ಆರ್ಥಿಕತೆ ಕುರಿತ ಟೀಕೆಗಳನ್ನು ಕೇಳಲು ಮೋದಿ ಸರ್ಕಾರ ಸಿದ್ದವಾಗಿಲ್ಲ: ಕಿರಣ್ ಮಜುಂದಾರ್ ಶಾ

ಬಯೋಕಾನ್ ಮುಖ್ಯಸ್ಥೆ, ಭಾರತದ ಖಾಯತ ಉದ್ಯಮಿಗಳಲ್ಲಿ ಒಬ್ಬರಾದ ಕಿರಣ್ ಮಜುಂದಾರ್ ಶಾ ಆರ್ಥಿಕತೆಯ ಬಗ್ಗೆ ಯಾವುದೇ ಟೀಕೆಗಳನ್ನು ಕೇಳಲು ಕೇಂದ್ರದ ನರೇಂದ್ರ ಮೋದಿ ಸರ್ಕಾರ ಬಯಸುವುದಿಲ್ಲ ಎಂಬ ಮೂಲಕ ಬಜಾಜ್ ಸಂಸ್ಥೆಯ ಮುಖ್ಯಸ್ಥ ರಾಹುಲ್ ಬಜಾಜ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. 
ಕಿರಣ್ ಮಜುಂದಾರ್ ಶಾ
ಕಿರಣ್ ಮಜುಂದಾರ್ ಶಾ

ನವದೆಹಲಿ: ಬಯೋಕಾನ್ ಮುಖ್ಯಸ್ಥೆ, ಭಾರತದ ಖಾಯತ ಉದ್ಯಮಿಗಳಲ್ಲಿ ಒಬ್ಬರಾದ ಕಿರಣ್ ಮಜುಂದಾರ್ ಶಾ ಆರ್ಥಿಕತೆಯ ಬಗ್ಗೆ ಯಾವುದೇ ಟೀಕೆಗಳನ್ನು ಕೇಳಲು ಕೇಂದ್ರದ ನರೇಂದ್ರ ಮೋದಿ ಸರ್ಕಾರ ಬಯಸುವುದಿಲ್ಲ ಎಂಬ ಮೂಲಕ ಬಜಾಜ್ ಸಂಸ್ಥೆಯ ಮುಖ್ಯಸ್ಥ ರಾಹುಲ್ ಬಜಾಜ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. 

ಕೇಂದ್ರ ಸರ್ಕಾರ ಭಾರತೀಯ ಉದ್ಯಮಿಗಳ ಆಶಯಗಳಿಗೆ ಸ್ಪಂದಿಸಬೇಕು. ಕುಸಿಯುತ್ತಿರುವ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಶ್ರಮಿಸಬೇಕು ಎಂದು ಶಾ ಹೇಳಿದ್ದಾರೆ."ಸರ್ಕಾರವು ಭಾರತೀಯ ಉದ್ಯಮವಲಯದ ಸಮಸ್ಯೆಗಳಿಗೆ ಸ್ಪಂದಿಸಲಿದೆ ಎಂಬ ಭರವಸೆ ಹೊಂದಿದ್ದೇನೆ. ಖರೀದಿ, ಬೆಳವಣಿಗೆಯನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಮಾರ್ಗೋಪಾಯ ಹುಡುಕಬೇಕಿದೆ. ಈಗ ಣಾವೆಲ್ಲರೂ ಅಸ್ಪ್ರೂಶ್ಯರಾಗಿದ್ದೇವೆ. ದೇಶದ ಆರ್ಥಿಕತೆ ಕುರಿತ ಯಾವ ಟೀಕೆಗಳನ್ನು ಆಲಿಸಲು ಸರ್ಕಾರ ಬಯಸುತ್ತಿಲ್ಲ" ಶಾ ಟ್ವೀಟ್ ನಲ್ಲಿ ಹೇಳೀದ್ದಾರೆ.

