ಕೊಳವೆ ಬಾವಿ ದುರಂತ: ಮಗುವಿನ ದೇಹ ಕೊಳೆತು, ಛಿದ್ರವಾಗಿತ್ತು- ಜಿಲ್ಲಾಧಿಕಾರಿ ಜೆ.ರಾಧಾಕೃಷ್ಣ

ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಪುಟ್ಟ ಮಗುವನ್ನು ರಕ್ಷಿಸುವ ರಕ್ಷಣಾ ಕಾರ್ಯಾಚರಣೆ ವಿಫಲವಾಗಿದ್ದು, ಬೋರ್ ವೆಲ್ ನಲ್ಲಿಯೇ ಮಗು ಸಾವನ್ನಪ್ಪಿ, ದೇಹ ಕೊಳೆತು ಛಿದ್ರವಾಗಿದೆ ಎಂದು ಜಿಲ್ಲಾಧಿಕಾರಿ ಜೆ.ರಾಧಾಕೃಷ್ಣ ಹೇಳಿಕೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಜೆ ರಾಧಾಕೃಷ್ಣ
ಜಿಲ್ಲಾಧಿಕಾರಿ ಜೆ ರಾಧಾಕೃಷ್ಣ

ಚೆನ್ನೈ: ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಪುಟ್ಟ ಮಗುವನ್ನು ರಕ್ಷಿಸುವ ರಕ್ಷಣಾ ಕಾರ್ಯಾಚರಣೆ ವಿಫಲವಾಗಿದ್ದು, ಬೋರ್ ವೆಲ್ ನಲ್ಲಿಯೇ ಮಗು ಸಾವನ್ನಪ್ಪಿ, ದೇಹ ಕೊಳೆತು ಛಿದ್ರವಾಗಿದೆ ಎಂದು ಜಿಲ್ಲಾಧಿಕಾರಿ ಜೆ.ರಾಧಾಕೃಷ್ಣ ಹೇಳಿಕೆ ನೀಡಿದ್ದಾರೆ.

ತಮಿಳುನಾಡಿನ ತಿರುಚಿನಾಪಳ್ಳಿ ಸಮೀಪ ಶುಕ್ರವಾರ ಕೊಳವೆಬಾವಿಗೆ ಬಿದ್ದಿದ್ದ ಎರಡು ವರ್ಷದ ಸುಜೀತ್ ವಿಲ್ಸನ್ ಸಾವನ್ನಪ್ಪಿದ್ದು, ಈ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಜೆ ರಾಧಾಕೃಷ್ಣ ಅವರು, ಮಗುವಿನ ರಕ್ಷಣೆಗೆ ಸರ್ಕಾರ ಮತ್ತು ಜಿಲ್ಲಾಡಳಿತ ಅವಿರತ ಶ್ರಮವಹಿಸಿತ್ತು. ಆದರೆ ನಮ್ಮ ಪ್ರಯತ್ನಗಳು ವಿಫಲವಾಗಿದ್ದು, ಬೋರ್ ವೆಲ್ ನಲ್ಲಿಯೇ ಬಾಲಕ ಸುಜಿತ್ ಸಾವನ್ನಪ್ಪಿದ್ದಾನೆ. ಅಲ್ಲದೆ ಆತನ ದೇಹ ಕೊಳೆತಿದ್ದು, ದೇಹ ಛಿದ್ರವಾಗಿದೆ ಎಂದು ಎಂದು ಹೇಳಿದ್ದಾರೆ.

ಇನ್ನು ಪ್ರಸ್ತುತ ಬಾಲಕ ಸುಜಿತ್ ಶವವನ್ನು ಆತನ ಹುಟ್ಟೂರು ಪುಡೂರ್ ಗೆ ಕೊಂಡೊಯ್ಯಲಾಗಿದ್ದು, ಅಲ್ಲಿಯೇ ಆತನ ಕುಟುಂಬಸ್ಥರು ಅಂತಿಮ ಸಂಸ್ಕಾರ ನೆರವೇರಿಸಲಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com