ಇಲ್ಲಿನ ಜನರು ಅತ್ಯಂತ ಸ್ವಾಗತಾರ್ಹ, ಕರುಣಾಮಯಿಗಳು: ಹ್ಯಾಪಿನೆಸ್ ಕ್ಲಾಸ್'ನಲ್ಲಿ ಭಾರತೀಯರ ಕೊಂಡಾಡಿದ ಮೆಲಾನಿಯಾ ಟ್ರಂಪ್

ಅಮೆರಿಕಾದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರು ದೆಹಲಿಯ ಸರ್ವೋದಯ ಸೀನಿಯರ್ ಸೆಕೆಂಡರಿ ಶಾಲೆಗೆ ಮಂಗಳವಾರ ಭೇಟಿ ನೀಡಿದ್ದು, ಶಾಲೆಗೆ ಆಗಮಿಸಿದ ಮೆಲಾನಿಯಾ ಅವರನ್ನು ಸಾಂಪ್ರದಾಯಿಕ ಉಡುಗೆ ತೊಟ್ಟ ಪುಟ್ಟ ಮಕ್ಕಳು ತಿಲಕವಿಟ್ಟು ಸ್ವಾಗತಿಸಿದ್ದಾರೆ. 
ದೆಹಲಿ ಸರ್ಕಾರಿ ಶಾಲೆಗೆ ತೆರಳಿದ ಮೆಲಾನಿಯಾ ಟ್ರಂಪ್: ಸಾಂಪ್ರದಾಯಿಕ ಉಡುಗೆ ತೊಟ್ಟ ಪುಟ್ಟ ಮಕ್ಕಳಿಂದ ತಿಲಕವಿಟ್ಟು ಸ್ವಾಗತ
ದೆಹಲಿ ಸರ್ಕಾರಿ ಶಾಲೆಗೆ ತೆರಳಿದ ಮೆಲಾನಿಯಾ ಟ್ರಂಪ್: ಸಾಂಪ್ರದಾಯಿಕ ಉಡುಗೆ ತೊಟ್ಟ ಪುಟ್ಟ ಮಕ್ಕಳಿಂದ ತಿಲಕವಿಟ್ಟು ಸ್ವಾಗತ

ನವದೆಹಲಿ: ಅಮೆರಿಕಾದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರು ದೆಹಲಿಯ ಸರ್ವೋದಯ ಸೀನಿಯರ್ ಸೆಕೆಂಡರಿ ಶಾಲೆಗೆ ಮಂಗಳವಾರ ಭೇಟಿ ನೀಡಿದ್ದು, ಶಾಲೆಗೆ ಆಗಮಿಸಿದ ಮೆಲಾನಿಯಾ ಅವರನ್ನು ಸಾಂಪ್ರದಾಯಿಕ ಉಡುಗೆ ತೊಟ್ಟ ಪುಟ್ಟ ಮಕ್ಕಳು ತಿಲಕವಿಟ್ಟು ಸ್ವಾಗತಿಸಿದ್ದಾರೆ. 

ಶಾಲೆಗೆ ಆಗಮಿಸಿದ ಮೆಲಾನಿಯಾ ಟ್ರಂಪ್ ಅವರಿಗೆ ಮೋತಿಬಾಗ್'ನ ಸರ್ವೋದಯ ವಿದ್ಯಾಲಯದ ಮಕ್ಕಳು ಸಂಭ್ರಮದ ಸ್ವಾಗತ ಕೋರಿದರು. ಮೆಲಾನಿಯಾ ಅವರಿಗೆ ಆರತಿ ಬೆಳಗಿ ತಿಲಕವಿಟ್ಟು, ಹೂಗುಚ್ಛ ನೀಡುವ ಮೂಲಗ ಸ್ವಾಗತಿಸಿದರು. 

ಶಾಲೆಗೆ ಭೇಟಿ ನೀಡಿರುವ ಮೆಲಾನಿಯಾ ಅವರು ಸುಮಾರು 1 ಗಂಟೆಯ ಕಾಲ ಮಕ್ಕಳೊಂದಿಗೆ ಕಾಲ ಕಳೆಯಲಿದ್ದಾರೆ. 

ಹ್ಯಾಪಿನೆಲ್ ಕ್ಲಾಸ್'ಗೆ ಭೇಟಿ ನೀಡಿದ ಮೆಲಾನಿಯಾ ಟ್ರಂಪ್ ಅವರು, ಭೇಟಿಗೆ ಸಂತಸ ವ್ಯಕ್ತಪಡಿಸಿದ್ದಾರೆ. ಇದು ಅತ್ಯಂತ ಸುಂದರವಾದ ಶಾಲೆ. ಸಾಂಪ್ರಾದಾಯಿಕ ನೃತ್ಯ ಪ್ರದರ್ಶನದ ಮೂಲಕ ನನ್ನನ್ನು ಸ್ವಾಗತಿಸಿದ್ದಕ್ಕೆ ಧನ್ಯವಾದಗಳು. ಭಾರತಕ್ಕೆ ಇದು ನನ್ನ ಮೊದಲ ಭೇಟಿಯಾಗಿದೆ. ಇಲ್ಲಿರುವ ಜನರು ಅತ್ಯಂತ ಸ್ವಾಗತಾರ್ಹ ಹಾಗೂ ಕರುಣಾಮಯಿಗಳಾಗಿದ್ದಾರೆಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com