ಜಮ್ಮು ಕಾಶ್ಮೀರ ವಿಚಾರದಲ್ಲಿ ಅಮೆರಿಕಾದಿಂದ ಭಾರತಕ್ಕೆ ಸಂಪೂರ್ಣ ಬೆಂಬಲ

ಜಮ್ಮು- ಕಾಶ್ಮೀರ ವಿಚಾರದಲ್ಲಿ ಅಮೆರಿಕಾದಿಂದ ಭಾರತಕ್ಕೆ ಸಂಪೂರ್ಣ  ಬೆಂಬಲ ದೊರಕಿದೆ. ಈ ವಿವಾದಕ್ಕೆ ಸಂಬಂಧಿಸಿದಂತೆ ಡೊನಾಲ್ಡ್ ಟ್ರಂಪ್ ಆಡಳಿತ ತುಂಬಾ ತುಂಬಾ ಹೊಂದಾಣಿಕೆಯ ನಿಲುವು ತಾಳಿರುವುದಾಗಿ ಅಮೆರಿಕಾದಲ್ಲಿನ ಭಾರತದ ರಾಯಬಾರಿ ಹರ್ಷವರ್ಧನ್  ಶ್ರಿಂಗ್ಲಾ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಜಮ್ಮು- ಕಾಶ್ಮೀರ ವಿಚಾರದಲ್ಲಿ ಅಮೆರಿಕಾದಿಂದ ಭಾರತಕ್ಕೆ ಸಂಪೂರ್ಣ  ಬೆಂಬಲ ದೊರಕಿದೆ. ಈ ವಿವಾದಕ್ಕೆ ಸಂಬಂಧಿಸಿದಂತೆ ಡೊನಾಲ್ಡ್ ಟ್ರಂಪ್ ಆಡಳಿತ ತುಂಬಾ ತುಂಬಾ ಹೊಂದಾಣಿಕೆಯ ನಿಲುವು ತಾಳಿರುವುದಾಗಿ ಅಮೆರಿಕಾದಲ್ಲಿನ ಭಾರತದ ರಾಯಬಾರಿ ಹರ್ಷವರ್ಧನ್  ಶ್ರಿಂಗ್ಲಾ ಹೇಳಿದ್ದಾರೆ.

ಶುಕ್ರವಾರ ತಮ್ಮ ನಿವಾಸದಲ್ಲಿ ಆಯೋಜಿಸಲಾಗಿದ್ದ ದೀಪಾವಳಿ ಹಬ್ಬದ ಆಚರಣೆ ವೇಳೆಯಲ್ಲಿ ಈ ಹೇಳಿಕೆ ನೀಡಿದ ಶ್ರೀಂಗ್ಲಾ,  ಅಮೆರಿಕಾದ ಆಡಳಿತದಿಂದ ಇಂತಹ ಬೆಂಬಲ ದೊರಕಿರುವುದರಿಂದ ಎಲ್ಲರೂ ಖುಷಿಯಿಂದ ಇರುವುದಾಗಿ ತಿಳಿಸಿದ್ದಾರೆ.

ಈ ರೀತಿಯ ದಿಟ್ಟ ನಿರ್ಧಾರವನ್ನು ಈ ಹಿಂದೆ ಯಾವಾಗಲೂ ಕೈಗೊಂಡಿರಲಿಲ್ಲ. ಆಗಸ್ಟ್ 5 ರಂದು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಪಡಿಸಿದ ನಂತರ ಅಮೆರಿಕಾದರಿಂದ ಪೂರ್ಣಮಟ್ಟದ ಬೆಂಬಲ ದೊರಕಿದ್ದು, ತುಂಬಾ ಸಂತೋಷವಾಗಿರುವುದಾಗಿ ಅವರು ಹೇಳಿದ್ದಾರೆ.

ಸಂವಿಧಾನದ 370ನೇ ವಿಧಿ ರದ್ದತಿ ಆಂತರಿಕ ವಿಚಾರವಾಗಿದೆ . ಬದಲಾವಣೆ ತರಬೇಕು ಎಂಬ ಉದ್ದೇಶದಿಂದ ಇದನ್ನು ಮಾಡಲಾಗಿದೆ. ಇದರಿಂದ ಆರ್ಥಿಕ ಪ್ರಗತಿ ಮಾತ್ರವಲ್ಲದೆ ಆ ವಲಯದಲ್ಲಿ ಭದ್ರತೆ ಮೂಡಲಿದೆ  ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

 ಭಾರತ ಹಾಗೂ ಪಾಕಿಸ್ತಾನ ಶಾಂತಿ ಮಾತುಕತೆ ಮೂಲಕ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅಮೆರಿಕಾ ಕಳೆದ ತಿಂಗಳು ಹೇಳಿಕೆ ನೀಡಿತ್ತು. ಪ್ರಧಾನಿ ನರೇಂದ್ರ ಮೋದಿ ಹಾಗೂ ಡೊನಾಲ್ಡ್ ಟ್ರಂಪ್ ಪಾಲ್ಗೊಂಡಿದ್ದ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಭಾರತ- ಅಮೆರಿಕಾದ ನಾಗರಿಕರು ಪಾಲ್ಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com