ಮುಂಬೈ: ರೆಡ್ ಲೈಟ್ ಏರಿಯಾಗೆ ಬರಲು ನಿರಾಕರಿಸಿದ ಕ್ಯಾಬ್ ಚಾಲಕನ ಮೇಲೆ ಪೊಲೀಸ್ ಪೇದೆಯಿಂದ ಅತ್ಯಾಚಾರ

ಆರ್ ಪಿಎಫ್ ಪೊಲೀಸ್ ಪೇದೆಯೊಬ್ಬರು ಮುಂಬೈನ ರೆಡ್ ಲೈಟ್ ಏರಿಯಾಗೆ ಡ್ರಾಪ್ ಮಾಡಲು ನಿರಾಕರಿಸಿದ ಕ್ಯಾಬ್ ಚಾಲಕನ ಮೇಲೆ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ಭಾನುವಾರ ರಾತ್ರಿ ನಡೆದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಆರ್ ಪಿಎಫ್ ಪೊಲೀಸ್ ಪೇದೆಯೊಬ್ಬರು ಮುಂಬೈನ ರೆಡ್ ಲೈಟ್ ಏರಿಯಾಗೆ ಡ್ರಾಪ್ ಮಾಡಲು ನಿರಾಕರಿಸಿದ ಕ್ಯಾಬ್ ಚಾಲಕನ ಮೇಲೆ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ಭಾನುವಾರ ರಾತ್ರಿ ನಡೆದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಛತ್ರಪತಿ ಶಿವಾಜಿ ಮಹಾರಾಜ್ ರೈಲ್ವೆ ನಿಲ್ದಾಣದ ಸಮೀಪದ ಪಿಡಿ ಮೆಲೋ ರಸ್ತೆಯ ಬೆಂಚ್ ಮೇಲೆ ವಿಶ್ರಾಂತಿ ಪಡೆಯುತ್ತಿದ್ದ ಕ್ಯಾಬ್ ಚಾಲಕನ ಮೇಲೆ ಅತ್ಯಾಚಾರ ಎಸಗಿದ ಘಟನೆ ನಡೆದಿದೆ.

ಆರ್ ಪಿಎಫ್ ಪೊಲೀಸ್ ಪೇದೆ ಅಮಿತ್ ಧಂಕಡ್ ಅವರು ಕ್ಯಾಬ್ ಚಾಲಕನ ಬಳಿ ಹೋಗಿ, ತನ್ನನ್ನು ದಕ್ಷಿಣ ಮುಂಬೈನ ಗ್ರಾಂಟ್ ರಸ್ತೆ ಪ್ರದೇಶದಲ್ಲಿ ವೇಶ್ಯಾವಾಟಿಕೆ ನಡೆಯುವ ಸ್ಥಳಕ್ಕೆ ಕರೆದುಕೊಂಡು ಹೋಗುವಂತೆ ಕೇಳಿಕೊಂಡಿದ್ದಾನೆ. ರೆಡ್ ಲೈಟ್ ಏರಿಯಾಗೆ ಹೋಗಲು ಚಾಲಕ ನಿರಾಕರಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಪೇದೆ, ಚಾಲಕನ ಮೇಲೆ ಹಲ್ಲೆ ನಡೆಸಿ, ಆತನನ್ನು ರೇಲ್ವೆ ನಿಲ್ದಾಣದ ಮೂಲೆಯೊಂದಕ್ಕೆ ಎಳೆದೊಯ್ದು, ಆತನೊಂದಿಗೆ ಅಸ್ವಾಭಾವಿಕ ಸೆಕ್ಸ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಘಟನೆಯ ಬಳಿಕ ಪೊಲೀಸ್ ಪೇದೆ, ಚಾಲಕನ ಬಳಿ ಇದ್ದ ಹಣ, ಕಾರಿನ ಕೀ ಹಾಗೂ ಚಾಲಕನಿಗೆ ಸೇರಿದ ಇತರೆ ವಸ್ತುಗಳೊಂದಿಗೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಂಆರ್ ಎ ಮಾರ್ಗ್ ಪೊಲೀಸ್ ಠಾಣೆಗೆ ಕ್ಯಾಬ್ ಚಾಲಕ ನೀಡಿದ ದೂರಿನ ಆಧಾರದ ಮೇಲೆ ಕೇಸ್ ದಾಖಲಿಸಿಕೊಂಡ ಪೊಲೀಸರು, ಆರೋಪಿ ಕಾಮುಕ ಧಂಕಡ್ ನನ್ನು ಬಂಧಿಸಿದ್ದಾರೆ.

ಇನ್ನು ಈ ಆಘಾತಕಾರಿ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಆರ್ ಪಿಎಫ್, ಧಂಕಡ್ ನನ್ನು ಸೇವೆಯಿಂದ ಅಮಾನತುಗೊಳಿಸಿದ್ದು, ಪ್ರಕರಣದ ಕುರಿತು ತನಿಖೆಗೆ ಆದೇಶಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com