ಬಡವರ ಹೊಟ್ಟೆ ತುಂಬಿಸಲು ರೂ.65 ಸಾವಿರ ಕೋಟಿ ಅಗತ್ಯ, ಭಾರತ ಅತ್ಯಂತ ಬುದ್ಧಿವಂತಿಕೆಯಿಂದ ಲಾಕ್'ಡೌನ್ ತೆಗೆಯಬೇಕು: ಆರ್ಥಿಕ ತಜ್ಞ ರಾಜನ್

ಬಡವರ ಹೊಟ್ಟೆ ತುಂಬಿಸಲು ದೇಶಕ್ಕೆ ರೂ.65,000 ಕೋಟಿ ಅಗತ್ಯವಿದ್ದು, ಇಂತಹ ಸಂದರ್ಭದಲ್ಲಿ ಭಾರತ ಅತ್ಯಂತ ಬುದ್ಧಿವಂತಿಕೆಯಿಂದ ಲಾಕ್'ಡೌನ್ ತೆಗೆಯಬೇಕಿದೆ ಎಂದು ಆರ್ಥಿಕ ತಜ್ಞ ರಘುರಾಮ್ ರಾಜನ್ ಅವರು ಗುರುವಾರ ಹೇಳಿದ್ದಾರೆ. 
ಆರ್ಥಿಕ ತಜ್ಞ ರಘುರಾಮ್ ರಾಜನ್
ಆರ್ಥಿಕ ತಜ್ಞ ರಘುರಾಮ್ ರಾಜನ್

ನವದೆಹಲಿ: ಬಡವರ ಹೊಟ್ಟೆ ತುಂಬಿಸಲು ದೇಶಕ್ಕೆ ರೂ.65,000 ಕೋಟಿ ಅಗತ್ಯವಿದ್ದು, ಇಂತಹ ಸಂದರ್ಭದಲ್ಲಿ ಭಾರತ ಅತ್ಯಂತ ಬುದ್ಧಿವಂತಿಕೆಯಿಂದ ಲಾಕ್'ಡೌನ್ ತೆಗೆಯಬೇಕಿದೆ ಎಂದು ಆರ್ಥಿಕ ತಜ್ಞ ರಘುರಾಮ್ ರಾಜನ್ ಅವರು ಗುರುವಾರ ಹೇಳಿದ್ದಾರೆ. 

ದೇಶದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಮೆರೆಯುತ್ತಿದ್ದು, ಇದರ ಪರಿಮಾಮ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಲಾಕ್'ಡೌನ್ ಮುಗಿಯಲು ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಈ ಹಿನ್ನೆಲೆಯಲ್ಲಿ ದೇಶದ ಆರ್ಥಿಕ ಸ್ಥಿತಿ, ಮತ್ತಿತರ ವಿಷಯಗಳ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ವಿಡಿಯೋ ಮೂಲಕ ಮಾತುಕತೆ ನಡೆಸುತ್ತಿದ್ದಾರೆ.

ಈ ವಿಡಿಯೋ ಸರಣಿಯಲ್ಲಿ ಮೊದಲ ಅತಿಥಿಯಾಗಿ ಆರ್'ಬಿಐ ಮಾಜಿ ಗವರ್ನರ್ ಹಾಗೂ ದೇಶದ ಖ್ಯಾತ ಆರ್ಥಿಕ ತಜ್ಞ ರಘುರಾಮ್ ರಾಜನ್ ಅವರು ಮಾತನಾಡುತ್ತಿದ್ದಾರೆ. 

ಬಡವರ ಹೊಟ್ಟೆ ತುಂಬಿಸಲು ದೇಶಕ್ಕೆ ರೂ.65,000 ಕೋಟಿ ಅಗತ್ಯವಿದೆ. ಜಿಡಿಪಿ ರೂ.200 ಲಕ್ಷ ಕೋಟಿಯಾಗಿರುವುದರಿಂದ ಭಾರತ ಅದನ್ನು ಭರಿಸಬಲ್ಲದು. ದೇಶದಲ್ಲಿ ಪರಿಸ್ಥಿತಿ ಹದಗೆಡುತ್ತಿರುವುದರಿಂದ ಇಂತಹ ಸಂದರ್ಭದಲ್ಲಿ ಸಾಮಾಜಿಕ ಸಾಮರಸ್ಯ ಅತ್ಯಂತ ಮುಖ್ಯವಾಗಿದೆ. ಸವಾಲುಗಳು ದೊಡ್ಡದಾದಾಗ ಮನೆಗಳನ್ನು ವಿಭಜಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

ಬಡವರಿಗೆ ಡಿಬಿಟಿ, ಮನ್ರೇಗಾ, ವಯೋವೃದ್ಧರಿಗೆ ಪಿಂಚಣಿ ಹಾಗೂ ಪಿಡಿಎಸ್ ಮೂಲಕ ಹಣ ನೀಡಿ ಬೆಂಬಲಿಸಬೇಕಿದೆ. ಪ್ರಸ್ತತ ಬಡವರ ಹಸಿವು ನೀಗಿಸುವಲ್ಲಿ ದೇಶದ ಸಾಮರ್ಥ್ಯ ಕಡಿಮೆಯಿದ್ದು, ಇಂತಹ ಸಂದರ್ಭದಲ್ಲಿ ಭಾರತ ಅತ್ಯಂದ ಬುದ್ಧಿವಂತಿಕೆಯಿಂದ ಲಾಕ್'ಡೌನ್ ತೆಗೆಯಬೇಕಿದೆ. ಲಾಭ ಪಡೆಯಲು ದೇಶಕ್ಕೆ ನಾನಾ ಮಾರ್ಗಗಳಿವೆ. ಆದರೆ, ಜಾಗತಿಕ ಆರ್ಥಿಕತೆಯಲ್ಲಿ ಪುನರ್ವಿಮರ್ಶೆ ಇರುವುದರಿಂದ ಈ ಪರಿಸ್ಥಿತಿಯು ಯಾವುದೇ ರೀತಿಯ ಸಕಾರಾತ್ಮಕ ಪರಿಣಾಮಗಳನ್ನು ಬೀರುವುದಿಲ್ಲ. 

ದೀರ್ಘಕಾಲದ ಲಾಕ್'ಡೌನ್ ನಿಂದ ಅರ್ಥಿಕತೆ ಸ್ಥಿರವಾಗಿ ಉಳಿಯಲು  ಸಾಧ್ಯವಿಲ್ಲ. ದೇಶದಲ್ಲಿ ಬಡವರ ಪ್ರಾಣ ಉಳಿಯಬೇಕೆಂದರೆ ನಮಗೆ ರೂ.65 ಸಾವಿರ ಕೋಟಿ ಅವಶ್ಯಕತೆಯಿದೆ. ದೀರ್ಘಕಾಲದ ಲಾಕ್'ಡೌನ್ ಹೊಂದುವುದು ಸರಳವಾಗಿಯೇ ಕಾಣಿಸಬಹುದು. ಆದರೆ, ಇದು ನಮ್ಮ ಆರ್ಥಿಕತೆಯನ್ನು ಸ್ಥಿರವಾಗಿರಲು ಬಿಡುವುದಿಲ್ಲ. ಸೋಂಕಿತರನ್ನು ಪ್ರತ್ಯೇಕವಾಗಿಡಬೇಕಾದ ಅನಿವಾರ್ಯತೆಯಿದ್ದು, ಲಾಕ್'ಡೌನ್ ನ್ನು ಜಾಣತನದಿಂದ ತೆರೆವುಗೊಳಿಸಬೇಕಿದೆ ಎಂದು ತಿಳಿಸಿದ್ದಾರೆ. 

ಇದೇ ವೇಳೆ ಪರೀಕ್ಷಾ ಸಾಮರ್ಥ್ಯ ಕುರಿತ ರಾಹುಲ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಭಾರತ ಪ್ರತೀನಿತ್ಯ 5 ಲಕ್ಷ ಪರೀಕ್ಷೆಗಳನ್ನಾದರೂ ನಡೆಸಬೇಕಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com