ಇದಕ್ಕೆ ಮುನ್ನ ಮುಂಬೈನಲ್ಲಿ ನಡೆದ ದಿ ಎಕನಾಮಿಕ್ ಟೈಮ್ಸ್ 'ಇಟಿ ಅವಾರ್ಡ್ಸ್ 2019' ಕಾರ್ಯಕ್ರಮದಲ್ಲಿ ಉದ್ಯಮಿ ರಾಹುಲ್ ಬಜಾಜ್ ಮಾತನಾಡಿ ಯುಪಿಎ- 2 ಮನಮೋಹನ್ ಸಿಂಗ್ ಸರ್ಕಾರದಲ್ಲಿ ಎಲ್ಲರನ್ನೂ ಟೀಕಿಸಬಹುದಾಗಿತ್ತು. ಆದರೆ ಈಗ ಮೋದಿ ಸರ್ಕಾರವನ್ನು ಟೀಕಿಸಲು ಆಗದ ವಾತಾವರಣ ನಿರ್ಮಾಣವಾಗಿದೆ. ಒಂದೊಮ್ಮೆ ನಿಂದಿಸಿದ್ದಾದರೆ ನೀವು ನಮ್ಮನ್ನು ಪ್ರಶಂಸಿಸುತ್ತೀರಿ ಎನ್ನುವ ಯಾವ ಭರವಸೆಯೂ ಇಲ್ಲ. ನನ್ನ ತಪ್ಪು ಕಲ್ಪನೆ ಇದಾಗಲಿಕ್ಕೂ ಸಾಕು. ಆದರೆ ಉದ್ಯಮ ವಲಯದ ಬಹುತೇಕರು ಹೀಗೆಂದು ಭಾವಿಸಿದ್ದಾರೆ ಎಂದಿದ್ದರು.

ಅವರ ಹೇಳಿಕೆಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿ ಹಲವರು ದನಿಗೂಡಿಸಿದ್ದರು. ಇದೀಗ ಬಯೋಕಾನ್ ನಿರ್ದೇಶಕಿ ಶಾ ಸಹ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಆರೋಪ ಸುಳ್ಳೆಂದ ಬಿಜೆಪಿ

ಇನ್ನು ಕಿರಣ್ ಮಜುಂದಾರ್ ಶಾ ಹೇಳಿಕೆಯ ಕುರಿತು ಪ್ರತಿಕ್ರಯಿಸಿರುವ ಬಿಜೆಪಿ ಮುಖಂಡ ಅಮಿತ್ ಮಾಳವೀಯ "ಕೆಲ ಉದ್ಯಮಿಗಳಿಗೆ ಸಿಕ್ಕುತ್ತಿದ್ದ ಸವಲತ್ತುಗಳು "ಪಿಎಂ ನರೇಂದ್ರ ಮೋದಿಯವರು ಅಧಿಕಾರ ಸ್ವೀಕರಿಸಿದ ನಂತರ ನಿಂತುಹೋಗಿದೆ, ಅದಕ್ಕಾಗಿ ಇಂತಹಾ ಹೇಳಿಕೆ ನೀಡುತ್ತಿದ್ದಾರೆ" ಎಂದಿದ್ದಾರೆ.

ಮೋದಿ ಸರ್ಕಾರ ಸರ್ವಾಧಿಕಾರಿ ಸರ್ಕಾರವಲ್ಲ ಮತ್ತು ಯಾವುದೇ ರೀತಿಯ ಟೀಕೆಗಳನ್ನು ಸ್ವೀಕರಿಸುವುದಿಲ್ಲ ಎಂಬ ಆರೋಪಗಳು "ಸತ್ಯದಿಂದ ದೂರ"ವಾದದ್ದು ಎಂದ ಮಾಳವೀಯ "ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದಾಗಿನಿಂದಲೂ ಈ ಆರೋಪಗಳನ್ನು ಎತ್ತಲಾಗುತ್ತಿದೆ. ಯಾಕೆಂದರೆ ಹಿಂದಿನ ಆಡಳಿತವು ಕೆಲವು ಕಾರ್ಪೊರೇಟ್ ಸಂಸ್ಥೆಗಳಿಗೆ ಅನುಕೂಲವಾಗುವಂತಹ ನೀತಿಗಳನ್ನು ರೂಪಿಸಿತ್ತು. ಕೆಲವು ಕಾರ್ಪೊರೇಟ್ ಸಂಸ್ಥೆಗಳು ಹೇಗೆ ಇರಬೇಕೆಂದು ಬಯಸುತ್ತವೆ ಎಂಬುದರ ಅರಿವಿನೊಡನೆ ಆರ್ಥಿಕ ನೀತಿ ರೂಪಿಸಿ  ಬ್ಯಾಂಕ್ ಸಾಲಗಳನ್ನು ನಿರ್ದಾಕ್ಷಿಣ್ಯವಾಗಿ ನೀಡಲಾಯಿತು. ಆದರೆ ಪಿ.ಎಂ. ಮೋದಿ ಅವರ ಆಡಳಿತವು ನ್ಯಾಯಯುತ ಮತ್ತು ನ್ಯಾಯಸಮ್ಮತವಾದ ಆಡಳಿತವಾಗಿದ್ದು, ಪ್ರತಿಯೊಬ್ಬರನ್ನೂ ಸಮಾನವಾಗಿ ಕಾಣುತ್ತಿದೆ" ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com