ಇಸ್ರೋ ಭಾರತದ ಹೆಮ್ಮೆ: ವಿಜ್ಞಾನಿಗಳ ಅವಿರತ ಪರಿಶ್ರಮಕ್ಕೆ ಬೆನ್ತಟ್ಟಿದ ಭಾರತ

ಇಡೀ ವಿಶ್ವವೇ ಉಸಿರು ಬಿಗಿ ಹಿಡಿದು ಕಾಯುತ್ತಿದ್ದ ಮಹತ್ವಾಕಾಂಕ್ಷಿ ಚಂದ್ರಯಾನ-2 ನೌಕೆಯ ಸಂಪರ್ಕ ಕೊನೆ ಕ್ಷಣದಲ್ಲಿ ಕಡಿತಗೊಂಡು ನಿರಾಸೆ ಮೂಡಿಸಿದ್ದರೂ, ಇಸ್ರೋ ವಿಜ್ಞಾನಿಗಳು ಕೋಟ್ಯಾಂತರ ಭಾರತೀಯರ ಹೃದಯ ಗೆದ್ದಿದ್ದಾರೆ. 
ಇಸ್ರೋ ಭಾರತದ ಹೆಮ್ಮೆ: ವಿಜ್ಞಾನಿಗಳ ಅವಿರತ ಪರಿಶ್ರಮಕ್ಕೆ ಬೆನ್ತಟ್ಟಿದ ಭಾರತ
ಇಸ್ರೋ ಭಾರತದ ಹೆಮ್ಮೆ: ವಿಜ್ಞಾನಿಗಳ ಅವಿರತ ಪರಿಶ್ರಮಕ್ಕೆ ಬೆನ್ತಟ್ಟಿದ ಭಾರತ

ಕಳೆದುಕೊಂಡಿದ್ದು ಸಂವಹನವನ್ನೇ ಹೊರತು, ಭರವಸೆಯನ್ನಲ್ಲ: ಇಸ್ರೋ ಕಾರ್ಯತತ್ವಕ್ಕೆ ಸಲಾಂ ಹೊಡೆದ ಭಾರತ
 

ನವದೆಹಲಿ: ಇಡೀ ವಿಶ್ವವೇ ಉಸಿರು ಬಿಗಿ ಹಿಡಿದು ಕಾಯುತ್ತಿದ್ದ ಮಹತ್ವಾಕಾಂಕ್ಷಿ ಚಂದ್ರಯಾನ-2 ನೌಕೆಯ ಸಂಪರ್ಕ ಕೊನೆ ಕ್ಷಣದಲ್ಲಿ ಕಡಿತಗೊಂಡು ನಿರಾಸೆ ಮೂಡಿಸಿದ್ದರೂ, ಇಸ್ರೋ ವಿಜ್ಞಾನಿಗಳು ಕೋಟ್ಯಾಂತರ ಭಾರತೀಯರ ಹೃದಯ ಗೆದ್ದಿದ್ದಾರೆ. 

ಇಸ್ರೋ ವಿಜ್ಞಾನಿಗಳ ಅವಿರತ ಪರಿಶ್ರಮಕ್ಕೆ ಇಡೀ ದೇಶ ಅಭಿನಂದನೆ ಸಲ್ಲಿಸಿದ್ದು, ಇಸ್ರೋ ಎಂದಿಗೂ ಭಾರತದ ಹೆಮ್ಮೆ ಎಂದು ಹೇಳಿದ್ದಾರೆ. 

ಚಂದ್ರಯಾನ-2 ಕೊನೆಯ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡಿರಬಹುದು. ಆದರೆ, ನಿಮ್ಮೊಂದಿಗೆ ಇಡೀ ರಾಷ್ಟ್ರವಿದೆ. ನಿಮ್ಮ ಸಾಧನೆ ಕಡಿಮೆಯೇನೂ ಇಲ್ಲ. ನಿಮ್ಮ ಕಾರ್ಯತತ್ವಕ್ಕೆ ನಮ್ಮ ಸಲಾಂ, ನೀವು ನಮ್ಮ ಹೃದಯ ಗೆದ್ದಿದ್ದೀರಿ ಎಂದು ಇಸ್ರೋ ಸಾಧನೆಗೆ ಬೆನ್ತಟ್ಟಿದ್ದಾರೆ.  

ಈ ಒತ್ತಡದ ಸಮಯದಲ್ಲಿ ಇಡೀ ರಾಷ್ಟ್ರವು ಇಸ್ರೋ ವಿಜ್ಞಾನಿಗಳ ತಂಡದೊಂದಿಗೆ ನಿಂತಿದೆ. ನಿಮ್ಮ ಕಠಿಣ ಪರಿಶ್ರಮ ಮತ್ತು ಬದ್ಧತೆಯು ನಮ್ಮ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಿದೆ. ಜೈ ಹಿಂದ್" ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವಿಟರ್ ಹೇಳಿದ್ದಾರೆ.

