ಕಳಸಾ ಅಧಿಸೂಚನೆ ಆದೇಶಕ್ಕೆ ಗೋವಾ ಕ್ಯಾತೆ: ತಡೆ ಕೋರಿ 2-3 ದಿನಗಳಲ್ಲಿ ಸುಪ್ರೀಂಗೆ

ಮಹದಾಯಿ ನ್ಯಾಯಾಧೀಕರಣದ ಐತೀರ್ಪಿನ ಅಧಿಸೂಚನೆ ಹೊರಡಿಸುವಂತೆ ಸುಪ್ರೀಂಕೋರ್ಟ್ ನೀಡಿದ ಆದೇಸಕ್ಕೆ ತಡೆ ನೀಡುವಂತೆ ಕೋರಲಾಗುವುದು. ಸುಪ್ರೀಂಕೋರ್ಟ್ನಲ್ಲೇ ಈ ಬಗ್ಗೆ ಅರ್ಜಿ ಸಲ್ಲಿಸಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಹೇಳಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಪಣಜಿ: ಮಹದಾಯಿ ನ್ಯಾಯಾಧೀಕರಣದ ಐತೀರ್ಪಿನ ಅಧಿಸೂಚನೆ ಹೊರಡಿಸುವಂತೆ ಸುಪ್ರೀಂಕೋರ್ಟ್ ನೀಡಿದ ಆದೇಸಕ್ಕೆ ತಡೆ ನೀಡುವಂತೆ ಕೋರಲಾಗುವುದು. ಸುಪ್ರೀಂಕೋರ್ಟ್ನಲ್ಲೇ ಈ ಬಗ್ಗೆ ಅರ್ಜಿ ಸಲ್ಲಿಸಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನು 2-3 ದಿನಗಳಲ್ಲಿ ಆದೇಶಕ್ಕೆ ತಡೆ ಕೋರಿ ಸುಪ್ರೀಂಕೋರ್ಟ್'ಗೆ ಅರ್ಜಿ ಸಲ್ಲಿಸಲಾಗುವುದು. ಮಹಾದಾಯಿ ಕಾಮಗಾರಿ ಕೈಗೆತ್ತಿಕೊಳ್ಳದಂತೆ ಕರ್ನಾಟಕಕ್ಕೆ ಸೂಚಿಸಬೇಕೆಂದು ಕೋರಲಾಗುವುದು ಎಂದು ಹೇಳಿದರು. 

ಈ ಹಿಂದೆ ಕೋರ್ಟ್ ಯಥಾಸ್ಥಿತಿ ಮುಂದುವರಿಸಲು ಆದೇಶಿದ್ದರೂ ಕರ್ನಾಟಕ ಕಾಮಗಾರಿ ನಡೆಸಿ ನದಿ ತಿರುವು ಮಾಡಿದೆ ಎಂದು ನಾನು ವಿಧಾನಸಭೆಯಲ್ಲಿಯೇ ಹೇಳಿದ್ದೆ. ಕೋರ್ಟ್ ಆದೇಶ ಉಲ್ಲಂಘಿಸುವ ಚಾಳಿ ಕರ್ನಾಟಕ್ಕೆ ಇದೆ ಎಂದು ಸಾವಂತ್ ಆರೋಪಿಸಿದ್ದಾರೆ. 

ಗುರುವಾದ ಆದೇಶ ಗೋವಾದ ಸೋಲಲ್ಲ. ಜುಲೈನಲ್ಲಿ ಅಂತಿಮ ವಿಚಾರಣೆ ಇದೆ. ನಾವು ಬಲವಾದ ವಾದ ಮಂಡಿಸಲಿದ್ದೇವೆ ಎಂದು ಅವರು, ಪ್ರತಿಪಕ್ಷಗಳೂ ಈ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಳ್ಳಿತ್ತಿವೆ ಎಂದು ಆರೋಪಿಸಿದರು. 

ಐತೀರ್ಪಿನ ಅಧಿಸೂಚನೆ ಹೊರಡಿಸುವತೆ ಗುರುವಾರವಷ್ಟೇ ಸುಪ್ರೀಂಕೋರ್ಟ್ ಆದೇಶ ನೀಡಿತ್ತು ಹಾಗೂ ಮಹದಾಯಿ ಐತೀರ್ಪನ್ನು ಪ್ರಶ್ನಿಸಿ ಗೋವಾ. ಕರ್ನಾಟಕ ಹಾಗೂ ಮಹಾರಾಷ್ಟ್ರ ಸಲ್ಲಿಸಿದ್ದ ಅರ್ಜಿಯನ್ನು ಜುಲೈ 15ರಂದು ವಿಚಾರಣೆ ನಡೆಸುವುದಾಗಿ ಹೇಳಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com