ಭಾರತ, ಫ್ರಾನ್ಸ್ ಶಾಂತಿ, ಸ್ಥಿರತೆಯ ದೂತರು: ವೆಂಕಯ್ಯ ನಾಯ್ಡು

ಭಾರತ -ಫ್ರಾನ್ಸ್ ವ್ಯೂಹಾತ್ಮಕ ಪಾಲುದಾರಿಕೆ ಭಾರತದ ವಿದೇಶಾಂಗ ನೀತಿಯ ಪ್ರಮುಖ ಸ್ತಂಭ ಎಂದು ಬಣ್ಣಸಿರುವ ಉಪ ರಾಷ್ಟ್ರಪತಿ ಎಂ ವೆಂಕಯ್ಯನಾಯ್ಡು, ನವದೆಹಲಿ ಮತ್ತು ಪ್ಯಾರಿಸ್ ಶಾಂತಿ ಮತ್ತು ಸ್ಥಿರತೆಯ ದೂತರು ಎಂದು ಹೇಳಿದ್ದಾರೆ.

Published: 10th September 2019 08:42 AM  |   Last Updated: 10th September 2019 04:13 PM   |  A+A-


Venkaiah Naidu

ವೆಂಕಯ್ಯನಾಯ್ಡು ಅವರ ಭೇಟಿಯಾದ ಫ್ರಾನ್ಸ್ ನಿಯೋಗ

Posted By : Srinivasamurthy VN
Source : ANI

ನವದೆಹಲಿ: ಭಾರತ -ಫ್ರಾನ್ಸ್ ವ್ಯೂಹಾತ್ಮಕ ಪಾಲುದಾರಿಕೆ ಭಾರತದ ವಿದೇಶಾಂಗ ನೀತಿಯ ಪ್ರಮುಖ ಸ್ತಂಭ ಎಂದು ಬಣ್ಣಸಿರುವ ಉಪ ರಾಷ್ಟ್ರಪತಿ ಎಂ ವೆಂಕಯ್ಯನಾಯ್ಡು, ನವದೆಹಲಿ ಮತ್ತು ಪ್ಯಾರಿಸ್ ಶಾಂತಿ ಮತ್ತು ಸ್ಥಿರತೆಯ ದೂತರು ಎಂದು ಹೇಳಿದ್ದಾರೆ.

ಫ್ರೆಂಚ್ ಸಂಸದರ ನಿಯೋಗ ಮತ್ತು ಆರ್ಥಿಕ ವ್ಯವಹಾರಗಳ ಸೆನೆಟ್ ಸ್ಥಾಯಿ ಸಮಿತಿಯ ಮುಖ್ಯಸ್ಥರಾದ ಸೋಫಿ ಪ್ರಿಮಾಸ್ ಅವರೊಂದಿಗೆ ನವದೆಹಲಿಯಲ್ಲಿ ನಡೆಸಿದ ಸಂವಾದದಲ್ಲಿ ಮಾತನಾಡಿದ ನಾಯ್ಡು, ಜಗತ್ತಿನಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಉತ್ತೇಜಿಸಲು ಭಾರತ ಮತ್ತು ಫ್ರಾನ್ಸ್ ನಡುವೆ ನಿಕಟ ಸಹಕಾರ ಇರಬೇಕು ಎಂದು ಪ್ರತಿಪಾದಿಸಿದರು. ಭಾರತ ಮತ್ತು ಫ್ರಾನ್ಸ್ ನಡುವಿನ ದ್ವಿಪಕ್ಷೀಯ ಸಂಬಂಧ ಭಾರತದ ವಿದೇಶಾಂಗ ನೀತಿಯ ಆಧಾರ ಸ್ಥಂಭವಾಗಿದೆ. 

ಫ್ರಾನ್ಸ್ ಅಧಿಕಾರಿಗಳ ಭೇಟಿ ಕುರಿತಂತೆ ತಮ್ಮ ಟ್ವಿಟರ್ ನಲ್ಲಿ ಬರೆದುಕೊಂಡಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು, ಭಾರತ ಮತ್ತು ಫ್ರಾನ್ಸ್ ನಡುವಿನ ದ್ವಿಪಕ್ಷೀಯ ಸಂಬಂಧ ಭಾರತದ ವಿದೇಶಾಂಗ ನೀತಿಯ ಆಧಾರ ಸ್ಥಂಭವಾಗಿದೆ. ಇಂತಹುದೊಂದು ಆತ್ಮೀಯ ಸಂಬಂಧ ಯಾವುದೇ ಪ್ರಜಾಪ್ರಭುತ್ವ ದೇಶದ ದೊಡ್ಡ ಶಕ್ತಿ ಮತ್ತು ಸಾಮರ್ಥ್ಯವಾಗಿರಲಿದೆ. ಫ್ರಾನ್ಸ್ ನೊಂದಿಗೆ ಭಾರತ ಹಲವು ಕ್ಷೇತ್ರಗಳಲ್ಲಿ ಸಂಬಂಧ ಹೊಂದಿದ್ದು, ರಕ್ಷಣೆ, ವ್ಯಾಪಾರ, ನೌಕಾದಳದ ಒಪ್ಪಂದಗಳು, ಸೇರಿದಂತೆ ಎಲ್ಲ ಒಪ್ಪಂದ, ಆರ್ಥಿಕ ಸಹಭಾಗಿತ್ವವನ್ನು ಭಾರತ ಗೌರವಿಸಲಿದೆ ಎಂದು ನಾಯ್ಡು ಹೇಳಿದರು. 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp