ನಂಬಿಸಿ ವಿದ್ಯಾರ್ಥಿನಿ ಮೇಲೆ ನಿರಂತರ ರೇಪ್, ನಿಶ್ಚಯವಾಗಿದ್ದ ಹುಡುಗನಿಗೆ ವಿಡಿಯೋ ಕಳುಹಿಸಿದ ಪೊಲೀಸ್ ಪೇದೆ!

ಪೊಲೀಸ್ ಪೇದೆಯೊಬ್ಬ ಮದುವೆಯಾಗುವುದಾಗಿ ನಂಬಿಸಿ ಕಾಲೇಜು ವಿದ್ಯಾರ್ಥಿನಿಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ್ದು ಅಲ್ಲದೆ ವಿದ್ಯಾರ್ಥಿನಿ ಜೊತೆಗಿನ ಸರಸ ಸಲ್ಲಾಪದ ವಿಡಿಯೋವನ್ನು ನಿಶ್ಚಿತಾರ್ಥವಾಗಿದ್ದ ಹುಡುಗನಿಗೆ ಕಳುಹಿಸಿದ್ದಾನೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಪೊಲೀಸ್ ಪೇದೆಯೊಬ್ಬ ಮದುವೆಯಾಗುವುದಾಗಿ ನಂಬಿಸಿ ಕಾಲೇಜು ವಿದ್ಯಾರ್ಥಿನಿಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ್ದು ಅಲ್ಲದೆ ವಿದ್ಯಾರ್ಥಿನಿ ಜೊತೆಗಿನ ಸರಸ ಸಲ್ಲಾಪದ ವಿಡಿಯೋವನ್ನು ನಿಶ್ಚಿತಾರ್ಥವಾಗಿದ್ದ ಹುಡುಗನಿಗೆ ಕಳುಹಿಸಿದ್ದಾನೆ. 

ಮಹಾರಾಷ್ಟ್ರದ ಔರಂಗಬಾದ್ ನಲ್ಲಿ ಈ ಘಟನೆ ನಡೆಸಿದೆ. 32 ವರ್ಷದ ಪೊಲೀಸ್ ಪೇದೆ ರವೀಂದ್ರ ದಾಭಡೆ ಮದುವೆಯಾಗುವುದಾಗಿ ನಂಬಿಸಿ ವಿದ್ಯಾರ್ಥಿನಿಯನ್ನು ಹಲವು ಬಾರಿ ಅತ್ಯಾಚಾರ ನಡೆಸಿದ್ದಾನೆ. ಮೊದಲ ಸಲ ಅತ್ಯಾಚಾರ ನಡೆಸಿದ ಸಂದರ್ಭದಲ್ಲಿ ವಿದ್ಯಾರ್ಥಿನಿಗೆ ತಿಳಿಯದಂತೆ ವಿಡಿಯೋ ಚಿತ್ರೀಕರಿಸಿಕೊಂಡಿದ್ದಾನೆ. 

ನಂತರ ವಿಡಿಯೋ ತೋರಿಸಿ ಬ್ಲಾಕ್ ಮೇಲ್ ಮಾಡಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾಗಿ ಸಂತ್ರಸ್ತೆ ಆರೋಪಿಸಿದ್ದಾಳೆ. ಈ ದೂರಿನನ್ವಯ ಪೊಲೀಸರು ಪೇದೆಯನ್ನು ಬಂಧಿಸಿದ್ದಾರೆ. 

ಅತ್ಯಾಚಾರ ಸಂತ್ರಸ್ತೆ ದೂರಿನಲ್ಲಿ ಪೇದೆ ನನ್ನನ್ನು ರೇಪ್ ಮಾಡಿದ ವಿಡಿಯೋವನ್ನು ನಾನು ಮದುವೆಯಾಗಬೇಕಿದ್ದ ಯುವನಿಗೆ ಕಳುಹಿಸಿದ್ದಾನೆ. ಇದರಿಂದ ನನ್ನ ಮದುವೆ ನಿಂತು ಹೋಗಿದೆ ಎಂದು ಯುವತಿ ತಿಳಿಸಿದ್ದಾಳೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com