ಅಯೋಧ್ಯೆಯ ತೀರ್ಪು ತೃಪ್ತಿ ತಂದಿಲ್ಲ: ಅಸಾದುದ್ದೀನ್ ಒವೈಸಿ

ವಿವಾದಿತ ಬಾಬರಿ ಮಸೀದಿ-ರಾಮ್ ದೇವಾಲಯದ ಸ್ಥಳದಲ್ಲಿ ದೇವಾಲಯ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟ ಸುಪ್ರೀಂ ಕೋರ್ಟ್‌ನ ತೀರ್ಪು ತೃಪ್ತಿ ನೀಡಿಲ್ಲ  ಎಂದು ಅಖಿಲ ಭಾರತ ಮಜ್ಲಿಸ್-ಎ-ಇಟ್ಟೇಹದುಲ್ ಮುಸ್ಲೀಮೀನ್ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ. ಸುಪ್ರೀಂ ಕೋರ್ಟ್ ನಿಜಕ್ಕೂ "ಸರ್ವೋಚ್ಚ, ಆದರೆ ದೋಷಾತೀತ ಅಲ್ಲ" ಎಂದು ಅವರು ಹೇಳಿದರು. 
ಅಸಾದುದ್ದೀನ್ ಒವೈಸಿ
ಅಸಾದುದ್ದೀನ್ ಒವೈಸಿ

ಹೈದರಾಬಾದ್: ವಿವಾದಿತ ಬಾಬರಿ ಮಸೀದಿ-ರಾಮ್ ದೇವಾಲಯದ ಸ್ಥಳದಲ್ಲಿ ದೇವಾಲಯ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟ ಸುಪ್ರೀಂ ಕೋರ್ಟ್‌ನ ತೀರ್ಪು ತೃಪ್ತಿ ನೀಡಿಲ್ಲ  ಎಂದು ಅಖಿಲ ಭಾರತ ಮಜ್ಲಿಸ್-ಎ-ಇಟ್ಟೇಹದುಲ್ ಮುಸ್ಲೀಮೀನ್ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ. ಸುಪ್ರೀಂ ಕೋರ್ಟ್ ನಿಜಕ್ಕೂ "ಸರ್ವೋಚ್ಚ, ಆದರೆ ದೋಷಾತೀತ ಅಲ್ಲ" ಎಂದು ಅವರು ಹೇಳಿದರು. 

"ನಮಗೆ ಸಂವಿಧಾನದ ಬಗ್ಗೆ ಸಂಪೂರ್ಣ ನಂಬಿಕೆ ಇದೆ, ನಾವು ನಮ್ಮ ಹಕ್ಕಿಗಾಗಿ ಹೋರಾಡುತ್ತಿದ್ದೆವು, ನಮಗೆ 5 ಎಕರೆ ಭೂಮಿ ಅಗತ್ಯವಿಲ್ಲ. ಈ 5 ಎಕರೆ ಭೂ ಪ್ರಸ್ತಾಪವನ್ನು ನಾವು ತಿರಸ್ಕರಿಸಬೇಕು, ನೀವು ಮುಸ್ಲಿಮರನ್ನು ಪೋಷಿಸಬೇಕಾಗಿಲ್ಲ" ಎಂದು ಅವರು ಹೇಳಿದರು. "ಈ ತೀರ್ಮಾನಕ್ಕೆ ನ್ಯಾಯಾಲಯ ಹೇಗೆ ಬಂದಿದೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ. 500 ವರ್ಷಗಳ ಕಾಲ ಸ್ಥಳದಲ್ಲಿ ಒಂದು ಮಸೀದಿ ಇತ್ತು ಮತ್ತು ನ್ಯಾಯಾಲಯವು ಇದೀಗ ಮೋಸ ಮಾಡಿದೆ. ನನಗೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಮೇಲೆ ನಂಬಿಕೆ ಇದೆ ಮತ್ತು ಅವರಿಗೆ ನಮ್ಮ ಬೆಂಬಲವಿದೆ" ಅವರು ಹೇಳಿದರು.

ಸುಪ್ರೀಂ ತೀರ್ಪು ಬಗೆಗೆ ಅಸಮಾಧಾನಗೊಂಡ ಓವೈಸಿ  "1992 ರ ಡಿಸೆಂಬರ್ 6 ರಂದು ಸಂಘ ಪರಿವಾರ  ಸದಸ್ಯರಿಂದ ಬಾಬರಿ ಮಸೀದಿ ನಾಶವಾಗದಿದ್ದರೆ ಏನಾಗಬಹುದು ಎಂದು ನೀವು ನನಗೆ ಹೇಳಬಲ್ಲಿರಾ?" ಸುಪ್ರೀಂ ತೀರ್ಪು ಸಂಘದ ಸದಸ್ಯರು ಮುಸ್ಲಿಮರ ಧಾರ್ಮಿಕ ತಾಣಗಳ ಮೇಲೆ ತನ್ನ ಹಕ್ಕನ್ನು ಪಡೆಯಲು ಪೂರ್ವನಿದರ್ಶನವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದರು.

ರಾಮಮಂದಿರ ತೀರ್ಪನ್ನು ಬೆಂಬಲಿಸಿದ ಕಾಂಗ್ರೆಸ್ ಅನ್ನು ದೂಷಿಸಿದ ಓವೈಸಿ ಕಾಂಗ್ರೆಸ್ ತನ್ನ ನಿಜವಾದ ಬಣ್ಣವನ್ನು ಬಯಲು ಮಾಡಿದೆ. ಕಾಂಗ್ರೆಸ್ ಪಕ್ಷದ ಮೋಸ ಮತ್ತು ಬೂಟಾಟಿಕೆ ಈಗ ಬಯಲಾಗಿದೆ ಎಂದರು.

ಶನಿವಾರ ಸುಪ್ರೀಂ ಕೋರ್ಟ್ ಅಯೋಧ್ಯೆ ವಿವಾದದ ಸಂಬಂಧ ಅಂತಿಮ ತೀರ್ಪು ಪ್ರಕಟಿಸಿದ್ದು ಸರ್ವಾನುಮತದ ತೀರ್ಪಿನಲ್ಲಿ ನ್ಯಾಯಾಲಯವು ವಿವಾದಿತ ಸ್ಥಳದಲ್ಲಿ ರಾಮ ಮಂದಿರ ರ್ಮಾಣಕ್ಕೆ ದಾರಿ ಮಾಡಿಕೊಟ್ಟಿತು ಮತ್ತು ಮಸೀದಿ ನಿರ್ಮಿಸಲು ಸುನ್ನಿ ವಕ್ಫ್ ಮಂಡಳಿಗೆ 5 ಎಕರೆ ಜಾಗವನ್ನು ಮಂಜೂರು ಮಾಡುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿತು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com