ಮತ್ತೊಂದು ಟ್ವೀಟ್ ನಲ್ಲಿ, "ಚಂದ್ರಯಾನ -2 ಕಾರ್ಯಾಚರಣೆಯಲ್ಲಿ ಇಸ್ರೋ ತಂಡವು ಮಾಡಿದ ಅದ್ಭುತ ಕಾರ್ಯಕ್ಕೆ ಅಭಿನಂದನೆಗಳು. ನಿಮ್ಮ ಉತ್ಸಾಹ ಮತ್ತು ಸಮರ್ಪಣಾ ಭಾವ ಪ್ರತಿಯೊಬ್ಬ ಭಾರತೀಯನಿಗೂ ಸ್ಫೂರ್ತಿಯ ಮೂಲವಾಗಿದೆ. ನಿಮ್ಮ ಕೆಲಸ ವ್ಯರ್ಥವಾಗಿಲ್ಲ. ಇದು ಅನೇಕ ಉದಾಹರಣೆಗಳನ್ನು ನೀಡಿದೆ ಮತ್ತು ಮಹತ್ವಾಕಾಂಕ್ಷೆಯ ಭಾರತೀಯ ಬಾಹ್ಯಾಕಾಶ ಯಾತ್ರೆಗಳಿಗೆ ಅಡಿಪಾಯ ಹಾಕಿದೆ ಎಂದು ಶ್ಲಾಘಿಸಿದ್ದಾರೆ.

"ನಮ್ಮ ವಿಜ್ಞಾನಿಗಳ ಬಗ್ಗೆ ನಮಗೆ ಹೆಮ್ಮೆ ಇದೆ. ಅವರು ಇತಿಹಾಸವನ್ನು ರಚಿಸಿದ್ದಾರೆ. ಹೃದಯ ಕಳೆದುಕೊಳ್ಳುವ ಅಗತ್ಯವಿಲ್ಲ. ಉತ್ತಮ ಕೆಲಸ ಮಾಡಿದ್ದಾರೆ. ಜೈ ಹಿಂದ್! " ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಹೇಳಿದ್ದಾರೆ. 

“ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆಗಳು. ಇಂದು ನೀವು ಚಂದ್ರನ ಬಾಗಿಲು ಬಡಿದಿದ್ದೀರಿ, ನಾಳೆ ನೀವು ಅದರ ನೆಲಕ್ಕೆ ಇಳಿಯುತ್ತೀರಿ" ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ. 

ಇಸ್ರೋ ವಿಜ್ಞಾನಿಗಳು ಸಾಕಷ್ಟು ಸಾಧಿಸಿದ್ದು, ಮತ್ತಷ್ಟು, ಮಗದಷ್ಟು ಸಾಧಿಸಲಿದ್ದಾರೆ. “ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ಇಸ್ರೋದ ವಿಜ್ಞಾನಿಗಳು ಈಗಾಗಲೇ ಬಹಳಷ್ಟು ಸಾಧನೆ ಮಾಢಿದ್ದು, ಮುಂದೆ ಮತ್ತಷ್ಟು ಸಾಧಿಸಲಿದ್ದಾರೆ ಇಡೀ ದೇಶವೇ ಅವರ ಬೆನ್ನಿಗಿದೆ”ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ. 


ಚಂದ್ರನ ಅಂಗಳದ ಮೇಲೆ ಲ್ಯಾಂಡರ್'ನ್ನು ಇಳಿಸುವ ಕೊನೆಯ 15 ನಿಮಿಷ ಭಾರೀ ಕಷ್ಟದ ಕ್ಷಣಗಳು ಎಂದು ಇಸ್ರೋ ಈ ಮೊದಲೇ ಹೇಳಿತ್ತು. ಹೀಗಾಗಿ ಮೊದಲ ಕೆಲವು ಕ್ಷಣಗಳು ಸುಸೂತ್ರವಾಗಿ ನೆರವೇರಿದರೂ ಇನ್ನೇನು ಚಂದ್ರನ ಅಂಗಳ 2.1 ಕಿಮೀ ದೂರ ಇರುವಂತೆ ಲ್ಯಾಂಡರ್ ನೌಕೆ ಸಂಪರ್ಕ ಕಡಿದುಕೊಂಡಿತು. ಈ ವೇಳೆ ಇಸ್ರೋ ಕೇಂದ್ರದಲ್ಲಿ ಆತಂಕದ ವಾತಾವರಣ ಉಂಟಾಗಿತ್ತು. 
 
ಸಿಗ್ನಲ್ ಗಾಗಿ ಕೆಲ ಹೊತ್ತು ನಿರೀಕ್ಷಿಸಲಾಯಿತು. ಆದರೆ, ಯಾವುದೇ ಧನಾತ್ಮಕ ಫಲ ಸಿಗಲಿಲ್ಲ. ಕೊನೆಗೆ ಇಸ್ರೋ ಅಧ್ಯಕ್ಷ ಶಿವನ್ ಅವರು ಲ್ಯಾಂಡರ್ 2.1 ಕಿಮೀವರೆಗೆ ಸುಸೂತ್ರವಾಗಿ ಕೆಲಸ ಮಾಡಿದೆ. ಆ ನಂತರ ಸಿಗ್ನಲ್ ಕಡಿತಗೊಂಡಿದೆ. ಇದರ ಡೇಟಾವನ್ನು ವಿಶ್ಲೇಷಣೆ ಮಾಡುತ್ತೇವೆಂದು ಘೋಷಣೆ ಮಾಡಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com