ಗ್ಯಾಸ್ ಚೇಂಬರ್‌ನಂತಾಗಿರುವ ದೆಹಲಿಯಲ್ಲಿ ಸ್ವಂತ ಹಣದಲ್ಲಿ ಗಾಳಿ ಶುದ್ಧೀಕರಣ ಟವರ್ ನಿರ್ಮಿಸಿದ ಗಂಭೀರ್!

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು ದೆಹಲಿಯಲ್ಲಿ ಗಾಳಿ ಶುದ್ಧೀಕರಣ ಟವರ್ ಅವರನ್ನು ಉದ್ಘಾಟಿಸಿದ್ದು ಇದು ದೇಶದಲ್ಲಿ ಮೊದಲ ಗಾಳಿ ಶುದ್ಧೀಕರಣ ಟವರ್ ಆಗಿದೆ.
ಗೌತಮ್ ಗಂಭೀರ್
ಗೌತಮ್ ಗಂಭೀರ್
Updated on: 

ನವದೆಹಲಿ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು ದೆಹಲಿಯಲ್ಲಿ ಗಾಳಿ ಶುದ್ಧೀಕರಣ ಟವರ್ ಅವರನ್ನು ಉದ್ಘಾಟಿಸಿದ್ದು ಇದು ದೇಶದಲ್ಲಿ ಮೊದಲ ಗಾಳಿ ಶುದ್ಧೀಕರಣ ಟವರ್ ಆಗಿದೆ. 

ದೆಹಲಿಯ ಲಜಪತ್ ನಗರದ ಕೇಂದ್ರೀಯ ಮಾರುಕಟ್ಟೆಯಲ್ಲಿ 7 ಲಕ್ಷ ರೂ ವೆಚ್ಚದಲ್ಲಿ 20 ಅಡಿ ಎತ್ತರವಿರುವ ಗಾಳಿ ಶುದ್ಧೀಕರಣ ಟವರ್ ಸ್ಥಾಪಿಸಲಾಗಿದೆ. ಈ ಪ್ರದೇಶದಲ್ಲಿ ವಾಯು ಮಾಲಿನ್ಯ ಪ್ರಮಾಣ ವಿಪರೀತವಾಗಿದೆ. ಇಲ್ಲಿ ಪ್ರತಿನಿತ್ಯ 15 ಸಾವಿರ ಮಂದಿ ಸಂಚರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಈ ಟವರ್ ನಿರ್ಮಿಸಲಾಗಿದೆ. 

ಲಜಪತ್ ನಗರದ ವರ್ತಕರ ಸಂಘವು ಸಂಸದ ಗೌತಮ್ ಗಂಭೀರ್ ಸಹಕಾರದೊಂದಿಗೆ ಈ ಟವರ್ ನಿರ್ಮಿಸಲಾಗಿದೆ. ಈ ಟವರ್ ನಿರ್ವಹಣೆಗೆ ವಾರ್ಷಿಕ 30 ಸಾವಿರ ರೂಪಾಯಿ ಬೇಕಾಗಿದ್ದು ಇದನ್ನು ವರ್ತಕರ ಸಂಘವೇ ಭರಿಸಲಿದೆ. 

ಈ ಶುದ್ದೀಕರಣ ಟವರ್ ಶೇಖಡ 80%ರಷ್ಟು ವಾಯುಮಾಲಿನ್ಯ ನಿವಾರಿಸಲಿದೆ. ಈ ಟವರ್ ಗೆ ತನ್ನ ಸುತ್ತಿಲಿನ 500-750 ಮೀಟರ್ ವ್ಯಾಪ್ತಿಯವರೆಗೆ ವಾಯು ಮಾಲಿನ್ಯ ನಿಯಂತ್ರಿಸುವ ಸಾಮರ್ಥ್ಯವಿದೆ. ಪ್ರತಿದಿನ 2.50 ಲಕ್ಷದಿಂದ 6 ಲಕ್ಷ ಕ್ಯೂಬಿಕ್ ಗಾಳಿಯನ್ನು ಶುದ್ಧೀಕರಿಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com