ನಾನು ಮೊದಲು ಭಾರತೀಯ, ನಂತರ ಬಂಗಾಳಿ: ಟಿಎಂಸಿ ವಿರುದ್ಧ ಸುವೇಂದು ಅಧಿಕಾರಿ ವಾಗ್ದಾಳಿ

ತೃಣಮೂಲ ಕಾಂಗ್ರೆಸ್ ಬಂಡಾಯ ಮುಖಂಡ ಸುವೇಂದು ಅಧಿಕಾರಿ ಅವರ ಮುಂದಿನ ರಾಜಕೀಯ ನಡೆ ಬಗ್ಗೆ ಊಹಾಪೋಹಗಳು ಹರಿದಾಡುತ್ತಿರುವಂತೆಯೇ ಮಂಗಳವಾರ ಟಿಎಂಸಿಯ ಒಳಗಿನವರು- ಹೊರಗಿನವರು ಚರ್ಚೆಯ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ  ಬಿಜೆಪಿಗೆ ಹತ್ತಿರವಾದ್ದಂತೆ ಕಂಡುಬಂದರು
ಟಿಎಂಸಿ ಬಂಡಾಯ ಮುಖಂಡ ಸುವೇಂದು ಅಧಿಕಾರಿ
ಟಿಎಂಸಿ ಬಂಡಾಯ ಮುಖಂಡ ಸುವೇಂದು ಅಧಿಕಾರಿ
Updated on: 

ಹಾಲ್ಡಿಯಾ: ತೃಣಮೂಲ ಕಾಂಗ್ರೆಸ್ ಬಂಡಾಯ ಮುಖಂಡ ಸುವೇಂದು ಅಧಿಕಾರಿ ಅವರ ಮುಂದಿನ ರಾಜಕೀಯ ನಡೆ ಬಗ್ಗೆ ಊಹಾಪೋಹಗಳು ಹರಿದಾಡುತ್ತಿರುವಂತೆಯೇ ಮಂಗಳವಾರ ಟಿಎಂಸಿಯ ಒಳಗಿನವರು- ಹೊರಗಿನವರು ಚರ್ಚೆಯ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ  ಬಿಜೆಪಿಗೆ ಹತ್ತಿರವಾದ್ದಂತೆ ಕಂಡುಬಂದರು.  ಇತರ ರಾಜ್ಯದಿಂದ ಬಂದವರನ್ನು ಹೊರಗಿನವರು ಎಂದು ಬ್ರಾಂಡ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಸುವೇಂಡು ಅಧಿಕಾರಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಕೆಲ ತಿಂಗಳುಗಳಿಂದ ಟಿಎಂಸಿಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಟಿಎಂಸಿ ನಾಯಕತ್ವವನ್ನು ಟೀಕಿಸಿರುವ ಸುವೇಂಡು, ಇದು ಜನರಿಗಿಂತ ಪಕ್ಷಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದೆ ಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟಗಾರ ಸತೀಶ್ ಚಂದ್ರ ಸಮಂತಾ ಅವರ ಜನ್ಮ ವರ್ಷಾಚರಣೆ ಸಂದರ್ಭದಲ್ಲಿ ಮಾತನಾಡಿದ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಟಿಎಂಸಿ ನಾಯಕರು ಹುಟ್ಟುಹಾಕಿರುವ ಒಳಗಿನವರು, ಹೊರಗಿನವರು ಚರ್ಚೆಯನ್ನು ಉಲ್ಲೇಖಿಸಿದ ಅಧಿಕಾರಿ, ಬಂಗಾಳ ಭಾರತದ ಒಂದು ಭಾಗವಾಗಿದೆ. ಹೊರಗಿನ ರಾಜ್ಯದಿಂದ ಬಂದಂತಹ ಜನರನ್ನು ಹೊರಗಿನವರು ಎಂದು ಉಪಚರಿಸಬಾರದು ಎಂದರು.

ವಿಧಾನಸಭಾ ಚುನಾವಣೆಗೆ ಸಜ್ಜಾಗಲು ಬಿಜೆಪಿ ತನ್ನ ನಾಯಕರನ್ನು ಇತರ ರಾಜ್ಯಗಳಿಂದ ಕಳುಹಿಸುತ್ತಿದೆ ಎಂದು ಪಶ್ಚಿಮ ಬಂಗಾಳದ ಆಡಳಿತರೂಢ ಟಿಎಂಸಿ ಪಕ್ಷ ಆಗಾಗ್ಗೆ ಟೀಕಿಸುತ್ತಿದೆ.

ನಮಗೆ ದೇಶ ಮೊದಲು ನಂತರ ಬಂಗಾಳ, ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಕೂಡ ಅವರನ್ನು ಸತೀಶ್ ಚಂದ್ರ ಸಮಂತಾ ಅವರನ್ನು ತುಂಬಾ ಗೌರವಿಸುತ್ತಿದ್ದರು. ಸತೀಶ್ ಚಂದ್ರ ಸಮಂತಾ ಎಂದಿಗೂ ನೆಹರೂ ಅವರನ್ನು ಹೊರಗಿನವನೆಂದು ಕರೆಯಲಿಲ್ಲ ಅಥವಾ ನೆಹರೂ ಕೂಡಾ ಹಿಂದಿ ಬರುವುದಿಲ್ಲ ಎಂದು ಸಮಾಂತಾ ಅವರನ್ನು ಬ್ರಾಂಡ್ ಮಾಡಲಿಲ್ಲ. ಅವರಿಬ್ಬರ ನಡುವೆ ಪರಸ್ಪರ ಗೌರವವಿತ್ತು ಎಂದು ಸುವೇಂದು ಅಧಿಕಾರಿ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com