ಪೌರತ್ವ ಮಸೂದೆಯೊಂದಿಗೆ ಎನ್ಆರ್'ಸಿ ತಳುಕು ಬೇಡ, ಶೀಘ್ರದಲ್ಲೇ ದೇಶದಾದ್ಯಂತ ಎನ್ಆರ್'ಸಿ ಜಾರಿ: ಅಮಿತ್ ಶಾ

ಪೌರತ್ವ ಮಸೂದೆ (ಸಿಎಬಿ)ಯೊಂದಿಗೆ ರಾಷ್ಟ್ರೀಯ ನಾಗರೀಕ ನೋಂದಣಿ (ಎನ್ಆರ್'ಸಿ)ಯನ್ನು ತಳುಕು ಹಾಕಬೇಡಿ, ಶೀಘ್ರದಲ್ಲಿಯೇ ದೇಶದಾದ್ಯಂತ ಎನ್ಆರ್'ಸಿಯನ್ನು ಜಾರಿಗೆ ತರಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆ. 
ಅಮಿತ್ ಶಾ
ಅಮಿತ್ ಶಾ
Updated on

ನವದೆಹಲಿ: ಪೌರತ್ವ ಮಸೂದೆ (ಸಿಎಬಿ)ಯೊಂದಿಗೆ ರಾಷ್ಟ್ರೀಯ ನಾಗರೀಕ ನೋಂದಣಿ (ಎನ್ಆರ್'ಸಿ)ಯನ್ನು ತಳುಕು ಹಾಕಬೇಡಿ, ಶೀಘ್ರದಲ್ಲಿಯೇ ದೇಶದಾದ್ಯಂತ ಎನ್ಆರ್'ಸಿಯನ್ನು ಜಾರಿಗೆ ತರಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆ. 

ಲೋಕಸಭೆಯಲ್ಲಿ ಎನ್ಆರ್'ಸಿ ಹಾಗೂ ಸಿಎಬಿ ಕುರಿತು ವಿವರಣೆ ನೀಡಿರುವ ಅಮಿತ್ ಶಾ ಅವರು, ತಿದ್ದುಪಡಿಯಾಗಿರುವ ಪೌರತ್ವ ಮಸೂದೆಯೊಂದಿಗೆ ಎನ್ಆರ್'ಸಿಯನ್ನು ತಳುಕು ಹಾಕಬೇಡಿ. ಇದರ ಅಗತ್ಯವೂ ಇಲ್ಲ. ಪೌರತ್ವ ಮಸೂದೆಯಂತೆಯೇ ರಾಷ್ಟ್ರೀಯ ನಾಗರೀಕ ನೋಂದಣಿ ಕುರಿತಂತೆಯೂ ವಿವರಣೆಯನ್ನು ನೀಡುತ್ತೇನೆ. ಭರವಸೆಗಳನ್ನೂ ನೀಡುತ್ತೇನೆ. ಶೀಘ್ರದಲ್ಲಿಯೇ ದೇಶದಾದ್ಯಂತ ಎನ್ಆರ್'ಸಿ ಜಾರಿಗೆ ತರಲಾಗುತ್ತದೆ ಎಂದು ಹೇಳಿದ್ದಾರೆ. 

ಅಕ್ರಮವಾಗಿ ವಲಸೆ ಬಂದವರನ್ನು, ಪ್ರಮುಖವಾಗಿ ಬಾಂಗ್ಲಾದೇಶದಿಂದ ಅಸ್ಸಾಂ ರಾಜ್ಯ ಪ್ರವೇಶಿಸಿ ಮಾರ್ಚ್ 25, 1971ರ ನಂತರ ಅಲ್ಲೇ ನೆಲೆಸಿದವರನ್ನು ಅವರ ದೇಸಕ್ಕೆ ಗಡಿಪಾರು ಮಾಡುವ ಉದ್ದೇಶವನ್ನು ರಾಷ್ಟ್ರೀಯ ನಾಗರೀಕ ನೋಂದಣಿ ಹೊಂದಿದೆ. 

