ದೇಶದಲ್ಲಿ ಚಿರತೆಗಳ ಸಂಖ್ಯೆ ಶೇ.75-90ರಷ್ಟು ಕುಸಿತ: ಅಧ್ಯಯನ

ಚಿರತೆಗಳ ಸಂತತಿ ಭಾರತದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಯಾಗುತ್ತಿದೆ ಎಂಬ ಆತಂಕಕಾರಿ ಸಂಗತಿಯೊಂದು ಅಧ್ಯಯನವೊಂದರಲ್ಲಿ ಬೆಳಕಿಗೆ ಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ನವದೆಹಲಿ: ಚಿರತೆಗಳ ಸಂತತಿ ಭಾರತದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಯಾಗುತ್ತಿದೆ ಎಂಬ ಆತಂಕಕಾರಿ ಸಂಗತಿಯೊಂದು ಅಧ್ಯಯನವೊಂದರಲ್ಲಿ ಬೆಳಕಿಗೆ ಬಂದಿದೆ. 

ಸೆಂಟರ್ ಫಾರ್ ವೈಲ್ಡ್ ವೈಫ್ ಸ್ಟಡೀಸ್ ನಡೆಸಿರುವ ಅಧ್ಯಯನದ ಪ್ರಕಾರ ಕಳೆದ 120 ರಿಂದ 200 ವರ್ಷಗಳ ಹಿಂದಿನ ಸಂಖ್ಯೆಗೆ ಹೋಲಿಕೆ ಮಾಡಿದರೆ ಚಿರತೆಗಳ ಸಂಖ್ಯೆ ಭಾರತದಲ್ಲಿ ಶೇ.75ರಿಂದ ಶೇ.90ರಷ್ಟು ಇಳಿಕೆ ಕಂಡಿದೆ. 

ಅದರಲ್ಲೂ ಚಿರತೆಗಳಲ್ಲಿ ಉಪ ಜಾತಿಗಳಾದ ಪಶ್ಚಿಮ ಘಟ್ಟದಲ್ಲಿ ಕಂಡು ಬರುವ ಚಿರತೆಗಳು, ದಕ್ಖನ್ ಪ್ರಸ್ತಭೂಮಿ ಮತ್ತು ಅರೆ ಮಲೆನಾಡು ಪ್ರದೇಶದಲ್ಲಿ ಕಂಡು ಬರುವ ಚಿರತೆಗಳು ಮತ್ತು ಉತ್ತರ ಭಾರತದ ತೆರಾಯ್ ಪ್ರದೇಶದಲ್ಲಿ ಕಂಡು ಬರುವ ಚಿರತೆಗಳ ಸಂತತಿ ಅಪಾಯದಲ್ಲಿದೆ. 

ಚಿರತೆಗಳ ಸಂಖ್ಯೆ ಇದೇ ರೀತಿಯಲ್ಲಿ ಇಳಿಕೆ ಕಂಡರೆ ಭಾರತದಲ್ಲಿ ಹುಲಿಗೆ ಬಂದ ಸ್ಥಿತಿಯೇ ಚಿರತೆಗಳಿಗೂ ಬರಬಹುದು ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಭಾರತದೆಲ್ಲೆಡೆಯಿಂದ ಸಂಗ್ರಹಿಸಲಾದ ಚಿರತೆಗಳ ಅನುವಂಶಿಕ ದತ್ತಾಂಶಗಳನ್ನು ಆಧರಿಸಿ ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com