69ರ ವಸಂತಕ್ಕೆ ಕಾಲಿಟ್ಟ ಪ್ರಧಾನಿ: ತಾಯಿಯ ಆಶೀರ್ವಾದ ಪಡೆಯಲಿರುವ ಮೋದಿ

69ನೇ ವಸಂತಕ್ಕೆ ಕಾಲಿಟ್ಟಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ತಮ್ಮ ತವರು ರಾಜ್ಯ ಗುಜರಾತ್'ಗೆ ಸೋಮವಾರ ರಾತ್ರಿ ಆಗಮಿಸಿದ್ದು, ಮಂಗಳವಾರ ತಾಯಿಯ ಆಶೀರ್ವಾದವನ್ನು ಪಡೆಯಲಿದ್ದಾರೆ. 

Published: 17th September 2019 08:50 AM  |   Last Updated: 17th September 2019 09:03 AM   |  A+A-


PM Modi

ಪ್ರಧಾನಿ ಮೋದಿ

Posted By : Manjula VN

ತಾಯಿಯ ಆಶೀರ್ವಾದ ಬಳಿಕ ಸರ್ದಾರ್ ಸರೋವರ ಡ್ಯಾಂಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ

ನವದೆಹಲಿ: 69ನೇ ವಸಂತಕ್ಕೆ ಕಾಲಿಟ್ಟಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ತಮ್ಮ ತವರು ರಾಜ್ಯ ಗುಜರಾತ್'ಗೆ ಸೋಮವಾರ ರಾತ್ರಿ ಆಗಮಿಸಿದ್ದು, ಮಂಗಳವಾರ ತಾಯಿಯ ಆಶೀರ್ವಾದವನ್ನು ಪಡೆಯಲಿದ್ದಾರೆ. 

ತಾಯಿಯ ಆಶೀರ್ವಾದ ಪಡೆದ ಬಳಿಕ ಮೋದಿಯವರು ಸರ್ದಾರ್ ಸರೋವರ್ ಡ್ಯಾಮ್'ನ್ನು ವೀಕ್ಷಣೆ ಮಾಡಲಿದ್ದಾರೆ. 

ಸರ್ದಾರ್ ಸರೋವರ್ ಡ್ಯಾಂ ಮುಂಗಾರಿನಿಂದ ಮೈದುಂಬಿ ಹರಿಯುತ್ತಿದೆ. ಪ್ರಧಾನಿ ಮೋದಿ ಭೇಟಿ ಹಿನ್ನಲೆಯಲ್ಲಿ ಇದೀಗ ಡ್ಯಾಂ ಸುತ್ತಮುತ್ತಲೂ ವಿದ್ಯುತ್ ದೀಪಾಲಂಕಾರವನ್ನು ಮಾಡಲಾಗಿದೆ. 

ಮೋದಿ ಹುಟ್ಟುಹಬ್ಬ ಹಿನ್ನಲೆಯಲ್ಲಿ ನರೇಂದ್ರ ಮೋದಿ ಆ್ಯಪ್'ನ್ನು ಹೊಸ ಆವೃತ್ತಿಯಲ್ಲಿ ಬಿಡುಗಡೆ ಮಾಡಲಾಗಿದೆ. 2019ರ ಚುನಾವಣೆ ವೇಳೆ ಬಿಡುಗಡೆಯಾಗಿದ್ದ ಈ ಆ್ಯಪ್ ನಲ್ಲಿ ಹಲವು ಮಾರ್ಪಾಡು ಮಾಡಲಾಗಿದೆ. ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ವಿಶ್ ಮಾಡಲು ಅವಕಾಶ ನೀಡುವ ಫೀಚರ್'ಗಳನ್ನು ಸೇರ್ಪಡೆಗೊಳಿಸಲಾಗಿದೆ. ಸರ್ಕಾರದ ಅಭಿವೃದ್ಧಿ ಕೆಲಸಗಳನ್ನೂ ಈ ಆ್ಯಪ್ ನಲ್ಲಿ ಅಪ್ ಟು ಡೇಟ್ ಮಾಡಲಾಗಿದೆ. 

ಈ ನಡುವೆ ಮೋದಿ ಹುಟ್ಟುಹಬ್ಬ ಹಿನ್ನಲೆಯಲ್ಲಿ ಮಂಗಳವಾರ ಬೆಳಗ್ಗಿನಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಹರಿವು ಜೋರಾಗಿಯೇ ಇದ್ದು, ಟ್ವಿಟರ್ ನಲ್ಲಿ ಟ್ರೆಂಬ್ ತುಂಬ ನರೇಂದ್ರ ಮೋದಿಯವರೇ ಕಾಣುತ್ತಿದ್ದಾರೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp