ನಿತ್ಯಾನಂದ  ಪತ್ತೆಗೆ ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸಲು ಗುಜರಾತ್  ಪೊಲೀಸರ ಮನವಿ  

ತಲೆಮರೆಸಿಕೊಂಡಿರುವ  ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಸ್ವಾಮೀಜಿ ಪತ್ತೆಗೆ ‘ಬ್ಲೂ ಕಾರ್ನರ್‌ ನೋಟಿಸ್‌’ ಜಾರಿಗೊಳಿಸಲು ಗುಜರಾತ್‌ ರಾಜ್ಯ ಪೊಲೀಸರು ಈಗ ಇಂಟರ್‌ಪೋಲ್‌ಗೆ ಮನವಿ ಮಾಡಲಿದ್ದಾರೆ.

Published: 06th December 2019 09:47 AM  |   Last Updated: 06th December 2019 09:47 AM   |  A+A-


Nithyananda

ನಿತ್ಯಾನಂದ

Posted By : Shilpa D
Source : Online Desk

ಅಹಮದಾಬಾದ್: ತಲೆಮರೆಸಿಕೊಂಡಿರುವ  ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಸ್ವಾಮೀಜಿ ಪತ್ತೆಗೆ ‘ಬ್ಲೂ ಕಾರ್ನರ್‌ ನೋಟಿಸ್‌’ ಜಾರಿಗೊಳಿಸಲು ಗುಜರಾತ್‌ ರಾಜ್ಯ ಪೊಲೀಸರು ಈಗ ಇಂಟರ್‌ಪೋಲ್‌ಗೆ ಮನವಿ ಮಾಡಲಿದ್ದಾರೆ.

ಅಹಮದಾಬಾದ್‌ನ ಗ್ರಾಮೀಣ ಠಾಣೆ ಪೊಲೀಸರು ಈ ಕುರಿತು ರಾಜ್ಯದ ಅಪರಾಧ ತನಿಖಾ ದಳಕ್ಕೆ (ಸಿಐಡಿ) ಪತ್ರ ಬರೆದಿದ್ದಾರೆ. ನಿತ್ಯಾನಂದ ವಿರುದ್ಧದ ಅಪಹರಣ ಮತ್ತು ಕಾನೂನುಬಾಹಿರವಾಗಿ ಇರಿಸಿಕೊಂಡ ಆರೋಪ ಕುರಿತು ಸಿಐಡಿ ತನಿಖೆ ನಡೆಸುತ್ತಿದೆ.  

ತಲೆಮರೆಸಿಕೊಂಡಿರುವ ನಿತ್ಯಾನಂದನ ಪತ್ತೆಗೆ ಇದು ಅಗತ್ಯ ಎಂದು ಪತ್ರದಲ್ಲಿ ಕೋರಲಾಗಿದೆ ಎಂದು ಅಧಿಕಾರಿ ತಿಳಿಸಿದರು.

ಸದಸ್ಯ ರಾಷ್ಟ್ರಗಳ ನಡುವೆ ಅಪರಾಧಿಗಳ ಮಾಹಿತಿ ವಿನಿಮಯ ಮಾಡಿಕೊಳ್ಳಲು ಬ್ಲೂ ಕಾರ್ನರ್‌ ನೋಟಿಸ್ ಕಡ್ಡಾಯವಾಗಿದೆ.

ಅಹಮದಾಬಾದ್ ನಲ್ಲಿರುವ ನಿತ್ಯಾನಂದ ಆಶ್ರಮದಿಂದ ಕಳೆದ ತಿಂಗಳು ಇಬ್ಬರು ಹೆಣ್ಣುಮಕ್ಕಳು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿತ್ಯಾನಂದ ವಿರುದ್ಧ  ಎಫ್ ಐ ಆರ್ ದಾಖಲಾಗಿತ್ತು. 

Stay up to date on all the latest ರಾಷ್ಟ್ರೀಯ news
Poll
Babri Masjid

ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ನ್ಯಾಯ ಒದಗಿಸಲಾಗಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp