ರಾಜ್ಯದಲ್ಲಿ 7 ಸೇರಿ ದೇಶದಲ್ಲಿ ಮತ್ತೆ 14 ರೂಪಾಂತರಿ ಕೊರೋನಾ ವೈರಾಣು ಪ್ರಕರಣ ಪತ್ತೆ, ಒಟ್ಟು ಸಂಖ್ಯೆ 20ಕ್ಕೆ ಏರಿಕೆ!

​ಭಾರತದಲ್ಲಿ ಬ್ರಿಟನ್ ರೂಪಾಂತರಿ ವೈರಾಣು ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆ ಕಂಡಿದ್ದು, ಡಿ.30 ರಂದು ಬೆಂಗಳೂರಿನಲ್ಲಿ 7 ಸೇರಿ ದೇಶಾದ್ಯಂತ ಹೊಸದಾಗಿ 14 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 
ಬೆಂಗಳೂರಿನಲ್ಲಿ 7 ಸೇರಿ ದೇಶದಲ್ಲಿ ಮತ್ತೆ 14 ಬ್ರಿಟನ್ ರೂಪಾಂತರಿ ವೈರಾಣು ಪ್ರಕರಣ ಪತ್ತೆ, 20ಕ್ಕೆ ಏರಿಕೆ!
ಬೆಂಗಳೂರಿನಲ್ಲಿ 7 ಸೇರಿ ದೇಶದಲ್ಲಿ ಮತ್ತೆ 14 ಬ್ರಿಟನ್ ರೂಪಾಂತರಿ ವೈರಾಣು ಪ್ರಕರಣ ಪತ್ತೆ, 20ಕ್ಕೆ ಏರಿಕೆ!

ನವದೆಹಲಿ: ಭಾರತದಲ್ಲಿ ಬ್ರಿಟನ್ ರೂಪಾಂತರಿ ವೈರಾಣು ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆ ಕಂಡಿದ್ದು, ಡಿ.30 ರಂದು ಬೆಂಗಳೂರಿನಲ್ಲಿ 7 ಸೇರಿ ದೇಶಾದ್ಯಂತ ಹೊಸದಾಗಿ 14 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 

ಈ ಮೂಲಕ ಬ್ರಿಟನ್ ರೂಪಾಂತರಿ SARS-CoV-2 ವೈರಾಣು ಪ್ರಕರಣಗಳ ಸಂಖ್ಯೆ ಒಟ್ಟಾರೆ 20ಕ್ಕೆ ಏರಿಕೆ ಕಂಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ. ಹೊಸದಾಗಿ ದೃಢಪಟ್ಟಿರುವ ಪ್ರಕರಣಗಳ ಪೈಕಿ ಶಿವಮೊಗ್ಗದ 4 ಮಂದಿಯಲ್ಲಿ ಹಾಗೂ ಬೆಂಗಳೂರಿನ 3 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಡಿ.29 ರಂದು ಮೊದಲ ಬಾರಿಗೆ ದೇಶಾದ್ಯಂತ ಬ್ರಿಟನ್ ನ ರೂಪಾಂತರಿ ವೈರಸ್ ಸೋಂಕು 6 ಮಂದಿಯಲ್ಲಿ ದೃಢಪಟ್ಟಿತ್ತು. 

ಡಿ.30 ರಂದು ನ್ಯಾಷನಲ್ ರೋಗ ನಿಯಂತ್ರಣ ರಾಷ್ಟ್ರೀಯ ಕೇಂದ್ರ (ಎನ್ ಸಿಡಿಸಿ)ಯಲ್ಲಿ 8 ಸ್ಯಾಂಪಲ್ ಗಳು, ಕೋಲ್ಕತ್ತಾದ ಬಳಿ ಇರುವ ಕಲ್ಯಾಣಿಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಬಯೋಮೆಡಿಕಲ್ ಜೀನೋಮಿಕ್ಸ್ ( ಎನ್ಐಬಿಎಂಜಿ) ನಲ್ಲಿ ಒಂದು ಸ್ಯಾಂಪಲ್, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್ ಐವಿ) ಯಲ್ಲಿ ಒಂದು ಸ್ಯಾಂಪಲ್, ಬೆಂಗಳೂರಿನ, ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಆಸ್ಪತ್ರೆ ಸಂಸ್ಥೆ (ನಿಮ್ಹಾನ್ಸ್) ನಲ್ಲಿ 7 ಸ್ಯಾಂಪಲ್ ಗಳು, ಹೈದರಾಬಾದ್ ನ ಸೆಲ್ಯುಲಾರ್ ಮತ್ತು ಆಣ್ವಿಕ ಜೀವಶಾಸ್ತ್ರ ಕೇಂದ್ರ (ಸಿಸಿಎಂಬಿ)ಯಲ್ಲಿ 2 ಸ್ಯಾಂಪಲ್ ಗಳು, ದೆಹಲಿಯ ಇನ್ಸ್ಟಿಟ್ಯೂಟ್ ಆಫ್ ಜೀನೋಮಿಕ್ಸ್ ಅಂಡ್ ಇಂಟಿಗ್ರೇಟಿವ್ ಬಯಾಲಜಿ (ಐಜಿಐಬಿ) ಬ್ರಿಟನ್ ರೂಪಾಂತರಿ ಕೋವಿಡ್ ವೈರಾಣುವಿನ ಸೋಂಕನ್ನು ದೃಢಪಡಿಸಿವೆ. 

