ವಜ್ರ ವ್ಯಾಪಾರದ ಮೇಲೂ ಪರಿಣಾಮ ಬೀರಿದ ಕೊರೋನಾ ವೈರಸ್

ಹಾಂಗ್ ಕಾಂಗ್ ಜೊತೆಗಿನ ರಫ್ತು ವ್ಯವಹಾರ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಸೂರತ್ ವಜ್ರೋದ್ಯಮ ರೂ.8000 ಕೋಟಿ ನಷ್ಟ ಎದುರಿಸುವಂತಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಸೂರತ್: ಹಾಂಗ್ ಕಾಂಗ್ ಜೊತೆಗಿನ ರಫ್ತು ವ್ಯವಹಾರ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಸೂರತ್ ವಜ್ರೋದ್ಯಮ ರೂ.8000 ಕೋಟಿ ನಷ್ಟ ಎದುರಿಸುವಂತಾಗಿದೆ. 

ವಜ್ರಾಭರಣ ಆಮದು ಪೈಕಿ ಹಾಂಕಾಂಗ್ ಮುಂಚೂಣಿಯಲ್ಲಿದೆ. ಸೂರತ್ ನಿಂದ ಪ್ರತಿವರ್ಷ ರೂ.50,000 ಕೋಟಿ ಮೌಲ್ಯದ ವಜ್ರ ಹಾಂಕಾಂಗ್'ಗೆ ರಫ್ತಾಗುತ್ತದೆ. 

ಕೊರೋನಾ ವೈರಸ್ ವಜ್ರದ ವ್ಯಾಪಾರದ ಮೇಲೆ ಗಂಭೀರ ಪರಿಣಾಮ ಬೀರಿದೆ. ಚೀನಾ ಹಾಗೂ ಹಾಂಕಾಂಗ್ ನಲ್ಲಿ ನಮ್ಮ ಅನೇಕ ಕಚೇರಿಗಳಿವೆ. ಕೊರೋನಾ ವೈರಸ್ ಹರಡುವ ಭೀತಿಯಿಂದಾಗಿ ಎಲ್ಲಾ ಕಚೇರಿಗಳೂ ಬಂದ್ ಆಗಿವೆ. ಕೆಲಸಕ್ಕೆ ಬರಲು ಸಿಬ್ಬಂದಿಗಳು ನಿರಾಕರಿಸುತ್ತಿದ್ದಾರೆ. ಈ ಹಿಂದೆ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆ ವ್ಯಾಪಾರದ ಮೇಲೆ ಪರಿಣಾಮ ಬೀರಿತ್ತು. ಈ ವೇಳೆ ಸಾಕಷ್ಟು ನಷ್ಟ ಎದುರಾಗಿತ್ತು. ಇದೀಗ ಕೊರೋನಾ ವೈರಸ್ ಪರಿಣಾಮ ಬೀರುತ್ತಿದೆ ಎಂದು ವಜ್ರದ ವ್ಯಾಪಾರಿ ಕೀರ್ತಿ ಶಾ ಎಂಬುವವರು ಹೇಳಿದ್ದಾರೆ. 

ಹಾಂಕಾಂಗ್ ವಜ್ರಗಳನ್ನು ರಫ್ತು ಮಾಡಲಾಗುತ್ತಿತ್ತು. ಪಾಲಿಷ್ ಮಾಡಿದ ವಜ್ರಗಳಿಗೆ ಚೀನಾದಲ್ಲಿ ಪ್ರಮುಖ ಕೇಂದ್ರವಿದೆ. ಕೊರೋನಾ ವೈರಸ್ ಹೀಗೆಯೇ ಮುಂದುವರೆಸಿದ್ದೇ ಆದರೆ, ವ್ಯಾಪಾರದ ಮೇಲೆ ಮತ್ತಷ್ಟು ಪರಿಣಾಮ ಬೀರಲಿದೆ. ನಮ್ಮ ವಜ್ರಗಳು ಮಾರಾಟವಾಗದೇ ಹೋದರೆ, ಸಾಕಷ್ಟು ನಷ್ಟ ಎದುರಾಗುತ್ತದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com