ಪಶ್ಚಿಮ ಬಂಗಾಳದಲ್ಲಿ ಕಮಲ ಅರಳಿದ ನಂತರವೇ ನಾನು ನಿದ್ದೆ ಮಾಡುವುದು: ಸುವೆಂದು ಅಧಿಕಾರಿ

ಪಶ್ಚಿಮ ಬಂಗಾಳದಲ್ಲಿ ಕಮಲ ಅರಳಿದ ಬಳಿಕವಷ್ಟೇ ತಾವು ನಿದ್ರೆ ಮಾಡುವುದಾಗಿ  ತೃಣಮೂಲ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೊಂಡಿರುವ ಮಾಜಿ ಶಾಸಕ ಸುವೆಂದು ಅಧಿಕಾರಿ ಹೇಳಿದ್ದಾರೆ.
ಸುವೇಂದು ಅಧಿಕಾರಿ
ಸುವೇಂದು ಅಧಿಕಾರಿ
Updated on

ಕಾಂತಿ: ಪಶ್ಚಿಮ ಬಂಗಾಳದಲ್ಲಿ ಕಮಲ ಅರಳಿದ ಬಳಿಕವಷ್ಟೇ ತಾವು ನಿದ್ರೆ ಮಾಡುವುದಾಗಿ  ತೃಣಮೂಲ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೊಂಡಿರುವ ಮಾಜಿ ಶಾಸಕ ಸುವೆಂದು ಅಧಿಕಾರಿ ಹೇಳಿದ್ದಾರೆ.

ಬಿಜೆಪಿ ಸೇರ್ಪಡೆಗೊಳ್ಳಲು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೇನೆ. ಇದಕ್ಕೆ ಜನರ ಅನುಮೋದನೆ ದೊರಕಿದೆ ಎಂದು ಪ್ರತಿಕ್ರಿಯಿಸಿದರು. ತವರೂರು ಕಾಂತಿಯಲ್ಲಿ ಬೃಹತ್ ರೋಡ್ ಶೋ ಉದ್ದೇಶಿಸಿ ಮಾತನಾಡಿದ ಸುವೆಂದು ಅಧಿಕಾರಿ, ಈ ರೋಡ್‌ ಶೋಗಳು ನಾನು ಸರಿಯಾದ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು. 

ನನ್ನ ನಿರ್ಧಾರಕ್ಕೆ ಜನರ ಅನುಮೋದನೆ ದೊರಕಿದೆ ಎಂದು ಹೇಳಿದರು.ನಂದಿಗ್ರಾಮದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಸಮಾನವಾಗಿ, ಜನವರಿ 8ರಂದು ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡುವುದಾಗಿ ಸುವೇಂದು ಅಧಿಕಾರಿ ಘೋಷಿಸಿದ್ದಾರೆ.

ನಂದಿಗ್ರಾಮಕ್ಕೆ ಜನವರಿ 7ರಂದು ಮಮತಾ ಬ್ಯಾನರ್ಜಿ ಅವರನ್ನು ನಾನು ಸ್ವಾಗತಿಸುತ್ತೇನೆ. ಅವರು ಅಲ್ಲಿ ಏನನ್ನು ಹೇಳುತ್ತಾರೆ ಅವೆಲ್ಲದಕ್ಕೂ ಮರುದಿನ ನಾನು ಪ್ರತ್ಯುತ್ತರ ನೀಡಲಿದ್ದೇನೆ ಎಂದು ಹೇಳಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com