'ಮೇಕ್ ಇನ್ ಇಂಡಿಯಾ'ದಿಂದ 'ರೇಪ್ ಇನ್ ಇಂಡಿಯಾ'ದತ್ತ ಭಾರತ ಸಾಗಿದೆ: ಕೇಂದ್ರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಮೇಕ್ ಇನ್ ಇಂಡಿಯಾ'ದಿಂದ 'ರೇಪ್ ಇನ್ ಇಂಡಿಯಾ'ದತ್ತ ಭಾರತ ಸಾಗುತ್ತಿದೆ ಎಂದು ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. 

Published: 10th December 2019 01:41 PM  |   Last Updated: 10th December 2019 01:41 PM   |  A+A-


From 'Make in India', nation heading towards 'rape in India': Congress in Lok Sabha

'ಮೇಕ್ ಇನ್ ಇಂಡಿಯಾ'ದಿಂದ 'ರೇಪ್ ಇನ್ ಇಂಡಿಯಾ'ದತ್ತ ಭಾರತ ಸಾಗಿದೆ: ಕೇಂದ್ರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

Posted By : Manjula VN
Source : The New Indian Express

ನವದೆಹಲಿ: 'ಮೇಕ್ ಇನ್ ಇಂಡಿಯಾ'ದಿಂದ 'ರೇಪ್ ಇನ್ ಇಂಡಿಯಾ'ದತ್ತ ಭಾರತ ಸಾಗುತ್ತಿದೆ ಎಂದು ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. 

ಲೋಕಸಭೆಯಲ್ಲಿ ಮಾತನಾಡಿರುವ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿಯವರು, ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅಪರಾಧ ಕೃತ್ಯಗಳ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾತನಾಡಬೇಕೆಂದು ಆಗ್ರಹಿಸಿದ್ದಾರೆ. 

ಮಹಿಳೆಯರ ಮೇಲಿನ ದೌರ್ಜನ್ಯಗಳ ಕುರಿತು ಪ್ರಧಾನಿ ಮೋದಿಯವರು ಮೌನದಿಂದಲೇ ಮಾತನಾಡುತ್ತಿರುವುದು ನಿಜಕ್ಕೂ ದುರಾದೃಷ್ಟಕರ ಸಂಗತಿ. ಮೇಕ್ ಇನ್ ಇಂಡಿಯಾ ದಿಂದ ಭಾರತ ನಿಧಾನಗತಿಯಲ್ಲಿ ರೇಪ್ ಇನ್ ಇಂಡಿಯಾದತ್ತ ಸಾಗುತ್ತಿದೆ ಎಂದು ಹೇಳಿದ್ದಾರೆ. 

ಉತ್ತರಪ್ರದೇಶದ ಉನ್ನಾವೋ ಹಾಗೂ ಹೈದರಾಬಾದ್ ಪ್ರಿಯಾಂಕಾ ರೆಡ್ಡಿ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಕುರಿತು ಚೌಧರಿಯವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಹೈದರಾಬಾದ್ ನಲ್ಲಿ ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಮೇಲೆ ಕಾಮುಕರು ಅಟ್ಟಹಾಸ ಮೆರೆದಿದ್ದರು, ಅತ್ಯಾಚಾರ ನಡೆಸಿದ ಆಕೆಯನ್ನು ಸಜೀವ ದಹನ ಮಾಡಿದ್ದರು. ಇದೇ ರೀತಿಯ ಘಟನೆ ಉತ್ತರಪ್ರದೇಶದಲ್ಲಿಯೂ ನಡೆದಿತ್ತು. ಯುವತಿ ಮೇಲೆ ಅತ್ಯಾಚಾರ ನಡೆಸಿದ್ದ ಕಾಮುಕರು ನಂತರ ಆಕೆ ನ್ಯಾಯಾಲಯಕ್ಕೆ ವಿಚಾರಣೆಗೆ ಹೋಗುತ್ತಿದ್ದ ವೇಳೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು. ತೀವ್ರ ಹೋರಾಟದ ಬಳಿಕ ಕೆಲ ದಿನಗಳ ಹಿಂದಷ್ಟೇ ಯುವತಿ ಕೊನೆಯುಸಿರೆಳೆದಿದ್ದಳು. 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp