ಧರ್ಮದ ಉಲ್ಲೇಖವಿರುವ ಯಾವುದೇ ಗುರುತಿನ ಚೀಟಿ ಇಲ್ಲವೇ..? ನಟಿ ದಿಯಾ ಮಿರ್ಜಾ ಕಾಲೆಳೆದ ನೆಟ್ಟಿಗರು!

ಧರ್ಮದ ಆಧಾರದ ಮೇಲೆ ಭಾರತೀಯತೆಯನ್ನು ಸಾಬೀತು ಪಡಿಸಬೇಕೇ ಎಂದು ಪ್ರಶ್ನಿಸುವ ಮೂಲಕ ಪೌರತ್ವ ತಿದ್ದುಪಡಿ ಕಾಯ್ಗೆಗೆ ವಿರೋಧ ವ್ಯಕ್ತಪಡಿಸಿದ್ದ ಬಾಲಿವುಡ್ ನಟಿ ದಿಯಾ ಮಿರ್ಜಾ ಅವರನ್ನು ನೆಟ್ಟಿಗರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಬಾಲಿವುಡ್ ನಟಿ ದಿಯಾ ಮಿರ್ಜಾ
ಬಾಲಿವುಡ್ ನಟಿ ದಿಯಾ ಮಿರ್ಜಾ

ನನ್ನ ತಾಯಿ ಹಿಂದು, ಹೆತ್ತ ತಂದೆ ಕ್ರಿಶ್ಚಿಯನ್, ಸಾಕು ತಂದೆ ಮುಸ್ಲಿಂ.. ಹಾಗಾದರೆ ನನ್ನ ಧರ್ಮ ಯಾವುದು ಎಂದು ಹೇಗೆ ಹೇಳಲಿ?

ಮುಂಬೈ: ಧರ್ಮದ ಆಧಾರದ ಮೇಲೆ ಭಾರತೀಯತೆಯನ್ನು ಸಾಬೀತು ಪಡಿಸಬೇಕೇ ಎಂದು ಪ್ರಶ್ನಿಸುವ ಮೂಲಕ ಪೌರತ್ವ ತಿದ್ದುಪಡಿ ಕಾಯ್ಗೆಗೆ ವಿರೋಧ ವ್ಯಕ್ತಪಡಿಸಿದ್ದ ಬಾಲಿವುಡ್ ನಟಿ ದಿಯಾ ಮಿರ್ಜಾ ಅವರನ್ನು ನೆಟ್ಟಿಗರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಹೌದು...ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಬೆನ್ನಲ್ಲೇ, ದೇಶಾದ್ಯಂತ ಎನ್ ಆರ್ ಸಿ ಜಾರಿಯಾಗುವ ನಿರೀಕ್ಷೆ ಇದ್ದು ಇದೇ ವಿಚಾರವಾಗಿ ಬಾಲಿವುಡ್ ನಟಿ ದಿಯಾ ಮಿರ್ಜಾ ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ. ಟ್ವಿಟರ್ ನಲ್ಲಿ ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ನನ್ನ ತಾಯಿ ಹಿಂದುವಾಗಿದ್ದು ನನ್ನ ಹೆತ್ತ ತಂದೆ ಕ್ರಿಶ್ಚಿಯನ್. ನನ್ನ ಸಾಕು ತಂದೆ ಓರ್ವ ಮುಸ್ಲಿಂ ಆಗಿದ್ದು, ನನ್ನ ಎಲ್ಲ ದಾಖಲಾತಿಗಳಲ್ಲಿ ಧರ್ಮದ ಕಾಲಂನ್ನು ಖಾಲಿ ಬಿಡಲಾಗಿದೆ. ನಾನು ಭಾರತೀಯಳೆಂದು ಸಾಬೀತುಪಡಿಸಲು ಧರ್ಮ ಎಂದೂ ಪರಿಗಣನೆಗೆ ಬಂದಿಲ್ಲ. ಮುಂದೆಯೂ ಬರದಿರಲಿ ಎಂಬುದು ನನ್ನ ಆಶಯ ಎಂದು ದಿಯಾ ಟ್ವೀಟ್ ಮಾಡಿದ್ದಾರೆ.

ಇನ್ನು ದಿಯಾ ಟ್ವೀಟ್ ಗೆ ತಿರುಗೇಟು ನೀಡಿರುವ ನೆಟ್ಟಿಗರು, ಕೆಲ ಸೆಲೆಬ್ರಿಟಿಗಳು ಎಂದೆನಿಸಿಕೊಂಡವರು ಜನರಲ್ಲಿ ಹೇಗೆಲ್ಲಾ ತಪ್ಪು ಮಾಹಿತಿ ಹಂಚುತ್ತಾರೆ ಎನ್ನುವುದಕ್ಕೆ ದಿಯಾ ಉತ್ತಮ ಉದಾಹರಣೆಯಾಗಿದ್ದು, ದಿಯಾ ಅವರೇ ನೀವು ಪಾಸ್ ಪೋರ್ಟ್ ಮತ್ತು ಆಧಾರ್ ನಂಬರ್ ಗೆ ಅರ್ಜಿ ಸಲ್ಲಿಸುವಾಗ ಧರ್ಮದ ಉಲ್ಲೇಖವನ್ನೇ ಮಾಡಿಲ್ಲವೇ. ಧರ್ಮದ ಕಾಲಂ ಇಲ್ಲದೇ  ಪಾಸ್ ಪೋರ್ಟ್ ನಲ್ಲಿ ವಿದೇಶಗಳನ್ನು ಸುತುತ್ತಿರುವಿರೇ ಎಂದು ನೆಟ್ಟಿಗರು ದಿಯಾ ಮಿರ್ಜಾ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. 

ಮತ್ತೊಂದು ಟ್ವೀಟ್ ನಲ್ಲಿ ದಿಯಾ ಕಾಲೆಳೆದಿರುವ ನೆಟ್ಟಿಗರು, ಸಿಎಎ ಮತ್ತು ಎನ್ ಆರ್ ಸಿ ಭಾರತೀಯ ಪ್ರಜೆಗಳಿಗಲ್ಲ. ವಿದೇಶಿ ನಿರಾಶ್ರಿತರಿಗೆ ಎಂಬ ಕನಿಷ್ಠ ಜ್ಞಾನ ಕೂಡ ಇಲ್ಲದ ನಿಮ್ಮಂತಹ ಸೆಲೆಬ್ರಿಟಿಗಳು ತಪ್ಪುಮಾಹಿತಿಗಳನ್ನು ಹಂಚುತ್ತಿದ್ದಾರೆ. ಮೊದಲು ನಿಮ್ಮನ್ನು ನಿರಾಶ್ರಿತರ ಪಟ್ಟಿಗೆ ಸೇರಿಬೇಕು ಎಂದು ಕಿಡಿಕಾರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com