ಚೀನಾದಿಂದ ವಿದ್ಯುತ್ ಉಪಕರಣಗಳ ಆಮದು ನಿಲ್ಲಿಸಿದ ಭಾರತ

ಗಡಿ ಪ್ರದೇಶದಲ್ಲಿ ಭಾರತದ ಭೂಭಾಗವನ್ನು ಅತಿಕ್ರಮಿಸುತ್ತಿರುವ ಚೀನಾಗೆ ಪಾಠ ಕಲಿಸಲು ಮುಂದಾಗಿರುವ ಭಾರತ ಅಲ್ಲಿನ ವಿದ್ಯುತ್ ಉಪಕರಣಗಳ ಆಮದನ್ನು ನಿಲ್ಲಿಸುತ್ತಿರುವುದಾಗಿ ಘೋಷಿಸಿದೆ. 
ಚೀನಾದಿಂದ ವಿದ್ಯುತ್ ಉಪಕರಣಗಳ ಆಮದು ನಿಲ್ಲಿಸಿದ ಭಾರತ
ಚೀನಾದಿಂದ ವಿದ್ಯುತ್ ಉಪಕರಣಗಳ ಆಮದು ನಿಲ್ಲಿಸಿದ ಭಾರತ

ನವದೆಹಲಿ: ಗಡಿ ಪ್ರದೇಶದಲ್ಲಿ ಭಾರತದ ಭೂಭಾಗವನ್ನು ಅತಿಕ್ರಮಿಸುತ್ತಿರುವ ಚೀನಾಗೆ ಪಾಠ ಕಲಿಸಲು ಮುಂದಾಗಿರುವ ಭಾರತ ಅಲ್ಲಿನ ವಿದ್ಯುತ್ ಉಪಕರಣಗಳ ಆಮದನ್ನು ನಿಲ್ಲಿಸುತ್ತಿರುವುದಾಗಿ ಘೋಷಿಸಿದೆ. ರಾಜ್ಯಗಳ ಇಂಧನ ಸಚಿವರೊಂದಿಗೆ ಸಭೆ ನಡೆಸಿದ ಬಳಿಕ ಕೇಂದ್ರ ಇಂಧನ ಸಚಿವ ಆರ್ ಕೆ ಸಿಂಗ್ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

"ಚೀನಾ ಹಾಗೂ ಪಾಕಿಸ್ತಾನಗಳ ಉಪಕರಣಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳುವಂತಿಲ್ಲ" ಎಂದು ರಾಜ್ಯಗಳಿಗೆ ಸೂಚನೆ ನೀಡಲಾಗಿದೆ ಎಂದು ಆರ್ ಕೆ ಸಿಂಗ್ ತಿಳಿಸಿದ್ದಾರೆ.

"ನಾವು ಎಲ್ಲವನ್ನೂ ಇಲ್ಲೇ ತಯಾರಿಸುತ್ತೇವೆ. ಭಾರತ 71,000 ಕೋಟಿ ರೂಪಾಯಿ ಮೌಲ್ಯದ ವಿದ್ಯುತ್ ಉಪಕರಣಗಳನ್ನು ಆಮದು ಮಾಡಿಕೊಂಡಿದೆ. ಈ ಪೈಕಿ ಚೀನಾದಿಂದ 21,000 ಕೋಟಿ ರೂಪಾಯಿ ಮೌಲ್ಯದ ವಿದ್ಯುತ್ ಕ್ಷೇತ್ರಕ್ಕೆ ಸಂಬಂಧಿಸಿದ ಉಪಕರಣಗಳಿವೆ ಎಂದು ಸಿಂಗ್ ಮಾಹಿತಿ ನೀಡಿದ್ದಾರೆ. ನಮ್ಮ ದೇಶದ ಭಾಗಗಳನ್ನು ಅತಿಕ್ರಮಣ ಮಾಡುವ ರಾಷ್ಟ್ರದಿಂದ ವಿದ್ಯುತ್ ಕ್ಷೇತ್ರಕ್ಕೆ ಸಂಬಂಧಿಸಿದ ಉಪಕರಣಗಳನ್ನು ಆಮದು ಮಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ, ಚೀನಾ ಹಾಗೂ ಪಾಕಿಸ್ತಾನಗಳಿಂದ ನಾವು ಏನನ್ನೂ ಆಮದು ಮಾಡಿಕೊಳ್ಳುವುದಿಲ್ಲ ಎಂದು ಆರ್ ಕೆ ಸಿಂಗ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com