ಪತಿಗೆ ಬೆಂಕಿ ಹಚ್ಚಿದ ನವ ವಧು!

ಆ ಜೋಡಿ ಮದುವೆಯಾಗಿ ಕೇವಲ 20 ದಿನಗಳಾಗಿತ್ತಷ್ಟೆ ಪತಿ ಮದ್ಯವ್ಯಸನಿ ಎಂದು ತಿಳಿದ ನವ ವಧು ಆತನೊಡನೆ ಬದುಕು ಕಷ್ಟ ಎಂದು ಭಾವಿಸಿ ಬೆಂಕಿ ಹಚ್ಚಿ ಸಜೀವ ದಹನ ಮಾಡಿಬಿಟ್ಟಿದ್ದಾಳೆ.

Published: 02nd August 2019 12:00 PM  |   Last Updated: 02nd August 2019 04:18 AM   |  A+A-


Bride sets her husband on fire

ಪತಿಗೆ ಬೆಂಕಿ ಹಚ್ಚಿದ ನವ ವಧು!

Posted By : SBV SBV
Source : UNI
ಚೆನ್ನೈ: ಆ ಜೋಡಿ ಮದುವೆಯಾಗಿ ಕೇವಲ 20 ದಿನಗಳಾಗಿತ್ತಷ್ಟೆ  ಪತಿ ಮದ್ಯವ್ಯಸನಿ ಎಂದು ತಿಳಿದ ನವ ವಧು ಆತನೊಡನೆ ಬದುಕು ಕಷ್ಟ ಎಂದು ಭಾವಿಸಿ ಬೆಂಕಿ ಹಚ್ಚಿ ಸಜೀವ ದಹನ ಮಾಡಿಬಿಟ್ಟಿದ್ದಾಳೆ. 

ತಮಿಳುನಾಡಿನ ತಿಂಡಿವನಂ ಸಮೀಪದ ಟಿ ವಿ ನಗರ್ ಬಳಿ ಗುರುವಾರ ರಾತ್ರಿ ಈ ಭೀಕರ ಘಟನೆ ನಡೆದಿದ್ದು, ಮೃತನನ್ನು ಸೇತುಪತಿ(24) ಎಂದು ಗುರುತಿಸಲಾಗಿದೆ. ಪಂಕ್ಚರ್ ಶಾಪ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೇತುಪತಿ ಈ ಮೊದಲೇ ಪರಿಚಯವಿದ್ದ ಮುರಗವೇಣಿಯನ್ನು 20 ದಿನಗಳ ಹಿಂದೆ ಮದುವೆಯಾಗಿದ್ದ.  

ಆದರೆ ವಿವಾಹದ ಬಳಿಕ ಪತ್ನಿಯ ಮೇಲೆ ಶಂಕೆ ವ್ಯಕ್ತಪಡಿಸಲು ಆರಂಭಿಸಿದ್ದ ಅಲ್ಲದೆ ಕುಡಿತದ ದಾಸನಾದ ಕಾರಣ, ಇಬ್ಬರ ನಡುವಿನ ಸಂಬಂಧ ಹದಗೆಡಲಾರಂಭಿಸಿತು.
Stay up to date on all the latest ರಾಷ್ಟ್ರೀಯ news
Poll
Covid-19_vaccine1

ಕೋವಿಡ್-19 ಲಸಿಕೆ ಅಂತಿಮವಾಗಿ ನಮಗೆ ಸಹಜ ಸ್ಥಿತಿಗೆ ಬರಲು ಸಹಾಯ ಮಾಡುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp