ಗಡಿ ವಾಸ್ತವ ರೇಖೆಯುದ್ದಕ್ಕೂ ಸೇನಾ ನಿಲುಗಡೆಗೆ ಚೀನಾ ಮತ್ತೆ ಸಿದ್ದತೆ: ಲಡಾಕ್ ನಲ್ಲಿ ಸೇನಾಪಡೆ ಹೆಚ್ಚಿಸಿದ ಭಾರತ

ಮುಂದಿನ ಚಳಿಗಾಲದಲ್ಲಿ ಸೇನಾ ನಿಲುಗಡೆಯನ್ನು ಪೂರ್ವ ಲಡಾಕ್ ನ ಗಡಿಯುದ್ದಕ್ಕೂ ವಿಸ್ತರಿಸಲು ಸಿದ್ಧತೆಯನ್ನು ಚೀನಾ ನಡೆಸುತ್ತಿರುವಾಗ ಭಾರತ ಕೂಡ ಭದ್ರತೆ ದೃಷ್ಟಿಯಿಂದ ಸೇನಾ ನಿಯೋಜನೆ ಮತ್ತು ಅಗತ್ಯ ಸೌಕರ್ಯಗಳನ್ನು ಹೆಚ್ಚಿಸಲು ಮುಂದಾಗಿದೆ.
ಲಡಾಕ್ ನ ಕಡಿದಾದ ಪ್ರದೇಶದಲ್ಲಿ 11 ಸಾವಿರದ 516 ಅಡಿ ಎತ್ತರದಲ್ಲಿ ಸ್ನೊ ಬೌಂಡ್ ಜೊಜಿಲಾ ಪಾಸ್ ಪ್ರದೇಶದ ಮೂಲಕ ಹಾದುಹೋದ ಭಾರತೀಯ ಸೇನೆಯ ಬೆಂಗಾವಲು ವಾಹನ
ಲಡಾಕ್ ನ ಕಡಿದಾದ ಪ್ರದೇಶದಲ್ಲಿ 11 ಸಾವಿರದ 516 ಅಡಿ ಎತ್ತರದಲ್ಲಿ ಸ್ನೊ ಬೌಂಡ್ ಜೊಜಿಲಾ ಪಾಸ್ ಪ್ರದೇಶದ ಮೂಲಕ ಹಾದುಹೋದ ಭಾರತೀಯ ಸೇನೆಯ ಬೆಂಗಾವಲು ವಾಹನ
Updated on: 

ನವದೆಹಲಿ: ಮುಂದಿನ ಚಳಿಗಾಲದಲ್ಲಿ ಸೇನಾ ನಿಲುಗಡೆಯನ್ನು ಪೂರ್ವ ಲಡಾಕ್ ನ ಗಡಿಯುದ್ದಕ್ಕೂ ವಿಸ್ತರಿಸಲು ಸಿದ್ಧತೆಯನ್ನು ಚೀನಾ ನಡೆಸುತ್ತಿರುವಾಗ ಭಾರತ ಕೂಡ ಭದ್ರತೆ ದೃಷ್ಟಿಯಿಂದ ಸೇನಾ ನಿಯೋಜನೆ ಮತ್ತು ಅಗತ್ಯ ಸೌಕರ್ಯಗಳನ್ನು ಹೆಚ್ಚಿಸಲು ಮುಂದಾಗಿದೆ.

ಪೂರ್ವ ಲಡಾಕ್ ನ ಗಡಿ ವಾಸ್ತವ ರೇಖೆಯುದ್ದಕ್ಕೂ ಸೇನೆ ನಿಯೋಜನೆಯನ್ನು ಹೆಚ್ಚಿಸಲಾಗಿದೆ, ಚೀನಾ ತನ್ನ ಕಡೆಯಿಂದ ಸೇನಾ ನಿಲುಗಡೆಯನ್ನು ಹೆಚ್ಚಿಸುತ್ತಿರುವುದು ನೋಡಿ ಈ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ಮೂಲಗಳಿಂದ ಖಚಿತವಾಗಿ ತಿಳಿದುಬಂದಿದೆ.

ಚೀನಾದ ಕಡೆಯಿಂದ ಭವಿಷ್ಯದಲ್ಲಿ ಯಾವುದೇ ರೀತಿಯ ಆಕ್ರಮಣಶೀಲತೆ ಎದುರಾದರೂ ಅದನ್ನು ಸಮರ್ಥವಾಗಿ ಎದುರಿಸಲು ಭಾರತೀಯ ಸೇನೆ ಈ ಸಿದ್ದತೆ ಮಾಡಿಕೊಳ್ಳುತ್ತಿದೆ. ಈ ಮಧ್ಯೆ ಭಾರತ-ಚೀನಾ ಗಡಿ ವ್ಯವಹಾರಗಳ ಸಮಾಲೋಚನಾ ಮತ್ತು ಸಮನ್ವಯ ಕಾರ್ಯತಂತ್ರ ಸಭೆಯ ರಾಜತಾಂತ್ರಿಕ ಮಟ್ಟದ ಮಾತುಕತೆ ಈ ವಾರ ನಡೆಯುವ ಸಾಧ್ಯತೆಯಿದೆ. ನಿನ್ನೆ ಹಿರಿಯ ಮಿಲಿಟರಿ ಮತ್ತು ರಾಜಕೀಯ ನಾಯಕರ ಸಭೆ ನಡೆದಿದ್ದು ಈಗಿನ ಪರಿಸ್ಥಿತಿ ಮತ್ತು ಭವಿಷ್ಯದ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಯಿತು ಎಂದು ಮೂಲಗಳಿಂದ ತಿಳಿದುಬಂದಿದೆ.

ಮೇ ತಿಂಗಳಿನಿಂದ ಇಲ್ಲಿಯವರೆಗೆ ಭಾರತ ಮತ್ತು ಚೀನಾ ಕಡೆಯಿಂದ ಸುಮಾರು 4 ಸಾವಿರ ಸೇನಾಪಡೆಗಳನ್ನು ನಿಯೋಜಿಸಲಾಗಿತ್ತು. ಗಡಿ ವಾಸ್ತವ ರೇಖೆಯ 3 ಸಾವಿರದ 488 ಕಿಲೋ ಮೀಟರ್ ಉದ್ದಕ್ಕೂ ಭಾರತದ ಕಡೆಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸೇನೆಯನ್ನು ನಿಲುಗಡೆ ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com