ಇಬ್ಬರು ಕೆಲಸಗಾರರಿಗೆ ಕೋವಿಡ್-19 ಪಾಸಿಟಿವ್, ಆತಂಕದಲ್ಲಿ ಉಪ ಮುಖ್ಯಮಂತ್ರಿ ಸಚಿನ್ ಪೈಲೆಟ್!

ರಾಜಸ್ತಾನದ ಟೊಂಕ್ ಸರ್ಕಿಟ್ ಹೌಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಕೆಲಸಗಾರರಿಗೆ ಕೊರೋನಾ ವೈರಸ್ ಸೋಂಕು ಪತ್ತೆಯಾಗಿದ್ದು ಉಪ ಮುಖ್ಯಮಂತ್ರಿ ಸಚಿನ್ ಪೈಲೆಟ್ ಆತಂಕ್ಕೀಡಾಗುವಂತೆ ಮಾಡಿದೆ. 
ಸಚಿನ್ ಪೈಲಟ್
ಸಚಿನ್ ಪೈಲಟ್
Updated on: 

ಜೈಪುರ: ರಾಜಸ್ತಾನದ ಟೊಂಕ್ ಸರ್ಕಿಟ್ ಹೌಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಕೆಲಸಗಾರರಿಗೆ ಕೊರೋನಾ ವೈರಸ್ ಸೋಂಕು ಪತ್ತೆಯಾಗಿದ್ದು ಉಪ ಮುಖ್ಯಮಂತ್ರಿ ಸಚಿನ್ ಪೈಲೆಟ್ ಆತಂಕ್ಕೀಡಾಗುವಂತೆ ಮಾಡಿದೆ. 

ಏಪ್ರಿಲ್ 15ರಂದು ಹಲವು ಅಧಿಕಾರಿಗಳೊಂದಿಗೆ ಸಚಿನ್ ಪೈಲೆಟ್ ಟೊಂಕ್ ಸರ್ಕಿಟ್ ಹೌಸ್ ನಲ್ಲಿ ಸಭೆಗಳನ್ನು ನಡೆಸಿದ್ದರು. ಆದ ಕಾರಣ ಸಚಿನ್ ಅವರ ಆತಂಕಕ್ಕೆ ಕಾರಣವಾಗಿದೆ. ರಾಜಸ್ತಾನದ ಟೊಂಕ್ ಜಿಲ್ಲೆ ಇದೀಗ
ಕೊರೋನಾ ಹಾಸ್ ಸ್ಪಾಟ್ ಆಗಿದೆ. ಇಲ್ಲಿ ಸುಮಾರು 115 ಪ್ರಕರಣ ದಾಖಲಾಗಿವೆ. 

ಸಚಿನ್ ಪೈಲಟ್ ಅವರು ಜಿಲ್ಲಾಧಿಕಾರಿ, ಎಸ್ ಪಿ, ಸಿಎಂಎಚ್ಒ, ಪಿಎಂಒ, ಸಿಟಿ ಕೌನ್ಸಿಲ್ ಕಮೀಷನರ್ ಮತ್ತು ಅಧ್ಯಕ್ಷರ ಜೊತೆ ಸಭೆ ನಡೆಸಿದ್ದು ಎಲ್ಲಿರಿಗೂ ಕೊರೋನಾ ಸೋಂಕಿ ಭೀತಿ ಎದುರಾಗಿದೆ. 

ರಾಜಸ್ತಾನದಲ್ಲಿ ಒಟ್ಟಾರೆ 1,964 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇನ್ನು ರಾಜ್ಯದಲ್ಲಿ ಇಲ್ಲಿಯವರೆಗೂ 27 ಮಂದಿ ಬಲಿಯಾಗಿದ್ದಾರೆ. ಇಂದು ಒಂದೇ ದಿನ 44 ಹೊಸ ಪ್ರಕರಣಗಳು ಪತ್ತೆಯಾಗಿದ್ದು 4 ಮೃತಪಟ್ಟಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com