ಎಲ್ಲಾ ಸೋಂಕಿತರನ್ನೂ ಆಯಾ ರಾಜ್ಯಗಳಲ್ಲಿ ಒಂದೇ ಕೊಠಡಿಯಲ್ಲಿರಿಸಿ ಐಸೊಲೇಷನ್ ಗೆ ಒಳಪಡಿಸಲಾಗಿದ್ದು, ಅವರ ನಿಕಟ ಸಂಪರ್ಕ ಹೊಂದಿದ್ದವರು ಹಾಗೂ ಅವರೊಂದಿಗೆ ಪ್ರಯಾಣ ಮಾಡಿದವರನ್ನು ಪತ್ತೆ ಮಾಡಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. 

" ಹೊಸ ಕೋವಿಡ್-19 ಸೋಂಕಿಗೆ ಗುರಿಯಾದವರ ಕುಟುಂಬ ಸದಸ್ಯರು, ಸಹ ಪ್ರಯಾಣಿಕರು ಹಾಗೂ ಇನ್ನಿತರ ಸಂಪರ್ಕ ಪತ್ತೆಹಚ್ಚುವಿಕೆಯನ್ನು ಸಮಗ್ರವಾಗಿ ಕೈಗೊಳ್ಳಲಾಗಿದೆ. ಇತರ ಮಾದರಿಗಳಲ್ಲಿ ಜಿನೋಮ್ ಸೀಕ್ವೆನ್ಸಿಂಗ್ ಪ್ರಗತಿಯಲ್ಲಿದೆ" ಎಂದು ಸಚಿವಾಲಯ ತಿಳಿಸಿದೆ. 

ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುತ್ತಿದ್ದು, ರಾಜ್ಯಗಳಿಗೆ ಹೊಸ ವೈರಾಣು ಮಾದರಿಯನ್ನು ಪತ್ತೆ ಹಚ್ಚಿ ನಿಯಂತ್ರಿಸುವುದಕ್ಕೆ ನಿಯಮಿತವಾದ ಸಲಹೆ ಸೂಚನೆಗಳನ್ನು ಕಳಿಸಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ. ಹೊಸ ಮಾದರಿಯ ವೈರಾಣು ಭಾರತವಷ್ಟೇ ಅಲ್ಲದೇ ಈಗಾಗಲೇ ಡೆನ್ಮಾರ್ಕ್, ನೆದರ್ಲ್ಯಾಂಡ್, ಆಸ್ಟ್ರೇಲಿಯಾ, ಇಟಾಲಿ, ಸ್ವೀಡನ್, ಫ್ರಾನ್ಸ್, ಸ್ಪೇನ್, ಸ್ವಿಟ್ಜರ್ಲ್ಯಾಂಡ್, ಜರ್ಮನಿ, ಕೆನಡಾ, ಜಪಾನ್, ಲೆಬಿನಾನ್ ಸಿಂಗಪೂರ್ ಸೇರಿದಂತೆ ಹಲವೆಡೆ ಪತ್ತೆಯಾಗಿದೆ. 

ನ.25 ರಿಂದ ಡಿ.23 ರ ಮಧ್ಯರಾತ್ರಿವರೆಗೆ 33,000 ಮಂದಿ ಬ್ರಿಟನ್ ನಿಂದ ಭಾರತಕ್ಕೆ ಪ್ರಯಾಣಿಸಿದ್ದಾರೆ. ಈ ಎಲ್ಲಾ ಪ್ರಯಾಣಿಕರನ್ನೂ ಆರ್ ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com