ಮೋದಿ ಸರ್ಕಾರ ದೇಶದ ಆರ್ಥಿಕತೆಯನ್ನು ಪಂಕ್ಚರ್ ಮಾಡಿದೆ: ಪ್ರಿಯಾಂಕಾ ವಾದ್ರಾ
ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಶೇ.5ಕ್ಕೆ ಕುಸಿದಿದ್ದು, ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದ ಆರ್ಥಿಕತೆಯನ್ನು ಪಂಕ್ಚರ್ ಮಾಡಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಶನಿವಾರ ವಾಗ್ದಾಳಿ ನಡೆಸಿದ್ದಾರೆ.
Published: 01st September 2019 10:04 AM | Last Updated: 01st September 2019 10:04 AM | A+A A-

ಪ್ರಿಯಾಂಕಾ ವಾದ್ರಾ
ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಶೇ.5ಕ್ಕೆ ಕುಸಿದಿದ್ದು, ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದ ಆರ್ಥಿಕತೆಯನ್ನು ಪಂಕ್ಚರ್ ಮಾಡಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಶನಿವಾರ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಪ್ರಿಯಾಂಕಾ ಅವರು, ಅಚ್ಛೆ ದಿನ್ ನ ಕಹಳೆ ಊದಿದವರು ಆರ್ಥಿಕತೆಯ ಪ್ರಸ್ತುತ ಸ್ಥಿತಿಯ ಬಗ್ಗೆ ದೇಶಕ್ಕೆ ಹೇಳಬೇಕು. ಉತ್ತಮ ದಿನಗಳ ಕಹಳೆ ಊದಿದ ಬಿಜೆಪಿ ಸರ್ಕಾರವು ಆರ್ಥಿಕತೆಯನ್ನು ಪಂಕ್ಚರ್ ಮಾಡಿದೆ ಎಂಬುದು ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ) ಬೆಳವಣಿಗೆಯ ದರದಿಂದ ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.
GDP विकास दर से साफ है कि अच्छे दिन का भोंपू बजाने वाली भाजपा सरकार ने अर्थव्यवस्था की हालत पंचर कर दी है।
— Priyanka Gandhi Vadra (@priyankagandhi) August 31, 2019
न GDP ग्रोथ है न रुपए की मजबूती। रोजगार गायब हैं।
अब तो साफ करो कि अर्थव्यवस्था को नष्ट कर देने की ये किसकी करतूत है?#EconomicSlowdown#EconomyCrisis
ಜಿಡಿಪಿ ಬೆಳವಣಿಗೆ ಕುಸಿದ್ದೆ. ರುಪಾಯಿ ಬಲವಾಗಿಲ್ಲ. ಉದ್ಯೋಗ ದರ ಕುಸಿಯುತ್ತಿದೆ. ಆರ್ಥಿಕತೆಯನ್ನು ನಾಶಮಾಡಲು ಯಾರು ಹೊಣೆಗಾರರಾಗಿದ್ದಾರೆಂಬುದನ್ನು ಈಗ ಸ್ಪಷ್ಟಪಡಿಸಬೇಕು ಎಂದು ಪ್ರಿಯಾಂಕಾ ಒತ್ತಾಯಿಸಿದ್ದಾರೆ.
ರಾಷ್ಟ್ರೀಯ ಅಂಕಿ-ಸಂಖ್ಯೆ ಸಚಿವಾಲಯದ ಕಚೇರಿ, ಶುಕ್ರವಾರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನ ಪ್ರಮಾಣವನ್ನು ಬಿಡುಗೆ ಮಾಡಿದ್ದು, ಆರ್ಥಿಕ ಬೆಳವಣಿಗೆ ದರ ಆರು ವರ್ಷಗಳಲ್ಲಿ ಕನಿಷ್ಠ ಶೇ.5ಕ್ಕೆ ಕುಸಿದಿದೆ.