ಬಾಂಗ್ಲಾದೇಶದಿಂದ ಜನರು ಅಕ್ರಮವಾಗಿ ರಾಜ್ಯದ ಒಳ ನುಸುಳುವುದರಿಂದ ಅಸ್ಸಾಂನ ಮೂಲ ಸಂಸ್ಕೃತಿ ಹಾಳಾಗುತ್ತಿದೆ. ಮೂಲ ನಿವಾಸಿಗಳ ಜನಜೀವನದ ಮೇಲೆ ಈ ಅಕ್ರಮ ವಲಸಿಗರ ಪ್ರಭಾವ ಬೀರುತ್ತಿದೆ ಎಂದು ವಲಸಿಗರನ್ನು ರಾಜ್ಯದಿಂದ ಹೊರಹಾಕಲು ಕೂಗು ಎದ್ದಿತ್ತು. ಬಾಂಗ್ಲಾದಿಂದ ಅಕ್ರಮ ವಲಸೆ ತೀರಾ ಜಾಸ್ತಿಯಾದಾಗ ಅಸ್ಸಾಂ ರಾಜ್ಯದಲ್ಲಿ ಹೋರಾಟಗಳು ನಡೆದವು. ಈ ಸಮಯದಲ್ಲಿ ಹುಟ್ಟಿಕೊಂಡ ಅಸ್ಸಾಂ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಅಸ್ಸಾಂ ರಾಜ್ಯದಲ್ಲಿ ವಲಸಿಗರ ಗಡಿಪಾರು ಮಾಡುವಂತೆ ಒತ್ತಾಯಿಸಿ ಕ್ರಾಂತಿ ನಡೆದಿತ್ತು. ಈ ವಿವಾದ ದೊಡ್ಡದಾಗಿ ನಂತರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. 

ಅಸ್ಸಾಂ ರಾಜ್ಯದಲ್ಲಿ ಮೂಲ ನಿವಾಸಿಗಳು ಯಾರು ಮತ್ತು ವಲಸಿಗರು ಯಾರು ಎಂದು ವಿಂಗಡಿಸಲು ಕೇಂದ್ರ ಸರ್ಕಾರಕ್ಕೆ 2013ರಲ್ಲಿ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು. ಅದರಂತೆ ಆರು ವರ್ಷಗಳ ನಂತರ ಕೇಂದ್ರ ಸರ್ಕಾರ ಪಟ್ಟಿ ಬಿಡುಗಡೆ ಮಾಡಿತ್ತು. 

1985ರಲ್ಲಿ ನಡೆದ ಒಪ್ಪಂದದ ಪ್ರಕಾರ ಕೆಲವು ನಿಯಮಗಳನ್ನು ರೂಪಿಸಲಾಗಿದ್ದು, ಅದಲ್ಲಿ 1971 ಮಾರ್ಚ್ 24ರ ಮಧ್ಯರಾತ್ರಿಯವರೆಗೆ ಅಸ್ಸಾಂ ರಾಜ್ಯದ ಒಳಗೆ ಪ್ರವೇಶಿಸಿದವರು ಅಸ್ಸಾಂ ನಿವಾಸಿಗಳು ಎಂದು ಪರಿಗಣಿಸಲಾಗಿದೆ. ಏಕೆಂದರೆ 1971 ಮಾರ್ಚ್ 22ರ ನಂತರ ಬಾಂಗ್ಲಾ ದೇಶದಲ್ಲಿ ಸ್ವಾತಂತ್ರ್ಯದ ಹೋರಾಟ ಆರಂಭವಾದ ಕಾರಣ ನಂತರದ ದಿನಗಳಲ್ಲಿ ವಲಸಿಗರ ಸಂಖ್ಯೆ ತೀವ್ರ ಹೆಚ್ಚಿತ್ತು. 

ಜನವರಿ 1 1966ರ ನಂತರ ಮತ್ತು ಮಾರ್ಚ್ 25 1971ರ ಒಳಗೆ ಅಸ್ಸಾಂ ರಾಜ್ಯವನ್ನು ಪ್ರವೇಶಿಸಿದವರು ಪ್ರಾದೇಶಿಕ ವಿದೇಶಿ ನೋಂದಣಿ ಅಧಿಕಾರಿಯ ಬಳಿಯಲ್ಲಿ ಅಕ್ರಮ ವಲಸಿಗರಲ್ಲ ಎಂದು ಪತ್ರ ಪಡೆದಿರಬೇಕು. 1971ರ ಮೊದಲು ಅಸ್ಸಾಂ ರಾಜ್ಯ ನಿವಾಸಿಗಳು ಸರ್ಕಾರಿ ದಾಖಲೆ ಹೊಂದಿರುವವರು ಮತ್ತು ಅವರ ಮುಂದಿನ ಪೀಳಿಗೆಯನ್ನು ಅಸ್ಸಾಂ ಪ್ರಜೆಗಳನ್ನು ಪರಿಗಣಿಸಲಾಗುತ್ತದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com