ವಿಚಿತ್ರವಾದರು ನಿಜ: ಲಡ್ಡೂಗೆ ಹೆದರಿ ಪತ್ನಿಗೆ ವಿಚ್ಛೇದನ ಕೊಡಲು ಮುಂದಾದ ಪತಿರಾಯ!

ಮಂತ್ರವಾದಿ ಹೇಳಿದನೆಂದು ನನ್ನ ಪತ್ನಿ ಪ್ರತಿದಿನ ನನಗೆ ತಿನ್ನಲ್ಲು ಲಡ್ಡೂ ಕೊಡುತ್ತಿದ್ದಾಳೆ. ಹೀಗಾಗಿ ಪತ್ನಿಯಿಂದ ವಿಚ್ಛೇದನ ಕೊಡಿಸಿ ಎಂದು ಪತಿರಾಯನೊಬ್ಬ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದಾನೆ.

Published: 20th August 2019 02:59 PM  |   Last Updated: 20th August 2019 02:59 PM   |  A+A-


laddoo

ಲಡ್ಡೂ

Posted By : Vishwanath S
Source : Online Desk

ಮೇರಠ್: ಮಂತ್ರವಾದಿ ಹೇಳಿದನೆಂದು ನನ್ನ ಪತ್ನಿ ಪ್ರತಿದಿನ ನನಗೆ ತಿನ್ನಲ್ಲು ಲಡ್ಡೂ ಕೊಡುತ್ತಿದ್ದಾಳೆ. ಹೀಗಾಗಿ ಪತ್ನಿಯಿಂದ ವಿಚ್ಛೇದನ ಕೊಡಿಸಿ ಎಂದು ಪತಿರಾಯನೊಬ್ಬ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದಾನೆ. 

ಈ ದಂಪತಿಗೆ ಹತ್ತು ವರ್ಷಗಳ ಹಿಂದೆ ಮದುವೆಯಾಗಿದ್ದು ಮೂವರು ಮಕ್ಕಳಿದ್ದಾರೆ. ಪತಿ ಅನಾರೋಗ್ಯದಿಂದ ಬಳಲುತ್ತಿದ್ದಾನೆಂದು ಎಂದು ಪತ್ನಿಯೊಬ್ಬಳು ಮಂತ್ರವಾದಿ ಬಳಿ ಹೋಗಿ ಸಮಸ್ಯೆಗೆ ಪರಿಹಾರ ಕೇಳಿದ್ದಾಳೆ. 

ಇದಕ್ಕೆ ಮಂತ್ರವಾದಿ ಆಕೆಗೆ ನಿಮ್ಮ ಗಂಡನಿಗೆ ಬೆಳಗ್ಗೆ 4 ಹಾಗೂ ರಾತ್ರಿ 4 ಲಡ್ಡೂಗಳನ್ನು ಮಾತ್ರ ಕೊಡಿ. ಮಧ್ಯದಲ್ಲಿ ತಿನ್ನಲು ಅವರಿಗೆ ಏನನ್ನು ಕೊಡಬೇಡ ಎಂದು ಹೇಳಿದ್ದನು. ಇದಾದ ಬಳಿಕ ಪತಿಗೆ ದಿನಂಪ್ರತಿ ಲಡ್ಡೂ ಕೊಡುತ್ತಿದ್ದಳು. ಇದರಿಂದ ಬೇಸತ್ತ ಗಂಡ ವಿಚ್ಛೇದನಕ್ಕಾಗಿ ಮೇರಠ್ ಜಿಲ್ಲೆಯ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ. 

ಕೌಟುಂಬಿಕ ನ್ಯಾಯಾಲಯ ಸಹ ಇಬ್ಬರನ್ನು ಕರೆಸಿ ಕೌನ್ಸಿಲಿಂಗ್ ಮಾಡಿದ್ದರು. ಆದರೆ ಪತ್ನಿ ತನ್ನ ಮೂಢನಂಬಿಕೆಯಲ್ಲಿ ಬಲವಾದ ನಂಬಿಕೆ ಹೊಂದಿದ್ದು ಕೌನ್ಸಿಲಿಂಗ್ ಸದಸ್ಯರು ಆಕೆಗೆ ಬುದ್ದಿ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

Stay up to date on all the latest ರಾಷ್ಟ್ರೀಯ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp