ಟ್ರಕ್ ಚಾಲಕನಿಂದ ಮೋಟಾರು ವಾಹನ ಕಾಯ್ದೆ ಉಲ್ಲಂಘನೆ: ದಂಡದ ಮೊತ್ತ ಕೇಳಿದರೆ ದಂಗಾಗುತ್ತೀರ! 

ಹೊಸದಾಗಿ ಜಾರಿಯಾಗಿರುವ ಮೋಟಾರು ವಾಹನ ಕಾಯ್ದೆ ಉಲ್ಲಂಘನೆ ಮಾಡುವವರಿಗೆ ದುಬಾರಿ ದಂಡ ವಿಧಿಸುತ್ತಿರುವ ಸರಣಿ ಪ್ರಕರಣಗಳು ವರದಿಯಾಗುತ್ತಿವೆ. ಈಗ ಅತಿ ಹೆಚ್ಚು ಮೊತ್ತದ ದಂಡ ವಿಧಿಸಲಾಗಿರುವ ಪ್ರಕರಣ ಈಗ ಬೆಳಕಿಗೆ ಬಂದಿದೆ. 

ನಿಯಮ ಉಲ್ಲಂಘನೆ ಮಾಡಿದ ಒಡಿಶಾದ ಟ್ರಕ್ ಡ್ರೈವರ್ ಗೆ ಪೊಲೀಸರು ಬರೊಬ್ಬರಿ 86,500 ರೂಪಾಯಿ ಮೊತ್ತದ ದಂಡ ವಿಧಿಸಿದ್ದಾರೆ. ಸಂಬಾಲ್ ಪುರ ಜಿಲ್ಲೆಯ ಟ್ರಕ್ ಚಾಲಕ ಅಶೋಕ್ ಜಾದವ್, ಹೊಸದಾಗಿ ಜಾರಿಯಾಗಿರುವ ಮೋಟಾರು ವಾಹನ ಕಾಯ್ದೆಯ ಅತಿ ಹೆಚ್ಚು ನಿಮಯ ಉಲ್ಲಂಘನೆ ಮಾಡಿರುವ ವ್ಯಕ್ತಿಯಾಗಿರಬಹುದೆಂದು ಹೇಳಲಾಗುತ್ತಿದೆ. 

ಸೆ.03 ರಂದು ಈತನಿಗೆ ಪೊಲೀಸರು ದಂಡ ವಿಧಿಸಿದ್ದರು. ದಂಡ ವಿಧಿಸಲಾಗಿರುವ ಚಲನ್ ನ ಫೋಟೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದೆ. 

ಈತ ಉಲ್ಲಂಘನೆ ಮಾಡಿರುವ ನಿಯಮಗಳು ಯಾವುದು ಅದಕ್ಕೆ ವಿಧಿಸಲಾಗಿರುವ ದಂಡದ ಮೊತ್ತದ ಬಗ್ಗೆ ಮಾಹಿತಿ ಇಲ್ಲಿದೆ 

  1. ಪ್ರಾದೇಶಿಕ  ಸಾರಿಗೆ ಅಧಿಕಾರಿ ಲಲಿತ್ ಮೋಹನ್ ಬೆಹೆರಾ ಅವರ ಪ್ರಕಾರ ಜಾದವ್ ಚಾಲನೆ ಮಾಡುತ್ತಿದ್ದ ಅನಧಿಕೃತ ವ್ಯಕ್ತಿ ಎಂದು ಗುರುತಿಸಲಾಗಿದ್ದು 5,000 ರೂಪಾಯಿ ದಂಡ ವಿಧಿಸಲಾಗಿದೆ. 
  2. ಚಾಲನಾ ಪರವಾನಗಿ ಇಲ್ಲದೇ ಚಾಲನೆ ಮಾಡುತ್ತಿದ್ದ ಕಾರಣ 5,000 ರೂಪಾಯಿ ದಂಡ ವಿಧಿಸಲಾಗಿದೆ. 
  3. ಅನುಮತಿ ಇದ್ದದ್ದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ 18 ಟನ್ ಹೆಚ್ಚುವರಿ ಸರಕುಗಳನ್ನು ತುಂಬಿಸಿದ್ದಕ್ಕಾಗಿ 56,000 ರೂಪಾಯಿ ದಂಡ, ಓವರ್ ಡೈಮೆನ್ಷನ್ ಪ್ರೊಜೆಕ್ಷನ್ ಗಳನ್ನು ಕೊಂಡೊಯ್ಯುತ್ತಿದ್ದಕ್ಕಾಗಿ 20,000 ಸಾವಿರ ರೂಪಾಯಿ ದಂಡ ಹಾಗೂ ಸಾಮಾನ್ಯ ಅಪರಾಧಕ್ಕಾಗಿ 500 ರೂಪಾಯಿಗಳ ದಂಡವನ್ನು ವಿಧಿಸಲಾಗಿದೆ. 
  4. ಒಟ್ಟಾರೆ 86,500 ರೂಪಾಯಿ ದಂಡ ವಿಧಿಸಲಾಗಿತ್ತಾದರೂ ಅಧಿಕಾರಿಗಳೊಂದಿಗೆ ಮಾತನಾಡಿದ ಚಾಲಕ 70,000 ರೂಪಾಯಿ ದಂಡ ಪಾವತಿಸಿದ್ದಾನೆ. 

ಟ್ರಕ್ ನಾಗಾಲ್ಯಾಂಡ್ ಮೂಲದ ಬಿಎಲ್ಎ ಇನ್ಫ್ರಾಸ್ಟ್ರಕ್ಚರ್ ಪ್ರೈವೆಟ್ ಲಿಮಿಟೆಡ್ ಗೆ ಸೇರಿದ್ದಾಗಿದ್ದು, ಜೆಸಿಬಿ ಯಂತ್ರವನ್ನು ಹೊತ್ತೊಯ್ಯುತ್ತಿತ್ತು. ಅಂಗುಲ್ ಜಿಲ್ಲೆಯಿಂದ ಚತ್ತೀಸ್ ಗಢಕ್ಕೆ ಹೋಗುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ಸಾರಿಗೆ ಅಧಿಕಾರಿಗಳು ಟ್ರಕ್ ನ್ನು ನಿಲ್ಲಿಸಿ ತಪಾಸಣೆಗೊಳಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com