ಮಸೀದಿ ಒಡೆದದ್ದು ತಪ್ಪೆಂದರೆ ಪರಿಹಾರ ನೀಡಲು ಸೂಚಿಸಬೇಕಿತ್ತು: ದೇವೇಗೌಡ

ಅಯೋಧ್ಯೆಯಲ್ಲಿದ್ದ ಬಾಬರಿ ಮಸೀದಿ ಧ್ವಂಸ‌ಮಾಡಿದ್ದು ತಪ್ಪು ಎಂದ ಮೇಲೆ ಅದಕ್ಕೆ ಪರಿಹಾರ ಕೊಡಬೇಕಲ್ಲವೇ ? ಎಂದು ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮಾರ್ಮಿಕವಾಗಿ ಹೇಳಿದ್ದಾರೆ
ಮಂಗಳೂರಿನಲ್ಲಿ ದೇವೇಗೌಡ
ಮಂಗಳೂರಿನಲ್ಲಿ ದೇವೇಗೌಡ

ಮಂಗಳೂರು: ಅಯೋಧ್ಯೆಯಲ್ಲಿದ್ದ ಬಾಬರಿ ಮಸೀದಿ ಧ್ವಂಸ‌ಮಾಡಿದ್ದು ತಪ್ಪು ಎಂದ ಮೇಲೆ ಅದಕ್ಕೆ ಪರಿಹಾರ ಕೊಡಬೇಕಲ್ಲವೇ ? ಎಂದು ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮಾರ್ಮಿಕವಾಗಿ ಹೇಳಿದ್ದಾರೆ.

ಸುಪ್ರೀಂಕೋರ್ಟ್ ತೀರ್ಪು ಕುರಿತು ಪ್ರತಿಕ್ರಿಯಿಸಿದ ದೇವೇಗೌಡ, ಬಾಬ್ರಿ ಮಸೀದಿ ಧ್ವಂಸ ಮಾಡಿದ್ದು, ಅದಕ್ಕಾಗಿ ಅನೇಕ ಮಂದಿ ಹೋರಾಡಿದ್ದಾರೆ. ನ್ಯಾಯಾಲಯ ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಬಹುದಿತ್ತು ಎಂದ ಅವರು, ಕೊನೆಯದಾಗಿ ನ್ಯಾಯಾಲಯದ ತೀರ್ಪು ಸ್ವಾಗತಿಸುವುದಾಗಿ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ‌ ಹಾಗೂ ಜೆಡಿಎಸ್ ಶಾಸಕಾಂಗ ಎಚ್.ಡಿ.ಕುಮಾರಸ್ವಾಮಿ,‌ ಅನ್ನದಾತರ ಮುಂದೆ ಬೇರೆ ಯಾವ ದೇವರೂ ಇಲ್ಲ. ರಾಮಮಂದಿರ ನಿರ್ಮಾಣದ‌ ಜೊತೆಗೆ ಅನ್ನದಾತರಿಗೆ ಬದುಕು ಕಟ್ಟಿಕೊಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬೇಕು ಎಂದು ಬಿಜೆಪಿಗರ ಕಾಲೆಳೆದಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ನಗರಕ್ಕೆ ಆಗಮಿಸಿದ ದೇವೇಗೌಡ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ್ದಾರೆ.ಮನಪಾ ಚುನಾವಣೆಯಲ್ಲಿ ಜೆಡಿಎಸ್ ಹದಿನಾಲ್ಕು ಕ್ಷೇತ್ರಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಹೇಳಿದ ದೇವೇಗೌಡ ರಾಜ್ಯದಲ್ಲಿ ಬಿಜೆಪಿಗೆ ಬೆಂಬಲ ನೀಡುವ ಪ್ರಶ್ನೆ ಇಒಲ್ಲ, ಅನರ್ಹ ಶಾಸಕರ ಕ್ಷೇತ್ರಕ್ಕೆ ಚುನಾವಣೆ ನಡೆದ ಬಳಿಕ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಏನೆನ್ನುವುದು ನೋಡಿ ಣಾವು ಮುಂದಿನ ತೀರ್ಮಾನ ತೆಗೆದುಕೊಳ್ಲಲಿದ್ದೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com