

ನವದೆಹಲಿ: ಮೇ.3ರವರೆಗೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲಾಕ್'ಡೌನ್ ಸಡಿಲಿಕೆಯಿಲ್ಲ ಎಂದು ಮುಖ್ಯಮಂತ್ರಿ ಅವರಿಂದ ಕೇಜ್ರಿವಾಲ್ ಅವರು ಭಾನುವಾರ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಲಾಕ್'ಡೌನ್ ಸಮಯದಲ್ಲಿ ನೆರೆಹೊರೆಯಲ್ಲಿರುವ ಸಣ್ಣಪುಟ್ಟ ಅಂಗಡಿಗಳು, ಸ್ಯಾಂಡ್ ಅಲೋನ್ ಅಂಗಡಿಗಳನ್ನು ತೆರೆಯುವ ಕೇಂದ್ರ ಮಾರ್ಗಸೂಚಿಗಳನ್ನು ಜಾರಿಗೊಳಿಸುತ್ತಿದ್ದೇವೆ. ಆದರೆ, ಮೇ.3ರವರೆಗೂ ಲಾಕ್'ಡೌನ್ ಸಡಿಲಿಕೆಗೊಳಿಸುವುದಿಲ್ಲ ಎಂದು ಹೇಳಿದ್ದಾರೆ.
ಕೇಂದ್ರ ಗೃಹ ಸಚಿವಾಲಯ ಅನುಮತಿ ನೀಡಿರುವ ಅಂಗಡಿಗಳನ್ನು ಹೊರತುಪಡಿಸಿ, ಪ್ರಸ್ತುತ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ದೆಹಲಿಯಲ್ಲಿ ವೈರಸ್ ಸೋಂಕು ಹೆಚ್ಚಾಗುತ್ತಲೇ ಇದ್ದು, ಪರಿಸ್ಥಿತಿ ನಿಭಾಯಿಸುವ ನಮ್ಮ ಪರಿಶ್ರಮ ಮುಂದುವರೆಸಲೇಬೇಕು ಎಂದು ತಿಳಿಸಿದ್ದಾರೆ.