ದೆಹಲಿ ವಿದ್ಯಾರ್ಥಿಗಳಿಗೆ ಪಿಜಿ ಖಾಲಿ ಮಾಡಲು ಹೇಳದ್ರಾ ಪೊಲೀಸರು?: ವೈರಲ್ ವಿಡಿಯೋ ಅಸಲಿಯತ್ತೇನು? ಇಲ್ಲಿದೆ ಮಾಹಿತಿ 

ದೆಹಲಿ ಪೊಲೀಸರು ಮುಖರ್ಜಿ ನಗರ್ ಏರಿಯಾದಲ್ಲಿರುವ ವಿದ್ಯಾರ್ಥಿಗಳಿಗೆ ಪಿಜಿ ತೊರೆಯುವಂತೆ ಹೇಳುತ್ತಿರುವ ವಿಡಿಯೋ ವೈರಲ್ ಆಗಿದೆ. 

ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ ಎಂದು ವೈರಲ್ ಆಗಿದ್ದ ವಿಡಿಯೋ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹೇಳಲಾಗಿತ್ತು. ಆದರೆ ಪೊಲೀಸರು ವೈರಲ್ ಆಗಿರುವ ವಿಡಿಯೋ ನಕಲಿ ಎಂದು ಹೇಳಿದ್ದಾರೆ. 

ವೈರಲ್ ಆಗಿರುವುದು ನಕಲಿ ವಿಡಿಯೋ, ಆದಾಗ್ಯೂ ಈ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಎಸಿಪಿ ಅಜಯ್ ಕುಮಾರ್ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡುತ್ತಿದ್ದಾರೆ " ನೀವು ಆದೇಶ ಪಾಲನೆ ಮಾಡದೇ ಇದ್ದರೆ ಪ್ರಕರಣಗಳನ್ನು ದಾಖಲಿಸಲಾಗುವುದು. ಡಿ.24 ರಿಂದ ಎಲ್ಲಾ ಪಿಜಿ ಹಾಸ್ಟೆಲ್ ಹಾಗೂ ರೆಸ್ಟೋರೆಂಟ್ ಗಳನ್ನು ನಡೆಸುತ್ತಿರುವವರು ಅವುಗಳನ್ನು ಬಂದ್ ಮಾಡಬೇಕೆಂದು ಹೇಳಿದ್ದೇವೆ. ಈ ಸ್ಥಳವನ್ನು ಬಿಟ್ಟು ಹೊರಡಿ ಜ.2 ಕ್ಕೆ ಬನ್ನಿ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com