ಹೋಟೆಲ್ ನ ಪನ್ನೀರ್ ಕರಿ ಸೇವಿಸಿ 2 ವರ್ಷದ ಬಾಲಕ ಸಾವು!

ಪೋಷಕರ ಜೊತೆ ಹೋಟೆಲ್ ಗೆ ತೆರಳಿ ರೋಟಿ ಕರಿ ಸೇವಿಸಿದ 2 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ   ಹೈದಾರಾಬಾದ್ ನ ಬೇಗುಂಪೇಟೆಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಹೈದರಾಬಾದ್:  ಪೋಷಕರ ಜೊತೆ ಹೋಟೆಲ್ ಗೆ ತೆರಳಿ ರೋಟಿ ಕರಿ ಸೇವಿಸಿದ 2 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ   ಹೈದಾರಾಬಾದ್ ನ ಬೇಗುಂಪೇಟೆಯಲ್ಲಿ ನಡೆದಿದೆ.

ಫೆಬ್ರವರಿ 10 ರಂದು ನಗರಕ್ಕೆ ಆಗಮಿಸಿದ್ದ ಕುಟುಂಬ  ಯುಎಸ್ ರಾಯಭಾರ ಕಚೇರಿಬಳಿಯಿರುವ ಮಾನಸ ಸರೋವರ ಹೋಟೆಲ್ ನಲ್ಲಿ ಉಳಿದುಕೊಂಡಿದ್ದರು.  ವೀಸಾಗಾಗಿ ಫಿಂಗರ್ ಪ್ರಿಂಟ್ ಕೊಡಲು  ರಾಯಬಾರ ಕಚೇರಿಗೆ ತೆರಳುವ ಮುನ್ನ  ಕುಟುಂಬ ಬೆಳಗಿನ ಉಪಹಾರ ಸೇವಿಸಿತ್ತು,  ನಂತರ ಅಲ್ಲಿನ ಪ್ರವಾಸಿ ಸ್ಥಳ ನೋಡಲು ತೆರಳಿದ್ದರು. ನಂತರ ಅಲ್ಲಿಂದ ಬಂದು ಹೋಟೆಲ್ ನಲ್ಲಿ ರೋಟಿ ಮತ್ತು ಪನ್ನೀರ್ ಕರಿ ಸೇವಿಸಿದ್ದರು.

ಖಮ್ಮಮ್ಮ ನಿವಾಸಿಯಾದ  ರವಿ ನಾರಾಯಣ್ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಎಂಜಿನೀಯರಿಂಗ್ ಆಗಿ ಕೆಲಸ ಮಾಡುತ್ತಿದ್ದರು.ಯುಎಸ್ ಗೆ ತೆರಳಲು ಪತ್ನಿ ಮತ್ತು ಮಗನ ವೀಸಾಗೆ ಅರ್ಜಿ ಹಾಕಿದ್ದರು.

ಮಧ್ಯರಾತ್ರಿ ಬಾಲಕ ವಿಹಾನ್ ಮತ್ತು  ಆತನ ತಂದೆ ರವಿಗೆ ಮಧ್ಯರಾತ್ರಿ ವಾಂತಿ ಮತ್ತು ಹೊಟ್ಟೆ ನೋವು ಕಾಣಿಸಿಕೊಂಡಿದೆ. ರವಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ, ಅದಾದ ನಂತರ ಮಗು  ವಿಹಾನ್ ಅಸ್ವಸ್ಥನಾಗಿ ಪ್ರಜ್ಞೆ ಕಳೆದುಕೊಂಡಿದ್ದಾನೆಂದು ಆತನ ಪತ್ನಿ ಕರೆ ಮಾಡಿದ್ದರು ಎಂದು ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.
 
ಕೂಡಲೇ ಮಗುವನ್ನು  ಕಿಮ್ಸ್ ಆಸ್ಪತ್ರೆಗೆ ಸೇರಿಸಿದ್ದಾರೆ.  ಕೂಡಲೇ ಮಗುವಿಗೆ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ನೀಡುತ್ತಿದ್ದ ವೇಳೆಯೇ ಮಗು ಸಾವನ್ನಪ್ಪಿದೆ, ಈ ಸಂಬಂಧ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ರವಿನಾರಾಯಣ್ ಕುಟುಂಬ ಸೇವಿಸಿದ್ದ ಆಹಾರದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ಆಹಾರ ವಿಷಯುಕ್ತವಾಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com