63 ವರ್ಷದ ಹಿಂದೆ ಮಹಾಬಲಿಪುರಂ, ಜೆಮಿನಿ ಸ್ಟುಡಿಯೋಗೆ ಭೇಟಿ ಕೊಟ್ಟಿದ್ದ ಚೀನಾದ ಮೊದಲ ಪ್ರಧಾನಿ: ಒಂದು ನೆನಪು

ಚೀನಾ ಅಧ್ಯಕ್ಷ ಭಾರತ ಪ್ರವಾಸ ಇದೀಗ ಟಾಕ್ ಆಫ್ ದಿ ಟೌನ್ ಆಗಿ ಮಾರ್ಪಟ್ಟಿದ್ದು, ದಕ್ಷಿಣ ಭಾರತದ ಖ್ಯಾತ ಪ್ರವಾಸಿ ತಾಣ ಮಹಾಬಲಿಪುರಂಗೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭೇಟಿ ನೀಡಿದ್ದಾರೆ. ಆದರೆ ಮಹಾಬಲಿಪುರಂಗೆ ಚೀನಾ ಅಧ್ಯಕ್ಷರ ಭೇಟಿ ಇದೇ ಮೊದಲೇನಲ್ಲ.
ಮಹಾಬಲಿಪುರಂಗೆ ಭೇಟಿ ನೀಡಿದ್ದ ಚೀನಾ ಪ್ರಧಾನಿ ಜೌ ಎನ್ ಲಾಯ್
ಮಹಾಬಲಿಪುರಂಗೆ ಭೇಟಿ ನೀಡಿದ್ದ ಚೀನಾ ಪ್ರಧಾನಿ ಜೌ ಎನ್ ಲಾಯ್

ಚೆನ್ನೈ: ಚೀನಾ ಅಧ್ಯಕ್ಷ ಭಾರತ ಪ್ರವಾಸ ಇದೀಗ ಟಾಕ್ ಆಫ್ ದಿ ಟೌನ್ ಆಗಿ ಮಾರ್ಪಟ್ಟಿದ್ದು, ದಕ್ಷಿಣ ಭಾರತದ ಖ್ಯಾತ ಪ್ರವಾಸಿ ತಾಣ ಮಹಾಬಲಿಪುರಂಗೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭೇಟಿ ನೀಡಿದ್ದಾರೆ. ಆದರೆ ಮಹಾಬಲಿಪುರಂಗೆ ಚೀನಾ ಅಧ್ಯಕ್ಷರ ಭೇಟಿ ಇದೇ ಮೊದಲೇನಲ್ಲ.

ಹೌದು.. ಈ ಹಿಂದೆ ಅಂದರೆ ಬರೊಬ್ಬರಿ 63 ವರ್ಷಗಳ ಹಿಂದೆಯೇ ಚೀನಾ ಅಧ್ಯಕ್ಷರು ಈ ಮಹಾಬಲಿಪುರಂಗೆ ಆಗಮಿಸಿ ಭಾರತದ ಆತಿಥ್ಯ ಸ್ವೀಕರಿಸಿದ್ದರು. 1956ರಲ್ಲಿ ಚೀನಾದ ಗಣತಂತ್ರ ಚೀನಾದ ಮೊಟ್ಟ ಮೊದಲ ಮುಖ್ಯಸ್ಥ ಜೌ ಎನ್ ಲಾಯ್ ಮತ್ತು ಉಪ ಮುಖ್ಯಸ್ಥ ಹಿಲಾಂಗ್ ಅವರೊಂದಿಗೆ ದಕ್ಷಿಣ ಭಾರತದ ತಮಿಳುನಾಡಿನ ಮಹಾಬಲಿರಪುರಂಗೆ ಭೇಟಿ ನೀಡಿದ್ದರು. ಈ ವೇಳೆ ಕರಾವಳಿ ತೀರದ ದೇಗುಲಗಳಿಗೆ ಭೇಟಿ ನೀಡಿ, ಅಲ್ಲಿಯೇ ಎಳನೀರು ಕೂಡ ಸವಿದಿದ್ದರು.

ಬಳಿಕ ಮದ್ರಾಸ್ ನ ಕಾರ್ಪೋರೇಷನ್ ಸ್ಟೇಡಿಯಂನಲ್ಲಿ ಮಾತನಾಡಿದ್ದ ಎನ್ ಲಾಯ್, ಮದ್ರಾಸ್ ಸಿಟಿ ಮತ್ತು ಮದ್ರಾಸಿಗರು ಕುರಿತು ಮಾತನಾಡಿದ್ದರು. ಭಾರತೀಯ ಸಂಸ್ಕೃತಿಯಲ್ಲಿ ಮದ್ರಾಸಿನ ಪಾತ್ರ ಅತ್ಯಂತ ಪ್ರಮುಖವಾಗಿದೆ. ನಿಮ್ಮ ನಗರದಿಂದ ನಾವು ಸಾಕಷ್ಟು ಕಲಿತಿದ್ದೇವೆ ಎಂದು ಪರೋಕ್ಷವಾಗಿ ಭೋದಿ ಧರ್ಮರನ್ನು ನೆನಪಿಸಿಕೊಂಡರು.

