಆದರೆ ನೋಟಿಸ್ ನೀಡಿರುವ ವಿಚಾರವನ್ನು ರಿಲಯನ್ಸ್ ಇಂಡಸ್ಟ್ರೀಸ್ ವಕ್ತಾರರು ನಿರಾಕರಿಸಿದ್ದಾರೆ.

ವಿದೇಶಿ ಆದಾಯ ಮತ್ತು ಸ್ವತ್ತುಗಳ ಬಗ್ಗೆ ಮಾಹಿತಿ ನೀಡದಿರುವ ವಿಚಾರದಲ್ಲಿ ಇಲಾಖೆ ಈ ಕ್ರಮ ಕೈಗೊಂಡಿದೆ. 2011ರಲ್ಲಿ ಜಿನೇವಾದ ಎಚ್ ಎಸ್ ಬಿಸಿ ಬ್ಯಾಂಕ್ ನಲ್ಲಿ ಖಾತೆ ತೆರೆದಿರುವ ಸುಮಾರು 700 ಮಂದಿಯ ವಿವರಗಳು ಸರ್ಕಾರಕ್ಕೆ ದೊರೆತ ಬಳಿಕ ಐಟಿ ತನಿಖೆ ಆರಂಭಿಸಿತ್ತು. 

ಈ ಪೈಕಿ ಅಂಬಾನಿ ಅವರ ರಿಲಯನ್ಸ್ ಗ್ರೂಪ್ ಗೆ ಸೇರಿದ 14 ಖಾತೆಗಳಿವೆ ಎಂಬುದು ಐಟಿ ತನಿಖೆಯಿಂದ ತಿಳಿದುಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ. ನೇರ ತೆರಿಗೆಯ ಕೇಂದ್ರ ಮಂಡಳಿಯ ಉನ್ನತ ಅಧಿಕಾರಿಗಳು ಮತ್ತು ಮುಂಬೈ ಘಟಕದ ನಡುವೆ ಸುದೀರ್ಘ ಚರ್ಚೆ ನಡೆದ ಬಳಿಕ ನೋಟಿಸ್ ನೀಡಲಾಗಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com