ಅಸ್ಸಾಂಗೆ ಗೃಹ ಸಚಿವ ಅಮಿತ್ ಶಾ ಭೇಟಿ: ಮತ್ತೊಂದು ಸುತ್ತಿನ ಪಕ್ಷಾಂತರ ಪರ್ವ?

ಗೃಹ ಸಚಿವ ಅಮಿತ್ ಶಾ ಡಿ.26 ರಂದು ಅಸ್ಸಾಂಗೆ ಭೇಟಿ ನೀಡುತ್ತಿದ್ದು ಪಶ್ಚಿಮ ಬಂಗಾಳದ ನಂತರ ಮತ್ತೊಂದು ಸುತ್ತಿನ ಪಕ್ಷಾಂತರ ಪರ್ವಕ್ಕೆ ಬಿಜೆಪಿ ವೇದಿಕೆ ಸಿದ್ಧಗೊಳಿಸಿದೆ. 
ಅಮಿತ್ ಶಾ
ಅಮಿತ್ ಶಾ
Updated on

ಅಸ್ಸಾಂ: ಗೃಹ ಸಚಿವ ಅಮಿತ್ ಶಾ ಡಿ.26 ರಂದು ಅಸ್ಸಾಂಗೆ ಭೇಟಿ ನೀಡುತ್ತಿದ್ದು ಪಶ್ಚಿಮ ಬಂಗಾಳದ ನಂತರ ಮತ್ತೊಂದು ಸುತ್ತಿನ ಪಕ್ಷಾಂತರ ಪರ್ವಕ್ಕೆ ಬಿಜೆಪಿ ವೇದಿಕೆ ಸಿದ್ಧಗೊಳಿಸಿದೆ. 

ವಿಪಕ್ಷಗಳ ಹಲವು ನಾಯಕರು ಅಮಿತ್ ಶಾ ಭೇಟಿ ವೇಳೆ ಬಿಜೆಪಿ ಸೇರುವುದಕ್ಕೆ ಉತ್ಸುಕರಾಗಿದ್ದು, 2021 ಕ್ಕೆ ನಡೆಯಲಿರುವ ಅಸ್ಸಾಂ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಇದು ಮಹತ್ವ ಪಡೆದುಕೊಂಡಿದೆ. 

ಅಸ್ಸಾಂ ಭೇಟಿ ವೇಳೆ ಅಮಿತ್ ಶಾ ಪಕ್ಷದ ನಾಯಕರೊಂದಿಗೆ ಚುನಾವಣಾ ತಯಾರಿ ಬಗ್ಗೆ ಸಭೆ ನಡೆಸಿ ಚರ್ಚಿಸಲಿದ್ದಾರೆ. ಬಿಜೆಪಿಯ ಉಪಾಧ್ಯಕ್ಷ ಹಾಗೂ ಅಸ್ಸಾಂ ನ ಬಿಜೆಪಿ ಉಸ್ತುವಾರಿ ಬೈಜಯಂತ್ ಪಾಂಡ  ಅಮಿತ್ ಶಾ ಭೇಟಿಗೂ ಮೊದಲೇ ಅಂದರೆ ಡಿ.23 ರಂದು ಅಸ್ಸಾಂ ಗೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ. 

ಡಿ.25 ರಂದು ಅಮಿತ್ ಶಾ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರತಿಮೆಯನ್ನೂ ಅಸ್ಸಾಂ ನಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಬೈಜಯಂತ್ ಪಾಂಡ ತಿಳಿಸಿದ್ದಾರೆ. 

ಇದೇ ವೇಳೆ ವಿಪಕ್ಷಗಳ ಹಲವಾರು ನಾಯಕರು ಬಿಜೆಪಿ ಸೇರಲು ಉತ್ಸುಕರಾಗಿದ್ದು, ಪಕ್ಷದ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಬೈಜಯಂತ್ ಪಾಂಡ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com