ಬಳಿಕ ಉಭಯ ನಾಯಕರೂ ಇಲ್ಲಿನ ಖ್ಯಾತ ಜೆಮಿನಿ ಸ್ಟುಡಿಯೋಗೆ ಭೇಟಿ ನೀಡಿ ಖ್ಯಾತ ನಟಿ ಪದ್ಮಿನಿ ಅವರು ನಟಿಸುತ್ತಿದ್ದ ಚಿತ್ರವೊಂದರ ಚಿತ್ರೀಕರಣ ವೀಕ್ಷಣೆ ಮಾಡಿದ್ದರು. ಅಂದು ಚಿತ್ರತಂಡವನ್ನು ಭೇಟಿ ಮಾಡಿದ್ದ ಎನ್ ಲಾಯ್ ಅವರಿಗೆ ಚಿತ್ರ ರಚನೆಕಾರ ರಮಾನಂದ್ ಸಾಗರ್ ಅವರು ಚಿತ್ರದ ಕುರಿತು ಮಾಹಿತಿ ನೀಡಿದ್ದರು. ಸಾಮಾನ್ಯ ಪ್ರಜೆಯೊಬ್ಬ ತನ್ನ ಜನರಿಗಾಗಿ ಹೋರಾಡುವ ಕಥಾ ಹಂದರವುಳ್ಳ ಚಿತ್ರ ಇದಾಗಿದೆ ಎಂದು ಹೇಳಿದ್ದರು. ಈ ವೇಳೆ ಹಾಸ್ಯ ಚಟಾಕಿ ಹಾರಿಸಿದ್ದ ಜೌ ಅವರು, ಸಾಮಾನ್ಯ ಪ್ರಜೆಗಳಿಗೆ ಏನಾಗಿದೆ ಎಂದು ಪ್ರಶ್ನೆ ಮಾಡಿದ್ದರು. ಈ ವೇಳೆ ರಮಾನಂದ್ ಸಾಗರ್ ಅವರು ಆತ ರಾಣಿಯನ್ನು ಮದುವೆಯಾಗಿದ್ದ ಎಂದು ಅದೇ ಧಾಟಿಯಲ್ಲಿ ಉತ್ತರಿಸಿ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದ್ದರು.

ಇನ್ನು ಇಷ್ಟಕ್ಕೆ ಸುಮ್ಮನಾಗದ ಜೌ ಆ ಚಿತ್ರದ ಶೀರ್ಷಿಕೆ ಕೇಳಲು ತುಂಬಾ ಉತ್ಸುಕರಾಗಿದ್ದರು. ಈ ವೇಳೆ ಆ ಜೆಮಿನಿ ಸ್ಟುಡಿಯೋ ಮಾಲೀಕ ಎಸ್ ಎಸ್ ವಾಸನ್ ಅವರು, ಚಿತ್ರದ ಶೀರ್ಷಿಕೆ ಇನ್ನೂ ಅಂತಿಮಗೊಂಡಿಲ್ಲ. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಅಂತಿಮಗೊಳಿಸುತ್ತೇವೆ ಎಂದು ಮಾಹಿತಿ ನೀಡಿದ್ದರು. 

ಇನ್ನು ಚೀನಾ ಪ್ರಧಾನಿ ಮತ್ತು ಉಪ ಪ್ರಧಾನಿಗಳು ಭಾರತ ಪ್ರವಾಸದ ವೇಳೆ ಖಾದಿ ಕ್ಯಾಪ್ ತೊಟ್ಟು, ಅಂಗವಸ್ತ್ರ ಧರಿಸಿ ಹಣೆಗೆ ಕುಂಕುಮವಿರಿಸಿಕೊಂಡು ಚಪ್ಪಲಿ ಧರಿಸಿ ಒಡಾಡಿದ್ದರು. ಬಳಿಕ ದೆಹಲಿಗೆ ತೆರಳಿದ್ದ ಜೌ ಸಂಸತ್ ಭವನದಲ್ಲಿ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಈ ವೇಳೆ ಅಂದಿನ ರಾಜ್ಯಸಭೆ ಸ್ಪೀಕರ್ ಎಸ್ ವಿ ಕೃಷ್ಣಮೂರ್ತಿ ರಾವ್ ಅವರು ತಮ್ಮ ವಿಶೇಷ ಅತಿಥಿಗಳಿಗೆ ಸಭಾಪೀಠವನ್ನು ಬಿಟ್ಟುಕೊಟ್ಟು ಅತಿಥಿಗಳಿಗೆ ಗೌರವ ಸಲ್ಲಿಕೆ ಮಾಡಿದ್ದರು. ಆದರೆ ಇದಕ್ಕೆ ಒಪ್ಪದ ಜೌ ಸಭಾಪತಿಗಳ ಪಕ್ಕದ ಎಡಗಡೆಯ ಕುರ್ಚಿಯಲ್ಲಿ ಕುಳಿತುಕೊಂಡು ಮಾತನಾಡಿದ್ದರು. ಅದು ಅವರ ಕಮ್ಯುನಿಸ್ಟ್ ಚಿಂತನೆಯಾಗಿತ್ತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com